ಜನಸ್ಪಂದನ ನ್ಯೂಸ್, ಕಾರವಾರ : ಬೆಳ್ಳಂಬೆಳಗ್ಗೆ ತರಕಾರಿ ತುಂಬಿದ ಲಾರಿಯೊಂದು ಪಲ್ಟಿಯಾದ ಪರಿಣಾಮ 10 ಜನರು ಸಾವನ್ನಪ್ಪಿರುವ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಗುಳ್ಳಾಪುರ ಘಟ್ಟ ಭಾಗದಲ್ಲಿ ಇಂದು (ದಿ.22) ಬೆಳಗ್ಗೆ ನಡೆದಿದೆ.
ಇದನ್ನು ಓದಿ : ಸುತ್ತಲೂ CC ಕ್ಯಾಮರಾ, ಸಿಬ್ಬಂದಿ ಇದ್ದರೂ ನಡೆಯಿತು ಭಯಂಕರ ವಾಮಾಚಾರ.?
ಈ ದುರ್ಘಟನೆಯಲ್ಲಿ 10 ಜನರು ಸಾವನ್ನಪ್ಪದ್ದರೆ, ಸುಮಾರು 17 ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನೂ ಈ ದುರ್ಘಟನೆಯಲ್ಲಿ ಮೃತರಾದ ದುರ್ದೈವಿಗಳನ್ನು ಹಾವೇರಿ ಜಿಲ್ಲೆಯ ಸವಣೂರಿನವರು ಎನ್ನಲಾಗಿದೆ.
ಅಪಘಾತಗೊಳ್ಳಗಾದ ಲಾರಿ ತರಕಾರಿ ತುಂಬಿಕೊಂಡು ಹಾವೇರಿಯಿಂದ ಅಂಕೋಲದ ಕಡೆ ಹೊರಟಿತ್ತು, ಲಾರಿಯಲ್ಲಿ 30 ಮಂದಿ ಕುಳಿತಿದ್ದರು. ವೇಗವಾಗಿ ಬರುತ್ತಿದ್ದ ವೇಳೆ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : ಹಿಮ ರಾಶಿಯಲ್ಲಿ ಸಿಕ್ಕಿಹಾಕಿಕೊಂಡ ಮುಗ್ಧ ಜಿಂಕೆ : ಮುಂದೆನಾಯ್ತು ; ಈ Video ನೋಡಿ.!
ಅಪಘಾತದ ಮಾಹಿತಿ ತಿಳಿಯುತ್ತಿದಂತೆಯೇ ಸ್ಥಳಕ್ಕೆ ಆಗಮಿಸಿದ ಯಲ್ಲಾಪುರ ಪೊಲೀಸರು 9 ಜನರ ಶವಗಳನ್ನ ಹೊರತೆಗೆದಿದ್ದಾರೆ.
ಅಪಘಾತದಲ್ಲಿ ಗಾಯಾಗೊಂಡವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.