Monday, May 20, 2024
spot_img
spot_img
spot_img
spot_img
spot_img
spot_img

ಮನೆಗಳ್ಳರಿಗೆ ಸಾಥ್ ನೀಡ್ತಿದ್ದ ಪೊಲೀಸ್ ಸೇರಿ 8 ಜನ arrest.!

spot_img

ಜನಸ್ಪಂದನ ನ್ಯೂಸ್, ಮಂಡ್ಯ : ಮಂಡ್ಯ ಜಿಲ್ಲೆಯ ಮದ್ದೂರು ಠಾಣೆಯ ಪೊಲೀಸರು, ಮನೆಗಳ್ಳರಿಗೆ (thieves) ಸಹಾಯ ಮಾಡುತ್ತಿದ್ದ ಪೊಲೀಸ್ ಕಾನ್ಸ್​​ಟೇಬಲ್​ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಮದ್ದೂರು (Madduru) ತಾಲೂಕಿನ ಕೊಪ್ಪ ಠಾಣೆಯ ಕಾನ್ಸ್​ಟೇಬಲ್ ಕೆಂಡಗಣ್ಣಯ್ಯ, ಅಯೂಬ್, ಫಯಾಜ್ ಡಾಲಿ, ಭವನ್, ಸಾದನ್, ಮುನ್ನಾ, ಪ್ರಸಾದ್ ಎಂಬುವರನ್ನು ಬಂಧಿಸಲಾಗಿದೆ.

ಇದನ್ನು ಓದಿ : ಡ್ಯಾನ್ಸ್ ಮಾಡಲು ಒತ್ತಾಯಿಸಿದ ವಧು ; ವರ ಮಾಡಿದ್ದೇನು.? ಈ video ನೋಡಿ.!

ಇನ್ನೂ ಬಂಧಿತ ಆರೋಪಿಗಳಿಂದ 1 ಕೆಜಿ 486 ಗ್ರಾಂ ಚಿನ್ನಾಭರಣ, 1.70 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ.

ಮನೆಗಳ್ಳತನ ಆರೋಪಿಗಳಿಗೆ ಪಿಸಿ ಕೆಂಡಗಣ್ಣಯ್ಯ ಸಹಕಾರ (cooperation) ನೀಡುತ್ತಿದ್ದರು. ಕಳೆದ ತಿಂಗಳು ಮದ್ದೂರಿನಲ್ಲಿ ವೈದ್ಯ ಚಂದ್ರು ಮನೆಯಲ್ಲಿ ಕಳ್ಳತನ ನಡೆದಿದ್ದು, ಆರೋಪಿಗಳು 1 ಕೆಜಿ ಚಿನ್ನಾಭರಣ ಹಾಗೂ 8 ಲಕ್ಷ ರೂ. ನಗದು ದೋಚಿದ್ದರು.

ಇದನ್ನು ಓದಿ : ತಂಗಿಗಾಗಿ Fake ಪೊಲೀಸ್ ವೇಷದಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ ; ಮುಂದೆ.?

5 ಮನೆಗಳ್ಳತನ ಪ್ರಕರಣಗಳು ಬಯಲಾಗಿದ್ದು, ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳಿಗೆ ಪಿಸಿ ಕೆಂಡಗಣ್ಣಯ್ಯ ಸಾಥ್ ನೀಡುತ್ತಿದ್ದರು.

ಆರೋಪಿಗಳು ಕಳ್ಳತನ ಮಾಡಿದ ಚಿನ್ನಾಭರಣವನ್ನು ಕೆಂಡಗಣ್ಣಯ್ಯ ಅಡವಿಟ್ಟು ಕೊಡುತ್ತಿದ್ದರು ಎನ್ನಲಾಗಿದೆ.

spot_img
spot_img
spot_img
- Advertisment -spot_img