Friday, June 14, 2024
spot_img
spot_img
spot_img
spot_img
spot_img
spot_img

ರಸ್ತೆಯ ಮಧ್ಯೆ ಏಕಾಏಕಿ ಕಾಣಿಸಿಕೊಂಡ ದೈತ್ಯ ಹಾವು ; ಮುಂದೆನಾಯ್ತು.? ಈ Video ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಕುರಿತಾದ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.

ಅಂತೆಯೇ ದೈತ್ಯ ಹಾವೊಂದು (A giant snake) ರಸ್ತೆ ದಾಟಲು ಯತ್ನಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಇದನ್ನು ಓದಿ : IT : ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಟ್ರಾಫಿಕ್​​ ಮಧ್ಯೆ ಏಕಾಏಕಿ ಕಾಣಿಸಿಕೊಂಡ ಈ ದೈತ್ಯ ಹಾವು, ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ. ಬ್ರೆಜಿಲ್‌ನ (Brazil) ಪೋರ್ಟೊ ವೆಲ್ಹೋ ನಗರದ ಬಳಿ ಕಂಡು ಬಂದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇನ್ನೂ ಈ ಹಾವು ಸರಿ ಸುಮಾರು ನಾಲ್ಕು ಮೀಟರ್ ಉದ್ದ ಮತ್ತು 30 ಕೆಜಿ ತೂಕವಿರಬಹುದು ಎಂದು ಅಂದಾಜಿಸಲಾಗಿದೆ.

@Rainmaker1973 ಎಂಬ ಟ್ವಿಟರ್​ ಖಾತೆಯಲ್ಲಿ ಈ ಬೃಹತ್​​ ಗಾತ್ರದ ಹಾವಿನ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಸದ್ಯ ಈ ವಿಡಿಯೋ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.

ವೈರಲ್​​ ವಿಡಿಯೋದಲ್ಲಿ ಹಾವು ನಿಧಾನವಾಗಿ ತೆವಳುತ್ತಿದೆ. ಈ ವೇಳೆ ಅಲ್ಲಿ ವಾಹನಗಳು ಚಲಿಸುತ್ತಿವೆ. ಅಲ್ಲಿದ್ದ ಜನರು ಕಂಡು ವಾಹನ ಸವಾರರು ಸಹ ನಿಧಾನವಾಗಿ ಕಾರು ಚಲಾಯಿಸುತ್ತಿದ್ದಾರೆ.

ಇದನ್ನು ಓದಿ : ಹೃದಯವನ್ನು ಒಂದ್ ಸೆಕೆಂಡ್ ಸ್ತಬ್ಧಗೊಳ್ಳುವಂತೆ ಮಾಡುತ್ತದೆ ಈ Viral Video.!

ಆ ಬಳಿಕ ಹಾವು ರಸ್ತೆ ದಾಟಿ ಕಾಡಿನೊಳಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ದೈತ್ಯ ಹಾವು ಪ್ರತ್ಯಕ್ಷವಾಗುತ್ತಿದ್ದಂತೆ ಸಾಕಷ್ಟು ಜನರು ಸೇರಿದ್ದು, ತಮ್ಮ ಮೊಬೈಲ್​ ಮೂಲಕ ಈ ಹಾವಿನ ವಿಡಿಯೋ ಸೆರೆಹಿಡಿದ್ದಿದ್ದಾರೆ.

ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹರಿದಾಡುತ್ತಿದೆ.

spot_img
spot_img
- Advertisment -spot_img