Thursday, April 25, 2024
spot_img
spot_img
spot_img
spot_img
spot_img
spot_img

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ; ಅರ್ಜಿ ಸಲ್ಲಿಸಲು ಡೈರೆಕ್ಟ್ Link ಇಲ್ಲಿದೆ ನೋಡಿ..!

spot_img

ಜನಸ್ಪಂದನ ನ್ಯೂಸ್, ಸರ್ಕಾರಿ ಸೌಲಭ್ಯಗಳು : ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಆಹ್ವಾನಿಸಿದ್ದು,  ಆಸಕ್ತಿ ಇರುವ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಯಾವೆಲ್ಲ ಅರ್ಹತೆಗಳು ಇರಬೇಕು. ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ ಹಾಗೂ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು  ನೀಡಿರುತ್ತೇನೆ.

ಇದನ್ನು ಓದಿ : Miracle : ಜೈನ ಮುನಿಗಳ ಮಂತ್ರ ಪಠಣೆ, ಎದ್ದು ಕುಳಿತ ಗಾಯಗೊಂಡ ಬಸವ ; ಪವಾಡದ ವಿಡಿಯೋ ವೈರಲ್..!

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ

ಸನ್‌ 2022 ರಲ್ಲಿ ಜಾರಿಗೆ ಬಂದ ಈ ಯೋಜನೆ, ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಅದರಲ್ಲೂ ಸ್ವಂತ ಉದ್ಯಮ ಮಾಡಲು ಬಯಸುವವರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದೇ ಹೇಳಬಹುದು.

ಇದೀಗ ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಉಚಿತ ಹೊಲಿಗೆ ಯಂತ್ರ (free sewing machine) ಪಡೆದುಕೊಳ್ಳಲು ಸರ್ಕಾರ ಅರ್ಜಿ ಆಹ್ವಾನಿಸಿದೆ.

ವಿಶೇಷ ಸೂಚನೆ  :

 • ಅರ್ಜಿ ಸಲ್ಲಿಸಿದ ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ರೂ.15,000 ಗಳ ಇ – ವೋಚರ್ ಅಥವಾ ರೂಪೇ ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾಗುತ್ತದೆ.
 • ಇದರ ಜೊತೆಗೆ 5 ರಿಂದ 7 ದಿನಗಳ ಟ್ರೈನಿಂಗ್ ಕೂಡ ನೀಡಲಾಗುವುದು.
 • ಬಡ್ಡಿ ರಹಿತ ಇಲ್ಲವೇ ಅತಿ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ (Loan) ಪಡೆದುಕೊಳ್ಳಬಹುದು.

ಇದನ್ನು ಓದಿ : ವೈರಲ್‌ ವಿಡಿಯೋ : ರೂ.33,000 ದಂಡ ಸಾಕಾಗಲಿಲ್ಲ ಅಂತ ಮತ್ತೆ ಹೆಚ್ಚುವರಿಯಾಗಿ ರೂ.47,500 ಫೈನ್ ಹಾಕಿದ ಟ್ರಾಫಿಕ್ ಪೊಲೀಸ್..!

ಯಾವೆಲ್ಲ ಅರ್ಹತೆಗಳು :

 • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತ ದೇಶದ ನಿವಾಸಿ ಆಗಿರಬೇಕು.
 • ಅರ್ಜಿ ಸಲ್ಲಿಸುವ ಮಹಿಳೆಗೆ 18 ವರ್ಷ ವಯಸ್ಸು ಇರಬೇಕು.
 • ಕಳೆದ 5 ವರ್ಷಗಳಿಂದ ಸರ್ಕಾರದ ಯಾವುದೇ ಯೋಜನೆಯಿಂದ ಹೊಲಿಗೆ ಯಂತ್ರ ಪಡೆದುಕೊಂಡಿರಬಾರದು ಎಂದು ತಿಳಿದುಬಂದಿದೆ.
 • ಮನೆಯಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಅವಕಾಶ ಕಲ್ಪಿಸಿ ಕೊಡಲಾಗಿದೆ.
 • ಸರ್ಕಾರಿ ನೌಕರರಿಗೆ ಹಾಗೂ ಆದಾಯ ತೆರಿಗೆ(Income Tax)ಪಾವತಿ ಮಾಡುವವರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಎಂದು ಕೂಡ ತಿಳಿಸಲಾಗಿದೆ.

