Friday, June 14, 2024
spot_img
spot_img
spot_img
spot_img
spot_img
spot_img

ಲೋಕಸಭಾ election ಫಲಿತಾಂಶ : ಜನ್ಮದಿನದಂದೇ ಅಣ್ಣಾಮಲೈಗೆ ಸೋಲು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಲೋಕಸಭಾ ಚುನಾವಣಾ ರಣರಂಗಕ್ಕೆ ಎಂಟ್ರಿಯಾಗಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Annamalai) ಸೋತಿದ್ದಾರೆ. ಅದೂ ಕೂಡ ಅವರ ಹುಟ್ಟಹಬ್ಬದಂದೇ ಸೋತಿದ್ದಾರೆ ಎನ್ನಲಾಗಿದೆ.

ಹೀಗಾಗಿ ತಮಿಳುನಾಡಿದಲ್ಲಿ ಕಮಲ ಅರಳುವ ಮುನ್ನವೇ ಕಮರಿದೆ ಎಂದರೆ ತಪ್ಪಾಗಲ್ಲ. ಡಿಎಂಕೆ ಅಭ್ಯರ್ಥಿ ಗಣಪತಿ ಅಣ್ಣಾ ಮಲೈ ವಿರುದ್ಧ ಗೆದ್ದಿದ್ದಾರೆ (victory).

ಇದನ್ನು ಓದಿ : Lokasabha election : NDAಗೆ ಕಡಿಮೆ ಸ್ಥಾನ, ಹೃದಯಾಘಾತದಿಂದ BJP ಅಭಿಮಾನಿ ಸಾವು.!

ಇಲ್ಲಿ ಬಿಜೆಪಿ ಪಕ್ಷ ಒಂದು ಸೀಟ್ ಗೆಲ್ಲೋದು ಕಷ್ಟ ಅಂತ ಹೇಳಲಾಗುತ್ತಿತ್ತು. ಅದರಂತೆ ತಮಿಳುನಾಡಿನಲ್ಲಿ ಫಲಿತಾಂಶ ಬಂದಿದೆ.
ಅಣ್ಣಾಮಲೈ ಸೇರಿ ಇನ್ನೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹಲವು ಸಮೀಕ್ಷೆಗಳು (Surveys) ಹೇಳಿದ್ದವು. ಆದರೆ ತಮಿಳುನಾಡಿನಲ್ಲಿ ಬಿಜೆಪಿ ಸೋತಿದೆ.

ತಮಿಳುನಾಡಿಗೆ ಅಣ್ಣಾಮಲೈ ಎಂಟ್ರಿಯಾಗ್ತಿದ್ದಂತೆ ಅಲ್ಲಿ ಬಿಜೆಪಿ ಪಕ್ಷ ಕೂಡ ಹೆಸರು ಮಾಡೋಕೆ ಶುರು ಮಾಡಿತು. ಬಿಜೆಪಿ ಪಕ್ಷ ಪ್ಲ್ಯಾನ್‌ ಮಾಡಿಕೊಂಡೇ ಅಣ್ಣಾಮಲೈ ಎಂಬ ಅಸ್ತ್ರವನ್ನು ತಮಿಳುನಾಡಿಗೆ (Tamilnadu) ಕಳಿಸಿದ್ದರು.

ಅದರಂತೆ ಅಣ್ಣಾಮಲೈ ಬಿಜೆಪಿ ಪಕ್ಷಕ್ಕೆ ಬಲ ತಂದಿದ್ದರು. ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಎಡವಿದ್ದಾರೆ ಎನ್ನಬಹುದು.

ಅಣ್ಣಾಮಲೈ 2011ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದು , 2013ರಲ್ಲಿ ಪೊಲೀಸ್‌ ಹುದ್ದೆಯನ್ನು ಅಲಂಕರಿಸುತ್ತಾರೆ. ಕರ್ನಾಟಕದಿಂದ ವೃತ್ತಿ ಜೀವನ ಆರಂಭಿಸಿದ್ದ ಇವರು ದಕ್ಷ ಅಧಿಕಾರಿಯಾಗಿದ್ದರು (An efficient officer).

ಇದನ್ನು ಓದಿ : ಆಟವಾಡುತ್ತಿದ್ದ ಮಗುವನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದ ಮಂಗ ; ಆಶ್ಚರ್ಯಕರ ವಿಡಿಯೋ Viral.!

ಅಲ್ಲದೆ, ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಇವರು ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದರು.

ಸುಮಾರು 8 ವರ್ಷಗಳ ಕಾಲ ಪೊಲೀಸ್‌ ಹುದ್ದೆಯಲ್ಲಿದ್ದು, ನಂತರ ಸ್ವಯಂ ನಿವೃತ್ತಿ ಘೋಷಿಸುತ್ತಾರೆ. ʼವಿ ದಿ ಲೀಡರ್ಸ್‌ʼ ಎಂಬ ಸಂಘಟನೆಯನ್ನು ಹುಟ್ಟು ಹಾಕುವ ಅಣ್ಣಾಮಲೈ ನಂತರ ರಾಜಕೀಯ ರಂಗ ಪ್ರವೇಶಿಸುತ್ತಾರೆ. 2020ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದರು.

spot_img
spot_img
- Advertisment -spot_img