ಜನಸ್ಪಂದನ ನ್ಯೂಸ್, ಆರೋಗ್ಯ : ಮಾನವ ದೇಹದ ಅತ್ಯಂತ ಮುಖ್ಯ ಅಂಗಗಳಲ್ಲಿ ಮೂತ್ರಪಿಂಡಗಳು (Kidneys) ಕೂಡ ಒಂದು. ಪ್ರತಿದಿನವೂ 24 ಗಂಟೆಗಳ ಕಾಲ ದುಡಿಯುವ ಈ ಅಂಗಗಳು, ದೇಹದಲ್ಲಿನ ಕಸದ ಅಂಶಗಳನ್ನು ಮತ್ತು ವಿಷಕಾರಿ ಪದಾರ್ಥಗಳನ್ನು ಶೋಧಿಸಿ ಮೂತ್ರದ ಮೂಲಕ ಹೊರಹಾಕುತ್ತವೆ.
ಆದರೆ, ಒಂದು ವೇಳೆ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದೇ ಹೋದರೆ ದೇಹದಲ್ಲಿ ಅಪಾಯಕಾರಿ ವಿಷಕಾರಿ ಅಂಶಗಳು, ಹೆಚ್ಚುವರಿ ನೀರು ಮತ್ತು ಖನಿಜಗಳ ಅಸಮತೋಲನ ಉಂಟಾಗುತ್ತದೆ. ಇದರ ಪರಿಣಾಮವಾಗಿ ಹಲವು ಅಂಗಾಂಗಗಳು ಹಾನಿಗೊಳಗಾಗುತ್ತವೆ. ಆಶ್ಚರ್ಯದ ಸಂಗತಿ ಏನೆಂದರೆ, ಇದರ ನೇರ ಪರಿಣಾಮ ಕಣ್ಣು (Eye) ಗಳಲ್ಲಿಯೂ ಗೋಚರಿಸುತ್ತದೆ.
ವೈದ್ಯರ ಪ್ರಕಾರ, ಕಿಡ್ನಿ ಸಮಸ್ಯೆಗಳಾಗುವಾಗ ಕಣ್ಣುಗಳಲ್ಲಿ ಕಂಡುಬರುವ ಕೆಲವು ಬದಲಾವಣೆಗಳನ್ನು ಯಾವತ್ತೂ ನಿರ್ಲಕ್ಷ್ಯ ಮಾಡಬಾರದು. ಇದು ದೇಹದೊಳಗೆ ನಡೆಯುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಗಳ ಎಚ್ಚರಿಕೆಯ ಸಂಕೇತವಾಗಿರಬಹುದು.
Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”
ಕಿಡ್ನಿ ಸಮಸ್ಯೆಯಿಂದ ಕಣ್ಣುಗಳಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಲಕ್ಷಣಗಳು :
🔹 ಕಣ್ಣುಗಳ (Eye) ಕೆಳಗೆ ಊತ (Swelling under Eyes) :
ಬೆಳಗ್ಗೆ ಎದ್ದ ಕೂಡಲೇ ಕಣ್ಣು (Eye) ಗಳ ಕೆಳಗೆ ಊತ ಕಂಡುಬಂದರೆ, ಅದನ್ನು ಕೇವಲ ನಿದ್ರಾಹೀನತೆ ಅಥವಾ ಆಯಾಸದಿಂದ ಮಾತ್ರ ಎಂದುಕೊಳ್ಳಬೇಡಿ. ಮೂತ್ರಪಿಂಡ ವೈಫಲ್ಯದಿಂದ ದೇಹದಲ್ಲಿನ ಪ್ರೋಟೀನ್ ನಷ್ಟವಾಗಲು ಪ್ರಾರಂಭವಾಗುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿ ನೀರು ಸಂಗ್ರಹವಾಗಿ ಕಣ್ಣುಗಳ ಸುತ್ತಲೂ ಊತ ಉಂಟಾಗುತ್ತದೆ.
🔹 ದೃಷ್ಟಿ ಮಸುಕಾಗುವುದು (Blurred Vision) :
ಕಣ್ಣುಗಳು ಇದ್ದಕ್ಕಿದ್ದಂತೆ ಮಸುಕಾಗಿ ಕಾಣಿಸಿದರೆ ಅಥವಾ ಸ್ಪಷ್ಟ ದೃಷ್ಟಿ ಕಾಣಿಸದಿದ್ದರೆ, ಇದು ಮಧುಮೇಹ ಅಥವಾ ಹೆಚ್ಚಿನ ರಕ್ತದೊತ್ತಡಕ್ಕೆ ಸಂಬಂಧಿಸಿದ ಕಿಡ್ನಿ ಸಮಸ್ಯೆಯ ಸೂಚನೆಯಾಗಿರಬಹುದು. ಈ ಸ್ಥಿತಿಯಲ್ಲಿ ಕಣ್ಣಿನ ನರಗಳು ಹಾನಿಗೊಳಗಾಗುತ್ತವೆ ಮತ್ತು ದೃಷ್ಟಿ ಸಮಸ್ಯೆಗಳು ಹೆಚ್ಚುತ್ತವೆ.
