Saturday, July 27, 2024
spot_img
spot_img
spot_img
spot_img
spot_img
spot_img

ತಂಗಿಗಾಗಿ Fake ಪೊಲೀಸ್ ವೇಷದಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ ; ಮುಂದೆ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : 12ನೇ ತರಗತಿ ಪರೀಕ್ಷೆಯಲ್ಲಿ ತನ್ನ ಸಹೋದರಿಗೆ ನಕಲು (copy) ಮಾಡಲು ನೆರವಾಗುವ ನಿಟ್ಟಿನಲ್ಲಿ ವ್ಯಕ್ತಿಯೊಬ್ಬ ಪೊಲೀಸ್‌ ಸಮವಸ್ತ್ರ‌ದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಕಾರ್ಯವನ್ನು ನಿರ್ವಹಿಸುವಂತೆ ಬಂದು ಸಿಕ್ಕಿಬಿದ್ದಿರುವ ಘಟನೆ ಮಹಾರಾಷ್ಟ್ರದ (Maharashtra) ಅಕೋಲಾ ಜಿಲ್ಲೆಯಲ್ಲಿ ನಡೆದಿದೆ.

ಅನುಪಮ್ ಮದನ್ ಖಂಡಾರೆ (24) ಎಂಬಾತ ಪೊಲೀಸ್‌ ಕೈಗೆ ಸಿಕ್ಕಿಬಿದ್ದ ಯುವಕ ಎಂದು ವರದಿ ತಿಳಿಸಿದೆ.

ಇದನ್ನು ಓದಿ : Viral : ಹೆಬ್ಬಾವಿನ ಜೊತೆ ಸರಸ ; ನಟಿಯ ಹೊಸ ಅವತಾರಕ್ಕೆ ಬೇಸ್ತು ಬಿದ್ದ ನೆಟ್ಟಿಗರು.!

12ನೇ ತರಗತಿ ಪರೀಕ್ಷೆ ಬರೆಯಲು ಪಾತೂರು ಪಟ್ಟಣದ ಶಹಬಾಬು ಉರ್ದು ಪ್ರೌಢಶಾಲೆಯಲ್ಲಿ ಪಾಂಗ್ರಾ ಬಂಡಿಯಿಂದ ಬಂದ ಖಂಡಾರೆ, ತನ್ನ ತಂಗಿಗೆ ಪರೀಕ್ಷೆಯಲ್ಲಿ ಕಾಪಿ ಮಾಡಲು ನೆರವಾಗುವ ನಿಟ್ಟಿನಲ್ಲಿ ನಿಜವಾದ ಪೊಲೀಸ್‌ ಧಿರಿಸಿನಲ್ಲಿ (police get up) ಶಾಲೆಗೆ ಬಂದಿದ್ದಾನೆ.

ಪರೀಕ್ಷಾ ಕೇಂದ್ರದ ಭದ್ರತೆಗೆ ನಿಂತು ಅಲ್ಲಿಂದ ಉತ್ತರ ಪತ್ರಿಕೆಯನ್ನು (answer sheet) ತೆಗೆದುಕೊಂಡು ಹೋಗಬೇಕೆಂಬ ಉಪಾಯ ಹಾಕಿಕೊಂಡಿದ್ದ.

ಇದೇ ವೇಳೆ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಕಿಶೋರ್ ಶೆಲ್ಕೆ ಮತ್ತು ಅವರ ತಂಡವು ಭದ್ರತೆಗೆಂದು ಆಗಮಿಸಿತು. ನಿಜವಾದ ಪೊಲೀಸ್‌ ಬಂದಾಗ ಅನುಪಮ್‌ ಸೆಲ್ಯೂಟ್‌ (salute) ನೀಡಿದ್ದಾನೆ.

ಇದನ್ನು ಓದಿ : ಲಂಚ ಪ್ರಕರಣದಲ್ಲಿ CM ಸಿದ್ದರಾಮಯ್ಯಗೆ ಸಂಕಷ್ಟ.!

ಅನುಪಮ್ ಮಾಡಿದ ಸೆಲ್ಯೂಟ್ ಪ್ರೋಟೋಕಾಲ್‌ಗೆ ಅನುಗುಣವಾಗಿಲ್ಲ. ಸಮವಸ್ತ್ರದ ಮೇಲಿನ ನಾಮಫಲಕ ತಪ್ಪಾಗಿತ್ತು. ಈ ಕಾರಣದಿಂದ ಅಧಿಕಾರಿಗಳಿಗೆ ಅನುಪಮ್‌ ಮೇಲೆ ಅನುಮಾನ (doubt) ಮೂಡಿದೆ.

ಪೊಲೀಸರು ಕೂಲಂಕುಷ ತನಿಖೆ ನಡೆಸಿದಾಗ ಆತನ ಜೇಬಿನಲ್ಲಿ ಇಂಗ್ಲಿಷ್ ಪರೀಕ್ಷಾ ಪತ್ರಿಕೆಯ ಪ್ರತಿಯನ್ನು ಪತ್ತೆಹಚ್ಚಿದ್ದಾರೆ. ಈ ವೇಳೆ ಆತನ ವಂಚನೆಯ ಕೃತ್ಯ ಬೆಳಕಿಗೆ ಬಂದಿದೆ.

spot_img
spot_img
- Advertisment -spot_img