Thursday, April 25, 2024
spot_img
spot_img
spot_img
spot_img
spot_img
spot_img

5 ವರ್ಷದ ಬಾಲಕಿಯ ಮೇಲೆ ಅ*ತ್ಯಾ*ಚಾರವೆಸಗಿ ಕೊ*ಲೆ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೊಬ್ಬ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ (murder) ಮಾಡಿ ಬಳಿಕ ಆಕೆಯ ದೇಹವನ್ನು ಕಾರ್ಖಾನೆಯಲ್ಲಿ ಬಚ್ಚಿಟ್ಟ ಘಟನೆ ದೆಹಲಿಯ ಬವಾನಾ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಟೀ ಅಂಗಡಿ ನಡೆಸುತ್ತಿರುವ ಬಾಲಕಿಯ ಪೋಷಕರು, ಸಂಜೆ 5 ಗಂಟೆ ಸುಮಾರಿಗೆ ಆಕೆಯನ್ನು ಕೊನೆಯ ಬಾರಿಗೆ ನೋಡಿದ್ದೇವೆ. ಅವಳನ್ನು ಹುಡುಕಲು (search) ಪ್ರಯತ್ನಿಸಿದ್ದು, ಇಲ್ಲಿಯವರೆಗೆ ಸಿಕ್ಕಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನು ಓದಿ : Miracle : ಜೈನ ಮುನಿಗಳ ಮಂತ್ರ ಪಠಣೆ, ಎದ್ದು ಕುಳಿತ ಗಾಯಗೊಂಡ ಬಸವ ; ಪವಾಡದ ವಿಡಿಯೋ ವೈರಲ್..!

ಈ ಕುರಿತು ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅವುಗಳಲ್ಲಿ ಒಂದರಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಹುಡುಗಿ ನಡೆದುಕೊಂಡು ಹೋಗುವುದು ಕಾಣಿಸಿದೆ. ಬಾಲಕಿಯ ಪೋಷಕರು (parents) ವ್ಯಕ್ತಿಯನ್ನು ಗುರುತಿಸಿ ಆತ ತೋಟನ್ ಎಂದು ಹೇಳಿದ್ದಾರೆ. ಆತನನ್ನು ಬಂಧಿಸಲು ಪೊಲೀಸರು ತೋಟನ್‌ನ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿದ್ದರು.

ಆದರೆ, ಅಷ್ಟರಲ್ಲಾಗಲೇ ಆತ ಎಸ್ಕೇಪ್ ಆಗಿದ್ದ. ಆತನ ಬಗ್ಗೆ ಗೊತ್ತಿರುವ ಕೆಲವು ಕಾರ್ಮಿಕರನ್ನು ವಿಚಾರಿಸಿದಾಗ (enquiry) ತೋಟನ್ ನವದೆಹಲಿ ರೈಲು ನಿಲ್ದಾಣದಿಂದ ಹೌರಾಕ್ಕೆ ಪೂರ್ವ ಎಕ್ಸ್‌ಪ್ರೆಸ್ ಹತ್ತಲು ಹೋಗುತ್ತಿದ್ದನೆಂದು ಪೊಲೀಸರಿಗೆ ತಿಳಿದು ಬಂದಿದೆ ಎಂದು ವರದಿಯಾಗಿದೆ.

ಇದನ್ನು ಓದಿ : ಲೋಕಸಭೆ ಚುನಾವಣೆ ; ಅಕ್ರಮವಾಗಿ ಸಾಗಿಸುತ್ತಿದ್ದ 4 ಕೋಟಿಗೂ ಅಧಿಕ ‘ಚಿನ್ನಾಭರಣ’ ಜಪ್ತಿ.!

ಸದ್ಯ ಆತನನ್ನು ಬೆನ್ನಟ್ಟಿದ್ದ ಪೊಲೀಸರು ರೈಲು ಬರುತ್ತಿದ್ದಂತೆಯೇ ಅದರಲ್ಲಿ ಆರೋಪಿಯನ್ನು ಹುಡುಕಿದ್ದು ಅಲ್ಲಿ ಆತ ಸಿಕ್ಕಿಬಿದ್ದಿದ್ದಾನೆ‌.

ಆರೋಪಿ ತೋಟನ್ ರಾತ್ರಿ 7:30 ರ ಸುಮಾರಿಗೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಂದು (rape & murder) ಶವವನ್ನು ಬವಾನಾದ ಕಾರ್ಖಾನೆಯಲ್ಲಿ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ಬಳಿಕ ಬಾಲಕಿಯ ಶವ ಪತ್ತೆಯಾಗಿದ್ದು, ಬ್ಲೇಡ್ ಹಾಗೂ ಇಟ್ಟಿಗೆ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

spot_img
spot_img
spot_img
- Advertisment -spot_img