ಬೇಕಾಗಿರುವ ದಾಖಲೆಗಳು :

 • ಆಧಾರ್ ಕಾರ್ಡ್(Adhar Card).
 • ರೇಷನ್ ಕಾರ್ಡ್(Ration Card).
 • ಆದಾಯ ಪ್ರಮಾಣ ಪತ್ರ(Income Certificate).
 • ಜಾತಿ ಪ್ರಮಾಣ ಪತ್ರ(Caste Certificate).
 • ಹೊಲಿಗೆ ಟ್ರೈನಿಂಗ್ (Training) ಆಗಿರುವ ಬಗ್ಗೆ ಅದರ ಸರ್ಟಿಫಿಕೇಟ್.
 • ಬ್ಯಾಂಕ್ ಖಾತೆಯ ವಿವರ (Bank Account Details).
 • ಮೊಬೈಲ್ ಸಂಖ್ಯೆ (Mobile number).

ಇದನ್ನು ಓದಿ : HAL ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ; ಈ ಕೂಡಲೇ ಅರ್ಜಿ ಸಲ್ಲಿಸಿ.!

ಅರ್ಜಿ ಸಲ್ಲಿಸುವುದು ಹೇಗೆ :

ಸ್ನೇಹಿತರೆ,ಪ್ರಧಾನಮಂತ್ರಿಯ ವಿಶ್ವಕರ್ಮ ಯೋಜನೆ (PM Vishwakarma Yojna) ಯಡಿಯಲ್ಲಿ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳುವುದಕ್ಕಾಗಿ, ಆನ್‌ಲೈನ್ (Online) ಮೂಲಕ ಹಾಗೂ ಆಫ್‌ಲೈನ್ (Offline) ಮೂಲಕವೂ ಕೂಡ ಅರ್ಜಿ ಸಲ್ಲಿಸಬಹುದು ಎಂದು ಕೂಡ ತಿಳಿಸಲಾಗಿದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ :

https://pmvishwakarma.gov.in/Login

ಈ ವೆಬ್‌ಸೈಟ್‌ಗೆ ಲಾಗಿನ್ ಆಗಿ. ಮಹಿಳಾ ವಿಭಾಗದಲ್ಲಿ ವಿಶ್ವಕರ್ಮ ಯೋಜನೆ ಆಯ್ಕೆ ಮಾಡಿಕೊಳ್ಳಿ.ನಂತರ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಫಾರಂ ನಿಮಗೆ ಕಾಣಿಸುತ್ತದೆ. ಅದನ್ನು ನೀವು ಭರ್ತಿ ಮಾಡಿ. ಸರಿಯಾದ ದಾಖಲೆಗಳನ್ನು ನೀಡಿದರೆ ನಿಮ್ಮ ಅರ್ಜಿ ಸಂಪೂರ್ಣಗೊಳ್ಳುತ್ತದೆ.

ಇನ್ನು ನೀವು ಆಫ್‌ಲೈನ್ (Offline) ಮೂಲಕ ಅರ್ಜಿ ಸಲ್ಲಿಸುವುದಾದರೆ, ಹತ್ತಿರದ ಗ್ರಾಮ ಪಂಚಾಯತ್ (Grama Panchayat) ಅಥವಾ CSC ಕೇಂದ್ರಕ್ಕೆ ಹೋಗಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಫಾರ್ಮ ಅನ್ನು ಭರ್ತಿ ಮಾಡಿ. ಅಗತ್ಯ ಇರುವ ದಾಖಲೆಗಳನ್ನು ಹಾಗೂ ಫೋಟೋ ಜೆರಾಕ್ಸ್ ನೀಡಿ ಅರ್ಜಿ ಸಲ್ಲಿಸಬಹುದು.

 ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img