Saturday, July 27, 2024
spot_img
spot_img
spot_img
spot_img
spot_img
spot_img

ಪತ್ನಿಯನ್ನು ‘Second Hand’ ಎಂದು ಕರೆದ ಪತಿಗೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತೇ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ತನ್ನ ಪತ್ನಿಯನ್ನು ‘ಸೆಕೆಂಡ್ ಹ್ಯಾಂಡ್’ ಎಂದು ಕರೆದ ವ್ಯಕ್ತಿಗೆ ಕೌಟುಂಬಿಕ ಹಿಂಸಾಚಾರದಿಂದ (domestic violence) ಮಹಿಳೆಯರ ರಕ್ಷಣೆ ಕಾಯ್ದೆ, 2005ರ ಅಡಿಯಲ್ಲಿ 3 ಕೋಟಿ ರೂ.ಗಳ ಪರಿಹಾರ ಮತ್ತು ಮಾಸಿಕ 1.5 ಲಕ್ಷ ರೂ.ಗಳ ಜೀವನಾಂಶವನ್ನು ಪಾವತಿಸುವಂತೆ ಬಾಂಬೆ ಹೈಕೋರ್ಟ್ (Bombay High court) ನಿರ್ದೇಶಿಸಿದೆ ಎಂದು ವರದಿಯಾಗಿದೆ.

ನ್ಯಾಯಮೂರ್ತಿ ಶರ್ಮಿಳಾ ದೇಶ್ಮುಖ್ ಅವರ ಏಕಸದಸ್ಯ ನ್ಯಾಯಪೀಠವು ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಪತಿ ಸಲ್ಲಿಸಿದ್ದ ಮರುಪರಿಶೀಲನಾ (Revision) ಅರ್ಜಿಯನ್ನು ವಿಚಾರಣೆ ನಡೆಸಿತು.

ಇದನ್ನು ಓದಿ : Test : ವ್ಯಕ್ತಿ ಕೈಗಳನ್ನು ಹೇಗೆ ಹಿಡಿಯುತ್ತಾನೆ ಎಂಬುದರ ಮೇಲೆ ಆತನ ವ್ಯಕ್ತಿತ್ವ ಗುರುತಿಸಬಹುದು.!

ಜೋಡಿ ಜನವರಿ 1994ರಲ್ಲಿ ಮುಂಬೈನಲ್ಲಿ ವಿವಾಹವಾಗಿ (marriage), ಯುಎಸ್‌ಎಯಲ್ಲಿ ವಿವಾಹ ಸಮಾರಂಭವನ್ನು ನಡೆಸಿದರು. ಇವರಿಬ್ಬರು 2005ರಲ್ಲಿ ನಗರಕ್ಕೆ ವಾಪಸ್ಸಾಗಿ ಮಾಟುಂಗಾದಲ್ಲಿ ಇಬ್ಬರ ಒಡೆತನದ ಮನೆಯನ್ನು ಹಂಚಿಕೊಂಡರು.

ಆದರೆ 2008ರಲ್ಲಿ, ವೈವಾಹಿಕ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಹೆಂಡತಿ ತನ್ನ ತಾಯಿಯ ಮನೆಯಲ್ಲಿದ್ದಳು. ಇನ್ನೂ ಪತಿ 2014 ರಲ್ಲಿ ಯುಎಸ್‌ಎಗೆ ಹೋದರು.

ಪತಿ 2017ರಲ್ಲಿ, ಯುಎಸ್‌ಎದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು, ಅಲ್ಲದೇ ಪತ್ನಿ ಸಹ ಮುಂಬೈನಲ್ಲಿ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಅವರ ವಿರುದ್ಧ ದೂರು ದಾಖಲಿಸಿದರು. ಯುಎಸ್ ನ್ಯಾಯಾಲಯವು 2018ರಲ್ಲಿ ವಿಚ್ಛೇದನಕ್ಕೆ ಅನುಮತಿ ನೀಡಿತು.

ಪತ್ನಿಯೂ ನೇಪಾಳದಲ್ಲಿ ಹನಿಮೂನ್ ಸಮಯದಲ್ಲಿ ನಡೆದ ಒಂದು ಅವಮಾನಕರ ಘಟನೆ (Disgraceful incident) ಸೇರಿದಂತೆ ತಮ್ಮ ಮದುವೆಯ ಸಮಯದಲ್ಲಿ ನಡೆದ ಭಯಾನಕ ಘಟನೆಗಳ ಸರಣಿಯನ್ನು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಓದಿ : Attack : ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಆರೋಪಿ ಕಾಲಿಗೆ ಗುಂಡೇಟು.!

ತನ್ನ ಪತಿ, ಕ್ರೌರ್ಯದಿಂದ, ಹಿಂದಿನ ಮುರಿದುಬಿದ್ದ ನಿಶ್ಚಿತಾರ್ಥದಿಂದಾಗಿ (engagement) ತನ್ನನ್ನು ‘ಸೆಕೆಂಡ್ ಹ್ಯಾಂಡ್’ ಎಂದು ಹೇಗೆ ಬ್ರಾಂಡ್ ಮಾಡುತ್ತಾನೆ ಎಂದು ಅವಳು ಕಣ್ಣೀರು ಸುರಿಸುತ್ತಾ ವಿವರಿಸಿದಳು. ಹಾಗಾಗಿ ಕೊರ್ಟ್ ಪತಿಗೆ 3 ಕೋಟಿ ರೂ. ದಂಡ ವಿಧಿಸಿದೆ ಎಂದು ವರದಿ ತಿಳಿಸಿದೆ.

spot_img
spot_img
- Advertisment -spot_img