Friday, January 24, 2025
HomeNational Newsಟ್ರೈನ್‌ನಲ್ಲಿ ಬೆಂಕಿ ವದಂತಿ : ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಹರಿದು 10 ಜನರ ಸಾ*ವು ;...
spot_img
spot_img
spot_img
spot_img

ಟ್ರೈನ್‌ನಲ್ಲಿ ಬೆಂಕಿ ವದಂತಿ : ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಹರಿದು 10 ಜನರ ಸಾ*ವು ; ವಿಡಿಯೋ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ (Jalgaon district of Maharashtra) ಪರಾಂಡ ನಿಲ್ದಾಣದ ಸಮೀಪ ಭೀಕರ ರೈಲು​ ದುರಂತವೊಂದು (Terrible train accident) ಸಂಭವಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಪುಷ್ಪಕ್​ ಎಕ್ಸ್‌ಪ್ರೆಸ್​ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬ ಸುಳ್ಳು ಸುದ್ದಿಯನ್ನು (A false rumor that the train was on fire) ನಂಬಿದ ಕೆಲ ಪ್ರಯಾಣಿಕರು ಗಾಬರಿಯಲ್ಲಿ ರೈಲಿನ ಚೈನ್​ ಎಳೆದ್ದಿದ್ದಾರೆ. ಬಳಿಕ ತಮ್ಮ ಪ್ರಾಣ ಉಳಿಸಿಕೊಳ್ಳಲೆಂದು ಹಳಿ ಮೇಲೆ ಕೆಳಗೆ ಜಿಗಿದಿದ್ದಾರೆ. ಪ್ರಯಾಣಿಕರು ಜಿಗಿದ ಹಳಿಯಲ್ಲಿ ಕರ್ನಾಟಕ ಎಕ್ಸ್‌ಪ್ರೆಸ್ ರೈಲು (Karnataka Express Train) ಬರುತ್ತಿತ್ತು.

ಇದನ್ನು ಓದಿ : WCD : ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ವೇಳೆ ಪುಷ್ಪಕ್​ ಎಕ್ಸ್‌ಪ್ರೆಸ್​ ರೈಲಿನಿಂದ ಇಳಿದ ಸುಮಾರು 10 ಜನ ಪ್ರಯಾಣಿಕರ ಮೇಲೆ ಕರ್ನಾಟಕ ಎಕ್ಸ್‌ಪ್ರೆಸ್​ ರೈಲು ಹರಿದಿದೆ. ಪರಿಣಾಮ 10 ಪ್ರಯಾಣಿಕರು ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ.

ಪ್ರಯಾಣಿಕರು ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುಳ್ಳು ವದಂತಿಯಿಂದ ಹೆದರಿದ್ದಾರೆ.

ಈ ಸುಳ್ಳು ಸುದ್ದಿಯನ್ನು (fake news) ನಂಬಿದ 30 – 40 ಜನ ತಮ್ಮ ಬೋಗಿಗಳಿಂದ ಕೆಳಗೆ ಹಾರಿದ್ದಾರೆ. ಈ ವೇಳೆ ವೇಗವಾಗಿ ಬಂದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದು 10 ಜನ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ : Super glue ಹಾಕಿ ತುಟಿಗಳನ್ನು ಮುಚ್ಚಿದ ಯುವಕ ; ಮುಂದೆನಾಯ್ತು ವಿಡಿಯೋ ನೋಡಿ.!

ಭೀಕರ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅಪಘಾತದ ಸ್ಥಳಕ್ಕೆ ಧಾವಿಸಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!