Sunday, September 8, 2024
spot_img
spot_img
spot_img
spot_img
spot_img
spot_img
spot_img

ಮಾಜಿ ಸಚಿವ ಸೊಗಡು ಶಿವಣ್ಣ police ವಶಕ್ಕೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ತುಮಕೂರು : ಗೃಹ ಸಚಿವ ಜಿ.ಪರಮೇಶ್ವರ್ ನಿವಾಸದ ಎದುರು ಪ್ರತಿಭಟನೆ (protest) ನಡೆಸಲು ಮುಂದಾದ ಮಾಜಿ ಸಚಿವ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದ ಮಾಜಿ ಸಚಿವ ಸೊಗಡು ಶಿವಣ್ಣ ಅವರನ್ನು ಪೊಲೀಸರು ವಶಕ್ಕೆ (custody) ಪಡೆದಿದ್ದಾರೆ.

ಇದನ್ನು ಓದಿ : ಬ್ರೇಕಪ್ ಮಾಡ್ಕೊಂಡ ಯುವತಿ ; ಖರ್ಚು ಮಾಡಿದ ಹಣ ಪಾವತಿಸುವಂತೆ ಬಿಲ್ ಕಳುಹಿಸಿದ lover.!

ಜಿಲ್ಲೆಯ ಹೇಮಾವತಿ ನೀರನ್ನು (Hemavati river) ರಾಮನಗರಕ್ಕೆ ಕೊಂಡೊಯ್ಯುವ ನೀರಾವರಿ ಯೋಜನೆ ‘ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್’ ವಿರುದ್ಧ ಗೃಹ ಸಚಿವರ ನಿವಾಸದ ಮುಂದೆ ಪ್ರತಿಭಟನೆಗೆ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿರೋಧಿ ಸಮಿತಿ ಧರಣಿಗೆ ಮುಂದಾಗಿತ್ತು.

ಈ ಪ್ರತಿಭಟನೆಗೆ ಮಾಜಿ ಸಚಿವ ಸೊಗಡು ಶಿವಣ್ಣ, ಗ್ರಾಮಾಂತರ ಶಾಸಕ ಸುರೇಶ್ ಗೌಡ, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲಾ ಜಯರಾಮ್ ಸೇರಿದಂತೆ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ (support) ವ್ಯಕ್ತಪಡಿಸಿದ್ದವು.

ತುಮಕೂರಿನ ಹೆಗ್ಗೆರೆಯಲ್ಲಿ ಇರುವ ಜಿ.ಪರಮೇಶ್ವರ್ ಮನೆ ಎದುರು ಪಕ್ಷಾತೀತವಾಗಿ ಹೋರಾಟ ನಡೆಸಲು ಸಮಿತಿ ಮುಂದಾಗಿತ್ತು.

ಇದನ್ನು ಓದಿ : ಮಹಿಳೆ ಮೇಲೆ ನಿರಂತರ ಅತ್ಯಾಚಾರ ; Video ವೈರಲ್ ಮಾಡಿ ಗ್ರಾ. ಪಂ. ಅಧ್ಯಕ್ಷೆಯ ಮಗನಿಂದ ವಿಕೃತಿ.!

ಆದರೆ ಪ್ರತಿಭಟನೆಗೂ ಮುನ್ನವೇ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಬಿಜೆಪಿ ಮುಖಂಡ ಪ್ರಭಾಕರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೃಹ ಸಚಿವ ಜಿ.ಪರಮೇಶ್ವರ್ ಮನೆ ಮುಂದೆ ಪ್ರತಿಭಟನೆಗೆ ತಯಾರಿ ನಡೆಸುತ್ತಿದ್ದಾಗ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img