ಜನಸ್ಪಂದನ ನ್ಯೂಸ್, ಧಾರವಾಡ : ಧಾರವಾಡದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲೋಕಾಯುಕ್ತ ಇಲಾಖೆಯ ಇನ್ಸ್‌ಪೆಕ್ಟರ್ (Inspector) ರಾದ ಪಂಚಾಕ್ಷರಿ ಸಾಲಿಮಠ ದುರ್ಘಟನೆಗೆ ಬಲಿಯಾಗಿದ್ದಾರೆ. ಇತ್ತೀಚೆಗೆ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಮೃತಪಟ್ಟ ಘಟನೆ ಇನ್ನೂ ಜನರ ಮನಸಿನಲ್ಲಿ ಮಸುಕಾಗುವುದಕ್ಕೂ ಮುನ್ನ, ಮತ್ತೊಂದು ಗಂಭೀರ ಕಾರು ದುರಂತ ರಾಜ್ಯವನ್ನು ಕಂಗೆಡಿಸಿದೆ.
ಲೋಕಾಯುಕ್ತ ಇನ್ಸ್‌ಪೆಕ್ಟರ್ (Inspector) ಕಾರು ಅಪಘಾತ :
ಹಾವೇರಿಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ (Inspector) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಂಚಾಕ್ಷರಿ ಸಾಲಿಮಠ ಬುಧವಾರ ಸಂಜೆ ಗದಗ ಕಡೆಗೆ i20 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಇದನ್ನು ಓದಿ : ರೀಲ್ಸ್‌ಗಾಗಿ ಗಂಟೆಗೆ 140 ಕಿ.ಮೀ ವೇಗದಲ್ಲಿ KTM ಬೈಕ್ ಚಾಲನೆ ; ತುಂಡಾಗಿ ತಲೆ.
ಅಣ್ಣಿಗೇರಿ ಪಟ್ಟಣ ಹೊರವಲಯದ ಭದ್ರಾಪುರದ ಬಳಿ ಗದಗ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ಕಾರು ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ (Divider) ಭೀಕರವಾಗಿ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಕ್ಷಣಾರ್ಧದಲ್ಲಿ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಬೆಂಕಿ ಅತಿ ವೇಗವಾಗಿ ವ್ಯಾಪಿಸಿದ್ದು, ಕಾರ್ ಲಾಕ್ ತೆಗೆಯಲು ಸಾಧ್ಯವಾಗಿಲ್ಲ ಕಾರಣ Inspector ಅವರು ಕಾರಿನಿಂದ ಹೊರಬರಲು ಸಾಧ್ಯವಾಗಿಲ್ಲ.
ಅಪಘಾತ ಸಂಜೆ 7.30ರ ಸಮಯದಲ್ಲಿ ನಡೆದಿದೆ. ಆಗ Inspector ಪಂಚಾಕ್ಷರಿ ಸಾಲಿಮಠ ತಮ್ಮ ವಾಹನವನ್ನು ಸ್ವತಃ ಚಾಲನೆ ಮಾಡುತ್ತಿದ್ದರು. ಕುಟುಂಬವನ್ನು ಭೇಟಿಯಾಗಲು ಗದಗಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದಂತೆ ಮೂಲಗಳು ತಿಳಿಸಿವೆ.
ಇದನ್ನು ಓದಿ : Accident : ಕಾರು – ಟ್ರ್ಯಾಕ್ಟರ್ ಡಿಕ್ಕಿ ; ಸ್ಥಳದಲ್ಲಿಯೇ ನಾಲ್ವರು ಯುವಕರ ದುರ್ಮರಣ.!
“ಡಿಕ್ಕಿಯ ನಂತರ ಪೆಟ್ರೋಲ್ ಸೋರಿಕೆ ಆಗಿ ಸ್ಪಾರ್ಕ್ ಉಂಟಾಗಿ ಬೆಂಕಿ ಹಬ್ಬಿದ ಸಾಧ್ಯತೆ ಇದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.”
ಘಟನಾ ಸ್ಥಳಕ್ಕೆ ತಕ್ಷಣವೇ ಅಣ್ಣಿಗೇರಿ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಒಳಗಿದ್ದ ಪಂಚಾಕ್ಷರಿ ಸಾಲಿಮಠ ಸಜೀವವಾಗಿ ದಹನಗೊಂಡಿರುವುದು ದೃಢಪಟ್ಟಿದೆ.
