Thursday, June 20, 2024
spot_img
spot_img
spot_img
spot_img
spot_img
spot_img

ನೀವು ಕೂಡ ಸ್ವಯಂ ಉದ್ಯೋಗ ಪ್ರಾರಂಭಿಸಬೇಕು ಎಂದು ಕೊಂಡಿದ್ದೀರಾ.? ಹಾಗಾದ್ರೆ ಈ ಸುದ್ದಿ ಓದಿ.

spot_img

ಜನಸ್ಪಂದನ ನ್ಯೂಸ್, ಸರ್ಕಾರಿ ಸೌಲಭ್ಯಗಳು : ನೀವು ಕೂಡ ಸ್ವಯಂ ಉದ್ಯೋಗ ಪ್ರಾರಂಭಿಸಬೇಕು ಎಂದುಕೊಂಡಿದ್ದೀರಾ.? ಹಾಗಾದ್ರೆ ಈ ಸುದ್ದಿಯನ್ನು ಕೊನೆಯವರೆಗೂ ಓದಿ ನಿಮಗೂ ಉಪಯುಕ್ತವಾಗಲಿದೆ.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ನಾವಿಲ್ಲಿ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ.

ಮೊದಲಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಉಪಯೋಗವೇನು.? ಯಾವ ರೀತಿ ಸಾಲ ಪಡೆದುಕೊಳ್ಳಬೇಕು.? ಅರ್ಹತೆಗಳೇನು.? ಹಾಗೂ ಯಾವ ರೀತಿ ಬಡ್ಡಿ ದರ ಇರುತ್ತದೆ.? ಎಂಬುದರ ಮಾಹಿತಿಯನ್ನು ಈ ಕೆಳಗೆ ನೀಡಿರುತ್ತೇವೆ ಗಮನದಿಂದ ಓದಿಕೊಳ್ಳಿ.

Astrology : ಫೆ. 23 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಉದ್ದೇಶ/ಉಪಯೋಗ :

ಸ್ವಯಂ ಉದ್ಯೋಗದ ಯೋಜನೆ ಅಡಿ ಅಲ್ಪಸಂಖ್ಯಾತರ ಜನರ ಗುಡಿ ಕೈಗಾರಿಕೆ, ಸಣ್ಣ ಪ್ರಮಾಣದ ವ್ಯಾಪಾರ, ಕೃಷಿ ಚಟುವಟಿಕೆಗಳು ಹಾಗೂ ಇತರೆ ಸ್ವಂತ ಉದ್ಯೋಗಗಳಿಗೆ ಸಾಲ ಮತ್ತು ಸಹಾಯಧನವನ್ನು ನೀಡುವ ಮುಖ್ಯ ಉದ್ದೇಶವನ್ನು ಹೊಂದಿದೆ.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿ ನೀವು ಸ್ವಂತ ಉದ್ಯೋಗವನ್ನು ಆರಂಭಿಸಲು ರೂಪಾಯಿ ಒಂದು ಲಕ್ಷ ಸಹಾಯಧನ ಸಿಗುತ್ತದೆ ಎಂದು ತಿಳಿದುಬಂದಿದೆ.

ಅರ್ಹತೆಗಳು :

 • ಅರ್ಜಿದಾರನು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
 • ಅರ್ಜಿದಾರನು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು ಎಂದು ತಿಳಿಸಲಾಗಿದೆ.
 • ಅರ್ಜಿದಾರರನ್ನು ಕೆ ಎಂ ಡಿ ಸಿ ಯಲ್ಲಿ ಸುಸ್ತಿಗೆದಾರನಾಗಿರಬಾರದು.
 • ಅರ್ಜಿದಾರನ ಕುಟುಂಬದಲ್ಲಿ ಯಾರೂ ಕೂಡ ಸರ್ಕಾರಿ ನೌಕರಿಯಲ್ಲಿ ಇರಬಾರದು.
 • ಅರ್ಜಿದಾರನ ಕುಟುಂಬದ ಆದಾಯ ಒಂದು ಲಕ್ಷಕ್ಕಿಂತ ಕಡಿಮೆ ಇರಬೇಕು (ವಾರ್ಷಿಕವಾಗಿ).
 • ಅರ್ಜಿದಾರನ ವಯಸ್ಸು ಕನಿಷ್ಠ 18ರಿಂದ ಹಿಡಿದು ಗರಿಷ್ಠ 55 ವರ್ಷ ಮೀರಿರಬಾರದು.

ತಂಗಿಗಾಗಿ Fake ಪೊಲೀಸ್ ವೇಷದಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ ; ಮುಂದೆ.?

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

 • ಪಾಸ್ ಪೋರ್ಟ್ ಸೈಜ್ ಫೋಟೋ (2)
 • ಅಲ್ಪಸಂಖ್ಯಾತರ ಪ್ರಮಾಣ ಪತ್ರ
 • ಆಧಾರ್ ಕಾರ್ಡ್
 • ಆದಾಯ ಮತ್ತು ಜಾತಿ ಪ್ರಮಾಣ ಪತ್ರ
 • ನಿವಾಸದ ಪುರಾವೆ
 • ಯೋಜನಾ ವರದಿ

ಅರ್ಜಿ ಸಲ್ಲಿಸುವುದು ಹೇಗೆ :

 • ಮೊದಲು ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಲಿಂಕ್ ಮೇಲೆ ಇದೆ ನೋಡಿ.
 • ನಂತರ ಮುಖಪುಟದಲ್ಲಿ ಸ್ವಯಂ ಉದ್ಯೋಗ ಯೋಜನೆ ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ಕಿಸಿ.
 • ನಂತರ ಮೊಬೈಲ್ ನಂಬರ್ ಹಾಕಿ ಓಟಿಪಿಯನ್ನು ವೆರಿಫೈ ಮಾಡಿ.
 • ಮುಂದಿನ ಹಂತಗಳನ್ನು ಪೂರ್ಣಗೊಳಿಸಿ.
 • ಅರ್ಜಿದಾರನ ಕೆಲವು ವಿವರಗಳನ್ನು ತುಂಬಬೇಕು.
 • ಬ್ಯಾಂಕ್ ಮತ್ತು ಸಾಲದ ವಿವರಗಳನ್ನು ಒಪ್ಪಿಸಿ.
 • ಎಲ್ಲಾ ದಾಖಲೆಗಳನ್ನು ಒಪ್ಪಿಸಬೇಕಾಗುತ್ತದೆ ಮತ್ತು ಎಲ್ಲಾ ದಾಖಲೆಗಳು ಸರಿ ಇವೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ.

ಡ್ಯಾನ್ಸ್ ಮಾಡಲು ಒತ್ತಾಯಿಸಿದ ವಧು ; ವರ ಮಾಡಿದ್ದೇನು.? ಈ video ನೋಡಿ.!

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29/02/2024

ಈ ರೀತಿಯಾಗಿ ನೀವು ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಮೇಲೆ ಕೊಟ್ಟಿರುವಂತಹ ಹಂತಗಳನ್ನು ಮತ್ತು ಬೇಕಾಗಿರುವಂತ ದಾಖಲೆಗಳನ್ನು ಸರಿಪಡಿಸಿಕೊಂಡು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕಿಸಿ ಅರ್ಜಿಯನ್ನು ಸಲ್ಲಿಸಿ.

https://kmdconline.karnataka.gov.in/Portal/login

spot_img
spot_img
- Advertisment -spot_img