Thursday, April 25, 2024
spot_img
spot_img
spot_img
spot_img
spot_img
spot_img

Attack : ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಆರೋಪಿ ಕಾಲಿಗೆ ಗುಂಡೇಟು.!

spot_img

ಜನಸ್ಪಂದನ ನ್ಯೂಸ್, ಶಿವಮೊಗ್ಗ : ಶಿವಮೊಗ್ಗದ ತುಂಗಾನಗರ ಠಾಣೆಯ ಪೊಲೀಸರು, ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಲು ಬಂದಿದ್ದ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದವನ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಘಟನೆ ನಡೆದಿದೆ.

ಗುಂಡೇಟಿನಿಂದ ಗಾಯಗೊಂಡವನು ಟಿಪ್ಪು ನಗರದ ನಿವಾಸಿ ಪರ್ವೇಜ್ ಅಲಿಯಾಸ್ ಪರು ಎಂದು ತಿಳಿದು ಬಂದಿದ್ದು, ಈತ ಕಾನ್‌ಸ್ಟೆಬಲ್ ನಾಗಪ್ಪ ಅವರಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ.

ಇದನ್ನು ಓದಿ : Photo : ಬಿಕಿನಿಯಲ್ಲಿ ಸೋಫಿಯಾ ಅನ್ಸಾರಿ ಹಾಟ್ ಲುಕ್ ; ಹೆಚ್ಚಾಯ್ತು ಹಾರ್ಟ್‌ ಬೀಟ್..!

ಘಟನೆಯ ಹಿನ್ನೆಲೆ :

ಟಿಪ್ಪುನಗರದಲ್ಲಿ ಮಾರ್ಚ್ 18ರಂದು ನಾಸೀರ್, ಮೊಹಮ್ಮದ್ ತಂಜೀಮ್ ಮತ್ತು ಅಫ್ತಾಬ್ ಎಂಬುವರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಮಧ್ಯಪ್ರವೇಶಿಸಿದ್ದ ಪರ್ವೇಜ್, ತನ್ನ ಸಹಚರರೊಂದಿಗೆ ಸೇರಿ ತಂಜೀಮ್‌ಗೆ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನು ಎಂದು ತಿಳಿದು ಬಂದಿದೆ.

ತೀವ್ರ ಗಾಯಗೊಂಡ ತಂಜೀಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯ ಕುರಿತು ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ಕೂಡ ದಾಖಲಾಗಿತ್ತು.

ಈ ಹಿನ್ನೆಲೆ ಪರ್ವೇಜ್ ನಾಪತ್ತೆಯಾಗಿದ್ದನು. ರುದ್ರಭೂಮಿ ಬಳಿಯ ಶೆಡ್‌ನಲ್ಲಿ ಮಲಗಿರುವ ಮಾಹಿತಿ ತಿಳಿದು ಪೊಲೀಸರು ಅರೆಸ್ಟ್ ಮಾಡಲು ಹೋಗಿದ್ದರು. ಈ ವೇಳೆ ಪರ್ವೇಜ್ ತುಂಗಾ ನಗರ ಠಾಣೆ ಕಾನ್‌ಸ್ಟೆಬಲ್ ನಾಗಪ್ಪ ಅವರಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ.

ಇದನ್ನು ಓದಿ : Health : ಬೆಳಿಗ್ಗೆ ಎದ್ದ ಕೂಡಲೇ ಈ ಲಕ್ಷಣಗಳು ಕಂಡುಬರುತ್ತಿವೆಯೇ.? ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು.?

ಆಗ ಅಲ್ಲಿಯೇ ಇದ್ದ ಇನ್‌ಸ್ಪೆಕ್ಟರ್ ಸತ್ಯನಾರಾಯಣ ಆತ್ಮರಕ್ಷಣೆಗಾಗಿ ಸರ್ವೀಸ್ ರಿವಾಲ್ವರ್‌ನಿಂದ ಪರ್ವೇಜ್ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿ ಪರ್ವೇಜ್ ವಿರುದ್ಧ ಕೊಲೆ, ಕೊಲೆಯತ್ನ, ಗಾಂಜಾ ಮಾರಾಟ, ಸುಲಿಗೆ ಸೇರಿದಂತೆ ಆರು ಪ್ರಕರಣಗಳು ದಾಖಲಾಗಿವೆ.

spot_img
spot_img
spot_img
- Advertisment -spot_img