Inspector ಮೃತದೇಹ ಗುರುತಿಸಲು ಆರಂಭದಲ್ಲಿ ಕಷ್ಟ ಎದುರಾಯಿತು. ನಂತರ ಅವರ ಕೈಯಲ್ಲಿದ್ದ ಬ್ರೆಸ್ಲೆಟ್ ಆಧರಿಸಿ ಕುಟುಂಬದ ಸದಸ್ಯರು ಗುರುತು ಪತ್ತೆಹಚ್ಚಿದರು. ಇದಾದ ಬಳಿಕ ಪೊಲೀಸರು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿ ತನಿಖೆಯನ್ನು ಮುಂದುವರೆಸಿದ್ದಾರೆ.
ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : “ದಿನಾ ಕುಡಿಯೋರು vs ವಾರಕ್ಕೊಮ್ಮೆ ಕುಡಿಯೋರು : ‘Drink’ ಎಫೆಕ್ಟ್ ಯಾರಿಗೆ ಹೆಚ್ಚು?”
ಈ ಅಪಘಾತದಿಂದ ಸ್ಥಳೀಯರು, ಸಹೋದ್ಯೋಗಿಗಳು ಹಾಗೂ ಕುಟುಂಬದವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಐಎಎಸ್ ಮಹಾಂತೇಶ್ ಬೀಳಗಿ ನಿಧನದ ಸುದ್ದಿ ಮಾಸುವ ಮುನ್ನೇ ಮತ್ತೊಂದು Inspector ಓರ್ವರ ಜೀವ ಹಾನಿ ರಾಜ್ಯದ ಕಾನೂನು ಜಾಗೃತಿ ವಲಯದಲ್ಲಿ ಆತಂಕ ಮೂಡಿಸಿದೆ.
ರೀಲ್ಸ್‌ಗಾಗಿ ಗಂಟೆಗೆ 140 ಕಿ.ಮೀ ವೇಗದಲ್ಲಿ KTM ಬೈಕ್ ಚಾಲನೆ ; ತುಂಡಾಗಿ ತಲೆ.

ಜನಸ್ಪಂದನ ನ್ಯೂಸ್, ಸೂರತ್ : ಗುಜರಾತ್‌ನ ಸೂರತ್ ನಗರದಲ್ಲಿ ಭೀಕರ ಅಪಘಾತ ಸಂಭವಿಸಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿದ್ದ ಯುವ ಇನ್‌ಫ್ಲುವೆನ್ಸರ್ ದುರ್ಮರಣ ಹೊಂದಿದ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ‘ಪಿಕೆಆರ್ ಬ್ಲಾಗರ್’ ಎಂದು ಪರಿಚಿತರಾದ ಪ್ರಿನ್ಸ್ ಪಟೇಲ್, ರೀಲ್ ಚಿತ್ರೀಕರಣಕ್ಕಾಗಿ ಅತಿ ವೇಗದಲ್ಲಿ ಬೈಕ್ (KTM Bike) ಸವಾರಿ ಮಾಡುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಭೀಕರವಾಗಿ ಬಿದ್ದಿದ್ದಾರೆ.
ಘಟನೆ ಸೂರತ್‌ನ ಗ್ರೇಟ್ ಲೈನರ್ ಸೇತುವೆಯ ಬಳಿಯಲ್ಲಿ ನಡೆದಿದೆ. ಪ್ರಿನ್ಸ್ ತಮ್ಮ ಕೆಟಿಎಂ ಬೈಕ್ (KTM Bike) ಅನ್ನು ಗಂಟೆಗೆ ಸುಮಾರು 140 ಕಿ.ಮೀ ವೇಗದಲ್ಲಿ ಚಲಾಯಿಸುತ್ತಿದ್ದಾಗ ಸಮತೋಲನ ಕಳೆದುಕೊಂಡು ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತವು ಎಷ್ಟು ಭೀಕರವಾಗಿತ್ತೆಂದರೆ ಬೈಕ್ (KTM Bike) ಕೆಲವು ನೂರು ಮೀಟರ್‌ಗಳವರೆಗೆ ಸ್ಕಿಡ್ ಆಗಿದ್ದು, ಪ್ರಿನ್ಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್ : ಚಲಿಸಿದ ಗೂಡ್ಸ್ ರೈಲು ; ಮುಂದೆನಾಯ್ತು? Video ನೋಡಿ.
