Thursday, April 25, 2024
spot_img
spot_img
spot_img
spot_img
spot_img
spot_img

Dehali : ಮೆಟ್ರೋದಲ್ಲಿ ರಂಗಿನ ಓಕುಳಿ ಆಡಿ ಅಸಭ್ಯವಾಗಿ ವರ್ತಿಸಿದ ಯುವತಿಯರು ಜೈಲು ಕಂಬಿ ಹಿಂದೆ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ದೆಹಲಿಯ ಮೆಟ್ರೋದಲ್ಲಿ ಹೋಳಿ ಆಚರಣೆ ಮಾಡುವ ನೆಪದಲ್ಲಿ ಯುವತಿಯರಿಬ್ಬರೂ ಪರಸ್ಪರ ಬಣ್ಣ ಹಚ್ಚುತ ತಬ್ಬಿ ಮುದ್ದಾಡುತ್ತ ಅಸಭ್ಯ (rudely) ವಾಗಿ ವರ್ತಿಸಿದ ವಿಡಿಯೋ ಭಾರಿ ವೈರಲ್‌ ಆಗಿತ್ತು.

ಮೆಟ್ರೋ (Metro) ದಲ್ಲಿ ರಂಗಿನ ಓಕುಳಿ ಆಡಿದ ಯುವತಿಯರ ವಿಡಿಯೋ ವೈರಲ್‌ ಆದ ಹಿನ್ನಲೆಯಲ್ಲಿ ಸಧ್ಯ ಆ ಯುವತಿಯರನ್ನು ದೆಹಲಿ ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ. ಇಂಥ ಅಪೇಕ್ಷಾರ್ಹ ರೀಲ್ಸ್‌ ಮಾಡುವವರಿಗೆ ಕಠಿಣವಾದ ಶಿಕ್ಷೆಯಾದರೆ ಮಾತ್ರ ಈ ರೀತಿಯ ಕೀಲೂ ಮಟ್ಟದ ರೀಲ್ಸ್‌ ಮಾಡುವವರನ್ನು ತಡೆಯಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ. 

Miracle : ಜೈನ ಮುನಿಗಳ ಮಂತ್ರ ಪಠಣೆ, ಎದ್ದು ಕುಳಿತ ಗಾಯಗೊಂಡ ಬಸವ ; ಪವಾಡದ ವಿಡಿಯೋ ವೈರಲ್..!

ವೈರಲ್‌ ಆದ ವಿಡಿಯೋದಲ್ಲೇನಿದೆ :

ಇಬ್ಬರು ಯುವತಿಯರು ದೆಹಲಿ ಮೆಟ್ರೋ ಹತ್ತಿದ್ದಾರೆ. ರೈಲು ಚಲಿಸುತ್ತಲೇ ಕೆಳಗೆ ಕುಳಿತ ಅವರು ಪರಸ್ಪರ ಬಣ್ಣ ಹಚ್ಚಿಕೊಂಡಿದ್ದಾರೆ. ಇಬ್ಬರು ಹುಡುಗಿಯರು ನೆಲದ ಮೇಲೆ ಕುಳಿತಿರುವುದು ಮತ್ತು ನೆಲದ ಮೇಲೆ ಬಣ್ಣ ಹರಡಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. 

ಆಕೆಯ ಕೆನ್ನೆಗೆ ಈಕೆ, ಈಕೆಯ ಕೆನ್ನೆಗೆ ಆಕೆ ಬಣ್ಣ ಹಚ್ಚುವುದರ ಜೊತೆ ಜೊತೆಗೆ ಇಬ್ಬರೂ ಮಲಗಿ ರೊಮ್ಯಾನ್ಸ್‌ ಮಾಡುವುದು, ಮುದ್ದಾಡುವುದು, ಮುತ್ತು ಕೊಡುವುದು ಸೇರಿದಂತೆ ಬಹಿರಂಗವಾಗಿಯೇ ಅಸಭ್ಯವಾಗಿ ವರ್ತಿಸಿದ್ದಾರೆ.

ಇವರ ಹುಚ್ಚಾಟವನ್ನು ಕಂಡ ಪ್ರಯಾಣಿಕರು, ಮನಸ್ಸಲ್ಲೇ ಹಿಡಿ ಶಾಪ ಹಾಕಿದ್ದಾರೆ. ಆದರೆ, ಪ್ರಯಾಣಿಕರು ಏನೆಂದುಕೊಳ್ಳುತ್ತಾರೋ, ಅವರಿಗೆ ತೊಂದರೆಯಾಗುತ್ತದೆಯೋ ಎಂಬುದರ ಪರಿವೇ ಇಲ್ಲದೆ ಇಬ್ಬರು ಯುವತಿಯರು ಹುಚ್ಚಾಟ ಮಾಡಿದ್ದಾರೆ.

Health : ಬೆಳಿಗ್ಗೆ ಎದ್ದ ಕೂಡಲೇ ಈ ಲಕ್ಷಣಗಳು ಕಂಡುಬರುತ್ತಿವೆಯೇ.? ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು.?

ಈ ವೀಡಿಯೊವನ್ನು @ThePlacardGuy ಹೆಸರಿನ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ‘ಯಾವುದೇ ಕಾನೂನಿನ ಅಗತ್ಯವಿಲ್ಲ. 15 ಸೆಕೆಂಡ್‌ಗೆ 1 ಲಕ್ಷ ರೂಪಾಯಿ ಶುಲ್ಕ ವಿಧಿಸಿದರೆ ಸಾಕು’ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ‘ಅಂತಹವರನ್ನು ಮೆಟ್ರೋದಲ್ಲಿ ನಿಷೇಧಿಸಬೇಕು’ ಎಂದು ಮತ್ತೊಬ್ಬರು ಬರೆದಿದ್ದಾರೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img