🔹 ಕಣ್ಣುಗಳು ಕೆಂಪಾಗುವುದು (Redness in Eyes) :
ಕಣ್ಣುಗಳು ಯಾವ ಕಾರಣವಿಲ್ಲದೆ ಆಗಾಗ ಕೆಂಪಾಗಿ ರಕ್ತಸಿಕ್ತವಾಗಿ ಕಾಣಿಸಿಕೊಂಡರೆ, ಇದು ಕಿಡ್ನಿ ಸಮಸ್ಯೆಗೆ ಸಂಬಂಧಿಸಿದ ಸ್ವಯಂ ನಿರೋಧಕ ಕಾಯಿಲೆಗಳ ಪರಿಣಾಮವಾಗಿರಬಹುದು.
🔹 ಬಣ್ಣಗಳನ್ನು ಗುರುತಿಸಲು ತೊಂದರೆ (Color Vision Problem) :
ಕೆಲವರಲ್ಲಿ ನೀಲಿ ಮತ್ತು ಹಳದಿ ಬಣ್ಣಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಮೂತ್ರಪಿಂಡದ ಕಾಯಿಲೆಯಿಂದ ಕಣ್ಣುಗಳ ನರಗಳು ಅಥವಾ ರೆಟಿನಾ ಹಾನಿಗೊಳಗಾದಾಗ ಈ ತೊಂದರೆ ಉಂಟಾಗುತ್ತದೆ.
🔹 ಕಪ್ಪು ವೃತ್ತಗಳು ಮತ್ತು ದೌರ್ಬಲ್ಯ (Dark Circles & Weakness) :
ಮೂತ್ರಪಿಂಡ ವೈಫಲ್ಯದಿಂದ ದೇಹದಲ್ಲಿ ಆಯಾಸ ಹೆಚ್ಚಾಗುತ್ತದೆ ಮತ್ತು ನಿದ್ರೆ ಅಸ್ಥಿರವಾಗುತ್ತದೆ. ಇದರ ಪರಿಣಾಮವಾಗಿ ಕಣ್ಣುಗಳ ಕೆಳಗೆ ಕಪ್ಪು ವೃತ್ತಗಳು ಕಾಣಿಸಿಕೊಳ್ಳುತ್ತವೆ.
🔹 ಕಣ್ಣುಗಳಲ್ಲಿ ಶುಷ್ಕತೆ ಮತ್ತು ತುರಿಕೆ (Dryness & Itching) :
BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್
ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಾಗ ದೇಹದಲ್ಲಿ ಯೂರಿಯಾ ಹೆಚ್ಚಳವಾಗುತ್ತದೆ. ಇದರ ಪರಿಣಾಮವಾಗಿ ಚರ್ಮ ಮತ್ತು ಕಣ್ಣುಗಳಲ್ಲಿ ತುರಿಕೆ, ಶುಷ್ಕತೆ ಕಾಣಿಸಿಕೊಳ್ಳುತ್ತವೆ. ಇದನ್ನು ಯುರೆಮಿಕ್ ಪ್ರುರಿಟಸ್ ಎಂದು ಕರೆಯಲಾಗುತ್ತದೆ.
ಜೊತೆಗೆ, ಕಿಡ್ನಿ ರೋಗಿಗಳು ವಿಟಮಿನ್-ಎ ಕೊರತೆಯಿಂದ ಕೂಡ ಬಳಲುವ ಸಾಧ್ಯತೆ ಇದೆ. ಇದು ಕಣ್ಣುಗಳಲ್ಲಿ (Eye) ಕಿರಿಕಿರಿ ಮತ್ತು ಒಣತನಕ್ಕೆ ಕಾರಣವಾಗಬಹುದು.
ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ :
ಈ ರೀತಿಯ ಬದಲಾವಣೆಗಳು ಕಣ್ಣು (Eye) ಗಳಲ್ಲಿ ಕಂಡುಬಂದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ವೈದ್ಯರ ಸಲಹೆಯಂತೆ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಹಾಗೂ ಅಲ್ಟ್ರಾಸೌಂಡ್ ಮೂಲಕ ಕಿಡ್ನಿ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬಹುದು.
ವೈದ್ಯರ ಪ್ರಕಾರ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಿಡ್ನಿ ಸಮಸ್ಯೆಗಳ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ, ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ.