ಅಪಘಾತದ ಸಿಸಿಟಿವಿ ದೃಶ್ಯ ವೈರಲ್ :
ಸಿಸಿಟಿವಿ ದೃಶ್ಯಗಳಲ್ಲಿ ಪ್ರಿನ್ಸ್ ಸೇತುವೆಯ ಇಳಿಜಾರಿನಲ್ಲಿ ಅತೀವೇಗದಲ್ಲಿ KTM ಬೈಕ್ ಚಲಾಯಿಸುತ್ತಿರುವುದು ಮತ್ತು ಕ್ಷಣಾರ್ಧದಲ್ಲೇ ನಿಯಂತ್ರಣ ತಪ್ಪಿಸುವುದು ಕಾಣಿಸುತ್ತದೆ. ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, ಅಪಘಾತದ ಸಮಯದಲ್ಲಿ ಅವರು ಹೆಲ್ಮೆಟ್ ಧರಿಸಿರಲಿಲ್ಲ, ಇದು ಗಂಭೀರ ಗಾಯಗಳಿಗೆ ಕಾರಣವಾಗಿದೆ.
ಕುಟುಂಬದ ದುಸ್ಥಿತಿ :
ಪ್ರಿನ್ಸ್ ಕುಟುಂಬ ಆರ್ಥಿಕವಾಗಿ ಅತಿಯಾಗಿ ಹಿಂದುಳಿದಿದ್ದು, ಅವರ ತಾಯಿ ಆಶ್ರಯ ತಾಣದಲ್ಲಿ ವಾಸಿಸುತ್ತಾ ಹಾಲು ಮಾರಾಟದ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಮಗನ ಅಕಾಲಿಕ ಸಾವು ಕುಟುಂಬಕ್ಕೆ ಶೋಕಾಂತಿಕೆಯಾಗಿರುವುದು ಸ್ಥಳೀಯರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದ ಪ್ರಿನ್ಸ್ :
ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.
ಪ್ರಿನ್ಸ್ ಪಟೇಲ್ ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಯುವಕರಲ್ಲಿ, ವೇಗದ ಬೈಕಿಂಗ್ ವಿಡಿಯೊಗಳಿಂದಷ್ಟು ಜನಪ್ರಿಯರಾಗಿದ್ದರು.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅವರು ಹೊಸ ಕೆಟಿಎಂ ಬೈಕ್ (KTM Bike) ಖರೀದಿಸಿದ್ದರು ಮತ್ತು ಅದನ್ನು ‘ಲೈಲಾ’ ಎಂದು ಕರೆಯುತ್ತಿದ್ದರು. ಬೈಕ್ (KTM Bike) ನ ಫೋಟೋಗಳು, ರೀಲ್‌ಗಳು ಮತ್ತು ಸವಾರಿ ವಿಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದರು.
ಅಂತೆಯೇ, ನಾಲ್ಕು ದಿನಗಳ ಹಿಂದೆ ಅವರು ತಮ್ಮ ಸಾವನ್ನು ಉಲ್ಲೇಖಿಸುವಂತಹ ಒಂದು ಕ್ರಿಯೇಟಿವ್ ವಿಡಿಯೋ ಹಂಚಿಕೊಂಡಿದ್ದು, “ಮರಣದ ನಂತರವೂ ನನ್ನ ಲೈಲಾ (KTM Bike) ವನ್ನು ಪ್ರೀತಿಸುತ್ತೇನೆ” ಎಂಬ ಸಂದೇಶ ಸೇರಿಸಿದ್ದರು. ಈಗ ಅದು ದುಃಖದ ಸಂಧರ್ಭದಲ್ಲಿ ಮತ್ತಷ್ಟು ವೈರಲ್ ಆಗಿದೆ.
ಪ್ರಕರಣ ದಾಖಲು ; ಮುಂದುವರೆದ ತನಿಖೆ :
ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿ, ಅಗತ್ಯ ತನಿಖೆ ಕೈಗೊಂಡಿದ್ದಾರೆ. ಅತಿವೇಗ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಅಂದಾಜು ವ್ಯಕ್ತವಾಗಿದೆ.
ಇದನ್ನು ಓದಿ : ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.
ವಿಡಿಯೋ :
Surat witnessed a horrifying accident on Tuesday morning when 18-year-old social media influencer Prince Patel, popularly known as PKR Blogger, lost his life in a high-speed motorcycle crash. The incident took place on Udhna-Magdalla Road, near the Great Liner Bridge off… pic.twitter.com/DzoZid4HJS
— IndiaToday (@IndiaToday) December 2, 2025
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ






