Thursday, April 25, 2024
spot_img
spot_img
spot_img
spot_img
spot_img
spot_img

ಧಾರ್ಮಿಕ ಮುಖ್ಯಸ್ಥನನ್ನು ಜಸ್ಟ್ ಮೂರೇ ಸೆಕೆಂಡಿನಲ್ಲಿ ಗುಂ*ಡಿಕ್ಕಿ ಹ*ತ್ಯೆ ; ಕೃತ್ಯ CCTV ಯಲ್ಲಿ ಸೆರೆ..!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಗುರುವಾರ ಬೆಳಗ್ಗೆ ದುಷ್ಕರ್ಮಿಗಳಿಬ್ಬರು ಉಧಮ್ ಸಿಂಗ್ ನಗರದಲ್ಲಿ ಧಾರ್ಮಿಕ ಮುಖ್ಯಸ್ಥ (religious leader) ನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿ ಬೈಕ್‌ ನಲ್ಲಿ ಪರಾರಿಯಾಗಿರುವ ಘಟನೆ ನಡೆದಿದೆ.

ದುಷ್ಕರ್ಮಿಗಳಿಬ್ಬರು ಗುಂಡಿಗೆ ಬಲಿಯಾದ ಧಾರ್ಮಿಕ ಮುಖ್ಯಸ್ಥರನ್ನು ಡೇರಾ ಕರಸೇವಾ ಪ್ರಮುಖ್ ಬಾಬಾ ತಾರ್ಸೆಮ್ ಸಿಂಗ್ (Baba Tarsem Singh) ಎಂದು ತಿಳಿದು ಬಂದಿದೆ. ಡೇರಾದ ತೆರೆದ ಗೇಟ್‌ಗಳ ಮೂಲಕ ಬೈಕ್ ಏರಿ ಬಂದ ಇಬ್ಬರು ದಾಳಿಕೋರರು, ಮೂರೇ ಮೂರು ಸೆಕೆಂಡ್‌ಗಳಲ್ಲಿ ಈ ಹತ್ಯಾಕಾಂಡ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು.

ಇದನ್ನು ಓದಿ : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ವಾ ; ಹೀಗೆ Check ಮಾಡಿಕೊಳ್ಳಿ.!

ಗುರುವಾರ ಬೆಳಗ್ಗೆ 6 ಗಂಟೆಯ ಸುಮಾರು ಬೈಕ್​​ನಲ್ಲಿ ಬಂದ ಅಪರಿಚಿತರು, ಕುರ್ಚಿಯ ಮೇಲೆ ಕುಳಿತಿದ್ದ ಬಾಬಾ ತಾರ್ಸೆಮ್ ಸಿಂಗ್ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ತಮ್ಮ ಬೈಕ್​ (Bike) ಸಹಿತ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಗುಂಡಿಕ್ಕಿ ಹತ್ಯೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೇ ಸಿಸಿಟಿವಿ (CCTV) ದೃಶ್ಯಗಳ ಆಧಾರ ಮೇರೆಗೆ ಪೊಲೀಸರು ಆರೋಪಿಗಳ ಹಿಂದೆ ಬಿದ್ದಿದ್ದಾರೆ.

ಬಾಬಾ ತಾರ್ಸೆಮ್ ಸಿಂಗ್ ಮೇಲೆ ಬೈಕ್​​ ಸವಾರನ ಹಿಂದೆ ಕುಳಿತಿದ್ದ ದಾಳಿಕೋರ ದೊಡ್ಡ ರೈಫಲ್ ಹಿಡಿದು ಎರಡು ಸುತ್ತು ಗುಂಡು ಹಾರಿಸಿದ್ದಾನೆ. ತಾನು ಬಂದ ಕೆಲಸ ಮುಗಿಯುತ್ತಿದ್ದಂತೆ ದುಷ್ಕರ್ಮಿಗಳು ಬೈಕ್​ ಸಹಿತ ಅಲ್ಲಿಂದ ಪರಾರಿಯಾಗಿದ್ದಾರೆ. ಗುಂಡೆಟಿನಿಂದ (from a gunshot) ಗಾಯಗೊಂಡ ಬಾಬಾ ತಾರ್ಸೆಮ್ ಸಿಂಗ್ ಅವರನ್ನು ತಕ್ಷಣ ಖತೀಮಾದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಅವರು ಅಲ್ಲಿಯೇ ಮೃತಪಟ್ಟಿರುವುದಾಗಿ ಉಧಮ್ ಸಿಂಗ್ ನಗರ ಎಸ್‌ಎಸ್‌ಪಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : HAL ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ; ಈ ಕೂಡಲೇ ಅರ್ಜಿ ಸಲ್ಲಿಸಿ.!

ಕೊಲೆಗೀಡಾದ ಬಾಬಾ ತಾರ್ಸೆಮ್ ಸಿಂಗ್ ಅವರು ಸದಾ ಸಮಾಜಸೇವೆ, ಜನರ ಸಮಸ್ಯೆಗಳ ಪರ ನಿಲ್ಲುತ್ತಿದ್ದರು. ತಮ್ಮ ಸರಳ ಜೀವನದಿಂದ ಖ್ಯಾತಿ ಸಹ ಗಳಿಸಿಕೊಂಡಿದ್ದರು. ಸಾವಿರಾರು ಭಕ್ತರನ್ನು ಹೊಂದಿದ್ದರು. ಪ್ರಾರ್ಥನಾ ಮಂದಿರ (Temple) ದ ಪುನರ್​ ನಿರ್ಮಾಣಕ್ಕೆ ತಮ್ಮ ಜೀವನವನ್ನೇ ಅವರು ಮುಡಿಪಾಗಿಟ್ಟಿದ್ದರು. ಹಾಗಾಗಿ ಜನರು ಅವರನ್ನ ಕಾಣಲು ದೂರುದೂರಿಂದ ಆಗಮಿಸುತ್ತಿದ್ದರು.

ಕೊಲೆಗೀಡಾದ ಬಾಬಾ ತಾರ್ಸೆಮ್ ಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ತನಿಖೆ ನಡೆಸುವ ನಿಟ್ಟಿನಲ್ಲಿ ಎಸ್​​ಐಟಿ (SIT) ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.

spot_img
spot_img
spot_img
- Advertisment -spot_img