Friday, July 11, 2025

Janaspandhan News

HomeGeneral NewsForest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!
spot_img
spot_img

Forest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!

- Advertisement -

ಜನಸ್ಪಂದನ ನ್ಯೂಸ್‌, ಚಿಕ್ಕಮಗಳೂರು : ಫಾರೆಸ್ಟ್ ಗಾರ್ಡ್ (forest guard) ಓರ್ವರು ಕಳೆದ 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲೆಯ ಕಡೂರು (Kadur) ತಾಲೂಕಿನ ನೀಲಗಿರಿ ಪ್ಲಾಂಟೇಶನ್​ನಲ್ಲಿ ನಡೆದಿದೆ.

ಕಳೆದ 6 ದಿನಗಳಿಂದ ನೂರಾರು ಅರಣ್ಯ ಸಿಬ್ಬಂದಿ ಜೊತೆ ಸೇರಿ ಪೊಲೀಸರು ಸಹ ನೀಲಗಿರಿ ಪ್ಲಾಂಟೇಶನ್ ಮತ್ತು ಅರಣ್ಯದಲ್ಲಿ ಹಗಲು ರಾತ್ರಿ ಹುಡುಕಾಟ ಕೂಡ ನಡೆಸಿದರೂ ಫಾರೆಸ್ಟ್ ಗಾರ್ಡ್ (forest guard) ಸುಳಿವು ಮಾತ್ರ ಇನ್ನು ಸಿಗುತ್ತಿಲ್ಲ.

ಹೀಗೆ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್‌ (forest guard) ನನ್ನು 33 ವರ್ಷದ ಶರತ್ ಎಂದು, ಇವರು ಕೊಡಗು ಜಿಲ್ಲೆಯ ಕಾಲೂರು ಗ್ರಾಮದ ನಿವಾಸಿ. ಶರತ್‌ ಕಳೆದ‌ 6 ತಿಂಗಳ ಹಿಂದೆ ಮಂಗಳೂರಿನ ಸುಳ್ಯದಿಂದ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಅರಣ್ಯ ವಿಭಾಗಕ್ಕೆ ವರ್ಗಾವಣೆಯಾಗಿ ಬಂದಿದ್ದರು.

ಇದನ್ನೂ ಓದಿ : ಆಸ್ಪತ್ರೆಯಲ್ಲಿಯೇ 19 ವರ್ಷದ ವಿದ್ಯಾರ್ಥಿನಿ ಎದೆಯ ಮೇಲೆ ಕುಳಿತು throat ಸೀಳಿದ ಯುವಕ.!

ಫಾರೆಸ್ಟ್ ಗಾರ್ಡ್‌ (forest guard) ಶರತ್, ಜೂನ್ 24ರಂದು ಸಖರಾಯಪಟ್ಟಣ ಅರಣ್ಯದ ನೀಲಗಿರಿ ಪ್ಲಾಂಟೇಶನ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಥಳದಿಂದ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತದೆ. ಇದೀಗ ಫಾರೆಸ್ಟ್ ಗಾರ್ಡ್‌ (forest guard) ಶರತ್ ಬಳಸುತ್ತಿದ್ದ ಬೈಕ್‌ ನೀಲಗಿರಿ ಪ್ಲಾಂಟೇಶನ್ ಸಮೀಪದ ಅರಣ್ಯದಲ್ಲಿ ಪತ್ತೆಯಾದರೆ, ಬೈಕ್ ಸಿಕ್ಕ ಸ್ಥಳದಿಂದ ಎರಡು ಕಿಮೀ ದೂರದಲ್ಲಿ ಬಟ್ಟೆ ಸಿಕ್ಕಿದೆ.

ಹೀಗೆ ಬೈಕ್ ಮತ್ತು ಬಟ್ಟೆ ಸಿಕ್ಕಿ ಹಿನ್ನಲೆಯಲ್ಲಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್‌ (forest guard) ಬಗ್ಗೆ ನೂರಾರು ಅನುಮಾನಗಳು ಮೂಡಿವೆ. ಇನ್ನು ಶರತ್ ನಾಪತ್ತೆ ಸಂಬಂಧ ಪೋಷಕರು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಟ್ಟೆ ಸಿಕ್ಕ ಸ್ಥಳದಲ್ಲೇ ಮೊಬೈಲ್ ಕೂಡ ಪತ್ತೆಯಾಗಿದೆ. ಬೈಕ್, ಮೊಬೈಲ್ ಮತ್ತು ಬಟ್ಟೆ ಮಾತ್ರ ಸಿಕಿದ್ದು, ನಾಪತ್ತೆಯಾದ ಫಾರೆಸ್ಟ್ ಗಾರ್ಡ್‌ (forest guard) ಬಗ್ಗೆ ಯಾವುದೇ ಸುಳಿವು ಮಾತ್ರ ಇನ್ನು ಸಿಕ್ಕಿಲ್ಲ. ‌ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಸಖರಾಯಪಟ್ಟಣ ಪೊಲೀಸರು ಹಗಲು ರಾತ್ರಿ ಹುಡುಕಾಟ ನಡೆಸಿದರೂ ಸಹ ನಾಪತ್ತೆಯಾಗಿರುವ ಶರತ್ ಪತ್ತೆಯಾಗಿಲ್ಲ.

ಇದನ್ನೂ ಓದಿ : Astrology : ಹೇಗಿದೆ ಗೊತ್ತಾ.? ಜುಲೈ 02 ರ ದ್ವಾದಶ ರಾಶಿಗಳ ಫಲಾಫಲ.!

ನಾಪತ್ತೆಯಾಗಿರುವ ಶರತ್ ಪತ್ತೆಗಾಗಿ ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿ ಮತ್ತು ಸಖರಾಯಪಟ್ಟಣ ಪೊಲೀಸರು ಹಗಲು ರಾತ್ರಿ ಹುಡುಕಾಟ ನಡೆಸಿದ್ದಾರೆ. ಇವರೆಗೆ ಬೈಕ್, ಬಟ್ಟೆ ಮಾತ್ರ ಪತ್ತೆಯಾಗಿದ್ದು, ಶರತ್ ಸುಳಿವು ಮಾತ್ರ ಸಿಕ್ಕಿಲ್ಲ.

ಈ ಮಧ್ಯ ನಾಪತ್ತೆಯಾಗಿರುವ ಶರತ್ ಪತ್ತೆಗಾಗಿ ಡ್ರೋನ್ ಕ್ಯಾಮರಾ ಮೂಲಕ ಹುಡುಕಾಟ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. 6 ದಿನಗಳಿಂದ ಫಾರೆಸ್ಟ್ ಗಾರ್ಡ್‌ (forest guard) ಪತ್ತೆಯಾಗಿರದ ಪರಿಣಾಮ ಚಿರತೆ, ಕರಡಿಗಳಿರುವ ಸಖರಾಯಪಟ್ಟಣ ಅರಣ್ಯ ವಲಯದಲ್ಲಿ ಕಾಡು ಪ್ರಾಣಿಗಳ ದಾಳಿ ನಡೆದಿದೆಯಾ ಎಂಬ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ.