Lawyers : ನ್ಯಾಯಾಲಯ ಆವರಣದಲ್ಲಿಯೇ ವಕೀಲರಿಂದ ಪೊಲೀಸರ ಮೇಲೆ ಹಲ್ಲೆ ; FIR ದಾಖಲು.!
✅ ಕೊನೆ ಮಾತು :
ಕಣ್ಣು (Eye) ಗಳಲ್ಲಿ ಕಂಡುಬರುವ ಸಣ್ಣ ಬದಲಾವಣೆಗಳನ್ನೇ ನಿರ್ಲಕ್ಷ್ಯ ಮಾಡಿದರೆ, ಅದು ಕಿಡ್ನಿ ಹಾನಿಯ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ, ಈ ಲಕ್ಷಣಗಳನ್ನು ಗಮನಿಸಿ ತಕ್ಷಣವೇ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.
Disclaimer : This article is based on reports and information available on the internet. Janaspandhan News is not affiliated with it and is not responsible for it.
Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”
ಜನಸ್ಪಂದನ ನ್ಯೂಸ್, ಡೆಸ್ಕ್ : ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ನಡೆದ ಅಪರೂಪದ ಘಟನೆಯೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಭೈಷಪ್ಪರ್ ಗ್ರಾಮದ 15 ವರ್ಷದ ವಿದ್ಯಾರ್ಥಿನಿ ರಿಯಾ ಮೌರ್ಯ ಮೇಲೆ ಹಾವು (Snake) ನಿರಂತರವಾಗಿ ಕಾಟ ಕೊಡುತ್ತಿತ್ತು. ಕೇವಲ 40 ದಿನಗಳಲ್ಲಿ 10 ಬಾರಿ ಹಾವಿನ ಕಡಿತಕ್ಕೆ ಒಳಗಾದ ಆಕೆಗೆ ಕೊನೆಗೂ ನೆಮ್ಮದಿ ಸಿಕ್ಕಿದೆ.
ಹಾವಿನ ಕಾಟದಿಂದ ಬಳಲುತ್ತಿದ್ದ ಕುಟುಂಬ :
ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಭೈಷಪ್ಪರ್ ಗ್ರಾಮದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ರಿಯಾ ಮೌರ್ಯಗೆ ಹಾವು (Snake) ತೊಂದರೆ ಮಾಡುತ್ತಿದ್ದ ಘಟನೆ ಈಗ ದೊಡ್ಡ ಚರ್ಚೆಯಾಗಿದೆ.
“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!
- ಮೊದಲ ಬಾರಿ : ಜುಲೈ 22ರಂದು ರಿಯಾ ಭತ್ತದ ಹೊಲಕ್ಕೆ ಹೋದಾಗ ಹಾವು (Snake) ಕಚ್ಚಿತು. ತಕ್ಷಣ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ನಂತರ ಮಂಜನ್ಪುರದ ತೇಜ್ಮತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
- ಎರಡನೇ ಬಾರಿ : ಆಗಸ್ಟ್ 13ರಂದು ಮತ್ತೆ ಹಾವು ಕಚ್ಚಿತು.
- ಮೂರನೇಯಿಂದ ಆರನೆಯ ಬಾರಿ : ಆಗಸ್ಟ್ 27ರಿಂದ 30ರ ನಡುವೆ ನಾಲ್ಕು ಬಾರಿ ಹಾವು ದಾಳಿ ಮಾಡಿತು.
- ಕೊನೆಯ ಬಾರಿ : ಸೆಪ್ಟೆಂಬರ್ 3ರಂದು ಹಾವು ಮತ್ತೊಮ್ಮೆ ರಿಯಾಗೆ ಕಚ್ಚಿತು. ಇದರೊಂದಿಗೆ, ಸುಮಾರು 42 ದಿನಗಳಲ್ಲಿ ಒಟ್ಟು 10 ಬಾರಿ ಹಾವು (Snake) ರಿಯಾಗೆ ಕಚ್ಚಿದ ಘಟನೆ ದಾಖಲಾಗಿದೆ.
ಈ ಘಟನೆಯಿಂದಾಗಿ ವಿದ್ಯಾರ್ಥಿನಿ ಹಾಗೂ ಕುಟುಂಬವು ನಿರಂತರ ಭಯದಲ್ಲೇ ಬದುಕುತ್ತಿತ್ತು. ಇದೀಗ ಹಾವು ಬಲೆಗೆ ಸಿಕ್ಕಿರುವುದರಿಂದ ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ದೊರಕಿದೆ.
BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್
ಕೆಲವೊಮ್ಮೆ ಸ್ನಾನದ ಸಮಯದಲ್ಲಿ, ಕೆಲವೊಮ್ಮೆ ಮನೆ ಕೆಲಸ ಮಾಡುತ್ತಿದ್ದಾಗ ಹಾವು (Snake) ಕಾಣಿಸಿಕೊಂಡಿತ್ತು. ಇದರ ಪರಿಣಾಮವಾಗಿ ರಿಯಾ ಮಾತ್ರವಲ್ಲದೆ ಆಕೆಯ ಕುಟುಂಬವೇ ಭಯದ ಜೀವನ ನಡೆಸುತ್ತಿತ್ತು.
ಕುಟುಂಬಸ್ಥರ ಆತಂಕ :
ರಿಯಾ ತಂದೆ ರಾಜೇಂದ್ರ ಮೌರ್ಯ, ಮಗಳನ್ನು ಕಾಪಾಡುವ ಸಲುವಾಗಿ ವೈದ್ಯರ ಚಿಕಿತ್ಸೆಗಿಂತಲೂ, ಬೇರೆ ರೀತಿಯ ಪರಿಹಾರಗಳಿಗೂ ಮೊರೆ ಹೋಗಿದ್ದರು. ಆದರೆ ಹಾವು ಅವರ ಮಗಳನ್ನು ಕಾಡುತ್ತಲೇ ಇತ್ತು. ಹೀಗಾಗಿ ಅವರು ಮಗಳ ವಾಸಸ್ಥಳವನ್ನೇ ಬದಲಾಯಿಸಿದರು. ಕುಟುಂಬ ಸದಸ್ಯರೂ ಸಹ ಮನೆಯಿಂದ ದೂರ ಸರಿದರು.
ಹಾವಿನ ಪೊರೆ ಸಿಕ್ಕಿದ್ದು ಬಲೆಗೆ ಬೀಳಲು ಕಾರಣ :
ಇತ್ತೀಚೆಗೆ ಮನೆಗೆ ಬಂದಿದ್ದ ರಿಯಾ ತಂದೆ, ಫ್ರಿಡ್ಜ್ ಹತ್ತಿರ ಹಾವಿನ ಪೊರೆ (ಬಟ್ಟೆ ಬದಲಿಸಿದ ಚರ್ಮ) ಕಂಡು ಸಂಶಯಗೊಂಡರು. ತಕ್ಷಣ ರೆಸ್ಕ್ಯೂ ಟೀಂ (snake rescue) ತಂಡವನ್ನು ಕರೆಸಲಾಯಿತು.
“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ಐದು ಗಂಟೆಗಳ ಶ್ರಮದ ನಂತರ ಹಾವು ಸಿಕ್ಕಿಬಿದ್ದುದು :
ರಿಯಾ ಮನೆಗೆ ಬಂದ ಉರುಗ ತಜ್ಞರು, ಐದು ಗಂಟೆಗಳ ಪರಿಶ್ರಮದ ನಂತರ ಕೊನೆಗೂ ಹಾವನ್ನು ಹಿಡಿದರು. ಮನೆಯ ಗೋಡೆ ಅಗೆದು ಹಾವನ್ನು ಹಿಡಿದ ನಂತರ ಕುಟುಂಬಸ್ಥರು ದೊಡ್ಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನೂ ಅನುಮಾನಗಳು :
ಕುಟುಂಬದ ಪ್ರಕಾರ, ಇದೇ ಹಾವು (Snake) ರಿಯಾಗೆ ಕಚ್ಚುತ್ತಿತ್ತು. ಆದರೆ ಸ್ಥಳೀಯರ ಅಭಿಪ್ರಾಯದಲ್ಲಿ ಮನೆಯಲ್ಲಿದ್ದುದು ಎರಡು ಹಾವುಗಳಾಗಿದ್ದು, ಒಂದನ್ನು ಮಾತ್ರ ಹಿಡಿದಿದ್ದಾರೆ. ಇನ್ನೊಂದು ತಪ್ಪಿಸಿಕೊಂಡಿರಬಹುದೆಂದು ಶಂಕೆ ವ್ಯಕ್ತವಾಗಿದೆ.
Lawyers : ನ್ಯಾಯಾಲಯ ಆವರಣದಲ್ಲಿಯೇ ವಕೀಲರಿಂದ ಪೊಲೀಸರ ಮೇಲೆ ಹಲ್ಲೆ ; FIR ದಾಖಲು.!
ಕಪ್ಪು ನಾಗರ ಹಾವು :
ಕಚ್ಚಿದ ಹಾವು ಕಪ್ಪು ನಾಗರ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಲವು ಮಂದಿ, ಹಾವು ಸೇಡು ತೀರಿಸಿಕೊಳ್ಳುವಂತೆ ಪದೇ ಪದೇ ರಿಯಾಗೆ ಕಚ್ಚುತ್ತಿತ್ತೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.