Saturday, July 27, 2024
spot_img
spot_img
spot_img
spot_img
spot_img
spot_img

Saffron : ಕುಂಕುಮ ಹಚ್ಚಿಸಿಕೊಳ್ಳಲು ನಿರಾಕರಿಸಿದ ವಿಪಕ್ಷ ನಾಯಕ ಆರ್.ಅಶೋಕ.!

spot_img

ಜನಸ್ಪಂದನ ನ್ಯೂಸ್, ಕಲಬುರಗಿ : ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೆಪೇಟ್ ಬಿಜೆಪಿ ಕಚೇರಿಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ (R Ashok) ಅವರು ತಮ್ಮ ಹಣೆಗೆ ಕುಂಕುಮ ಇಟ್ಟುಕೊಳ್ಳಲು ನಿರಾಕರಿಸಿದ ಘಟನೆ ನಡೆದಿದೆ.

ಕಚೇರಿಗೆ ಭೇಟಿ ನೀಡಿದ ವೇಳೆ ಹಿರಿಯ ಮುಖಂಡರೊಬ್ಬರು ಕುಂಕುಮ ಹಚ್ಚಲು ಮುಂದಾದಾಗ ನಿರಾಕರಿಸಿದ್ದಾರೆ (refused) ಎನ್ನಲಾಗಿದೆ.

PUC ಪಾಸಾದವರಿಗೆ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.!

ಕಚೇರಿಗೆ ಆಗಮಿಸಿದ ಅಶೋಕ್ ಅವರಿಗೆ ಬಿಜೆಪಿ ಮುಖಂಡರು ಹಾರ ಹಾಕಿ ಸ್ವಾಗತಿಸಲು ಮುಂದಾದರು. ಈ ವೇಳೆ ಎರಡು ಹಾರಗಳನ್ನು ತಾವು ಹಾಕಿಕೊಳ್ಳದೆ ಬಿಜೆಪಿ ಹಿರಿಯ ಮುಖಂಡ ಡಾ. ವಿಶ್ವನಾಥ್ ಪವಾರ್ ಮತ್ತು ಇನ್ನೊಬ್ಬರಿಗೆ ಹಾಕಿ ಗೌರವಿಸಿದರು.

ಈ ನಡುವೆ ಡಾ. ವಿಶ್ವನಾಥ್ ಪವಾರ್ ಅವರು ಅಶೋಕ ಅವರ ಹಣೆಗೆ ಕುಂಕುಮ ಇಡಲು ಬಂದಿದ್ದರು. ಆದರೆ ಅಶೋಕ ಅವರು ಕುಂಕುಮ ಹಚ್ಚದಂತೆ ತಡೆದಿದ್ದಾರೆ. ಬಳಿಕ ವಿಶ್ವನಾಥ್ ಶಾಲು ಹಾಕಿ ಸನ್ಮಾನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿ, ಕೇಸರಿ ಕಂಡರೆ ಆಗಲ್ಲ, ಕೇಸರಿ ಶಲ್ಯ ಧರಿಸಲ್ಲ, ಕುಂಕುಮ ಹಾಕಲ್ಲ ಎಂದೆಲ್ಲಾ ಟೀಕಿಸುವ ರಾಜ್ಯದ ಬಿಜೆಪಿ ನಾಯಕರು ತಮ್ಮ ನಾಯಕನ ಈ ನಡೆಗೆ ಏನು ಹೇಳುತ್ತಾರೆ? ಎಂದು ಸಾರ್ವಜನಿಕರು (public) ಪ್ರಶ್ನಿಸುತ್ತಿದ್ದಾರೆ.

ನೀವೂ ಲಿಫ್ಟ್‌ ಡೋರ್ ಕ್ಲೋಸ್ ಆಗದಂತೆ ನಿಲ್ಲಿಸಲು ಕೈ-ಕಾಲು ಬಳಸ್ತೀರಾ.? ; ಹಾಗಿದ್ರೆ ತಪ್ಪದೇ ಈ ವಿಡಿಯೋ ನೋಡಿ.

ಕರ್ನಾಟಕ ಕಾಂಗ್ರೆಸ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿದ್ದು, ವಿಪಕ್ಷ ನಾಯಕ ಅಶೋಕ್‌ಗೆ ಕುಂಕುಮ ಎಂದರೆ ಅಲರ್ಜಿಯೇ, ಅಸಹ್ಯವೇ? ಎಂದು ಪ್ರಶ್ನಿಸಿದೆ. ಕುಂಕುಮ ಹಚ್ಚಲು ಬಂದರೆ ಅದನ್ನು ನಿರಾಕರಿಸುವ ಅಶೋಕ್ ಅವರ ಮೂಲಕ ಬಿಜೆಪಿಯವರ ಬೂಟಾಟಿಕೆಯ ಹುಸಿ ಧಾರ್ಮಿಕತೆ ನಾಟಕ ಬಯಲಾಗಿದೆ ಎಂದು ಟೀಕಿಸಿದೆ.

spot_img
spot_img
- Advertisment -spot_img