IBPS ನಲ್ಲಿ ಖಾಲಿ ಇರುವ 1,007 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಜನಸ್ಪಂದನ ನ್ಯೂಸ್‌, ನೌಕರಿ : ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ನಲ್ಲಿ ಖಾಲಿ ಇರುವ 1,007 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS), ಐಟಿ ಅಧಿಕಾರಿ, ಕೃಷಿ ಕ್ಷೇತ್ರ ಅಧಿಕಾರಿ, ರಾಜಭಾಷಾ ಅಧಿಕಾರಿ, ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ/ಸಿಬ್ಬಂದಿ ಅಧಿಕಾರಿ ಮತ್ತು ಮಾರ್ಕೆಟಿಂಗ್ ಅಧಿಕಾರಿ ಸೇರಿದಂತೆ ವಿವಿಧ ತಜ್ಞ ಅಧಿಕಾರಿ ಹುದ್ದೆಗಳಲ್ಲಿ 1,007 ಹುದ್ದೆಗಳಿಗೆ IBPS ಸ್ಪೆಷಲಿಸ್ಟ್ ಅಧಿಕಾರಿ (SO) XV ನೇಮಕಾತಿ 2025 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 01 ರ ದ್ವಾದಶ ರಾಶಿಗಳ ಫಲಾಫಲ.!
ಹುದ್ದೆಯ ವಿವರಗಳು ಮತ್ತು ಅರ್ಹತೆ :
ಹುದ್ದೆಯ ಹೆಸರು ಒಟ್ಟು ಹುದ್ದೆಗಳು ಅರ್ಹತೆ
ಮಾರ್ಕೆಟಿಂಗ್ ಅಧಿಕಾರಿ (MO) 350 MMS / MBA / PGDBA / PGDBM / PGPM / PGDM in Marketing
ಕೃಷಿ ಕ್ಷೇತ್ರ ಅಧಿಕಾರಿ (AFO) 310 4-Year Degree in Agriculture or equivalent (e.g., Horticulture, Animal Husbandry)
ರಾಜಭಾಷಾ ಅಧಿಕಾರಿ 78 Master’s Degree in Hindi with English as a subject at Degree level OR Master’s in Sanskrit with Hindi and English as subjects at Degree level
ಕಾನೂನು ಅಧಿಕಾರಿ 56 Degree in Law and enrolled with Bar Council
ಮಾನವ ಸಂಪನ್ಮೂಲ/ಸಿಬ್ಬಂದಿ ಅಧಿಕಾರಿ 10 PG Degree/Diploma in Personnel Management / Industrial Relations / HR / HRD / Social Work / Labour Law
ಐಟಿ ಅಧಿಕಾರಿ 203 Graduate with DOEACC ‘B’ Level OR B.Tech in CS/IT/ECE OR PG in ECE/CS/IT
ಒಟ್ಟು ಹುದ್ದೆಗಳು : 1,007
ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಕುರಿತಾದ ಮಾಹಿತಿ :
  • ಇಲಾಖೆ ಹೆಸರು : ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ
  • ಹುದ್ದೆಗಳ ಸಂಖ್ಯೆ : 1‌,007.
  • ಹುದ್ದೆಗಳ ಹೆಸರು :  ತಜ್ಞ ಅಧಿಕಾರಿ (ಐಟಿ, ಕೃಷಿ, ರಾಜಭಾಷಾ, ಕಾನೂನು, ಮಾನವ ಸಂಪನ್ಮೂಲ, ಮಾರುಕಟ್ಟೆ).
  • ಉದ್ಯೋಗ ಸ್ಥಳ : All India
  • ಅಪ್ಲಿಕೇಶನ್ ಮೋಡ್ : Online ಮೋಡ್.
ಇದನ್ನು ಓದಿ : Gokak : ಪ್ರೇಮಿಗಳಿಬ್ಬರು ನೇಣಿಗೆ ಶರಣು.!
 ವೇತನ ಶ್ರೇಣಿ :
  • ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ನೇಮಕಾತಿ ಅಧಿಸೂಚನೆಯ ಪ್ರಕಾರ,
  • ಆಯ್ಕೆಯಾದ ಅಭ್ಯುರ್ಥಿಗಳಿಗೆ ರೂ.48,480/- ರಿಂದ ರೂ.85,920/- ರವರೆಗೆ  ಪ್ರತಿ ತಿಂಗಳು ವೇತನ ನೀಡಲಾಗುವುದು. (ಲೆವೆಲ್-1, 7 ನೇ ವೇತನ ಆಯೋಗ)
ವಯೋಮಿತಿ :

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ವಯಸ್ಸು ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷ (born between 2 July 1995 and 1 July 2005) ಮೀರಬಾರದು.

ವಯೋಮಿತಿ ಸಡಿಲಿಕೆ :
  • The Age Relaxation Extra as per the Rules
ಇದನ್ನು ಓದಿ : ಆಸ್ಪತ್ರೆಯಲ್ಲಿಯೇ 19 ವರ್ಷದ ವಿದ್ಯಾರ್ಥಿನಿ ಎದೆಯ ಮೇಲೆ ಕುಳಿತು throat ಸೀಳಿದ ಯುವಕ.!
ಅರ್ಜಿ ಶುಲ್ಕ :
  • ಎಸ್‌ಸಿ/ಎಸ್‌ಟಿ/ಪಿಹೆಚ್ ಅಭ್ಯರ್ಥಿಗಳು : ರೂ. 175/-
  • ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳು : ರೂ. 850/-
ಆಯ್ಕೆ ಪ್ರಕ್ರಿಯೆ :
  • ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆ ಪ್ರಕ್ರಿಯೆ ಜರುಗುವುದು.
ಅರ್ಜಿ ಸಲ್ಲಿಸುವುದು ಹೇಗೆ?
  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ನೇಮಕಾತಿ 2025 ಅಧಿಸೂಚನೆಗೆ ಭೇಟಿ ನೀಡಿ.
  • ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
  • ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
  • ಭರ್ತಿ ಮಾಡಿದ ಅರ್ಜಿ ನಮೂನೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  • ಮುಂದಿನ ಬಳಕೆಗಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯ ಮುದ್ರಣ (Print) ವನ್ನು ತೆಗೆದುಕೊಳ್ಳಿ.
ಇದನ್ನು ಓದಿ : Illicit ಸಂಬಂಧ ಆರೋಪ : ಮಹಿಳೆಯ ಬೆತ್ತಲೆಗೊಳಿಸಿ ತಲೆ ಬೋಳಿಸಿ ಹಲ್ಲೆ.!
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01 ಜುಲೈ 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21 ಜುಲೈ 2025 ರವರೆಗೆ (ರಾತ್ರಿ 11:59)
ಪ್ರಮುಖ ಲಿಂಕ್‌ಗಳು :
- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments