ಶುಕ್ರವಾರ, ನವೆಂಬರ್ 28, 2025

Janaspandhan News

HomeGeneral Newsಈ ‘Message’ ಬಂದ್ರೆ ತಕ್ಷಣ ಡಿಲೀಟ್ ಮಾಡಿ ; ಇಲ್ಲಾಂದ್ರೆ ಡೇಟಾ, ಬ್ಯಾಂಕ್ ವಿವರ ಹ್ಯಾಕ್.
spot_img
spot_img
spot_img

ಈ ‘Message’ ಬಂದ್ರೆ ತಕ್ಷಣ ಡಿಲೀಟ್ ಮಾಡಿ ; ಇಲ್ಲಾಂದ್ರೆ ಡೇಟಾ, ಬ್ಯಾಂಕ್ ವಿವರ ಹ್ಯಾಕ್.

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇಂದಿನ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಸಂವಹನದಿಂದ ಬ್ಯಾಂಕಿಂಗ್ ವ್ಯವಹಾರಗಳವರೆಗೆ ಎಲ್ಲವೂ ಮೊಬೈಲ್‌ನಲ್ಲಿ ಸಾಧ್ಯವಾಗಿದೆ. ಆದರೆ ಇದೇ ಸೌಲಭ್ಯವನ್ನು ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಂಡಿದ್ದಾರೆ.

ಇದೀಗ ಗೂಗಲ್ ಸಂಸ್ಥೆಯು ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಹೊಸ ಎಚ್ಚರಿಕೆ ನೀಡಿದೆ. ಸದ್ಯ ಈ ಮೋಸದ ಸಂದೇಶಗಳ (Spam Message) ಮೂಲಕ ವಂಚನೆ ಹೆಚ್ಚುತ್ತಿದೆ!

“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“
ಪ್ರತಿ ದಿನ ಲಕ್ಷಾಂತರ ಸ್ಪ್ಯಾಮ್ ಸಂದೇಶ (Message) ಗಳು :

ಅಮೆರಿಕಾ ಮತ್ತು ಯುರೋಪ್‌ನಂತಹ ದೇಶಗಳಲ್ಲಿ ಪ್ರತಿದಿನ ಲಕ್ಷಾಂತರ ನಕಲಿ ಸಂದೇಶ (Message) ಗಳು ಬಳಕೆದಾರರಿಗೆ ಕಳುಹಿಸಲಾಗುತ್ತಿವೆ. ಇವು “ನಿಮ್ಮ ಪಾರ್ಸೆಲ್ ತಲುಪಿಲ್ಲ”, “ಟೋಲ್ ಪಾವತಿ ವಿಫಲವಾಗಿದೆ” ಅಥವಾ “ಮರುಪಾವತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ” ಎಂಬ ಶೀರ್ಷಿಕೆಗಳ ಅಡಿಯಲ್ಲಿ ಕಳುಹಿಸಲಾಗುತ್ತದೆ.

ಬಳಕೆದಾರರು ಆ ಲಿಂಕ್ ಕ್ಲಿಕ್ ಮಾಡಿದರೆ, ಅವರ ವೈಯಕ್ತಿಕ ಡೇಟಾ ಹಾಗೂ ಬ್ಯಾಂಕ್ ವಿವರಗಳು ನೇರವಾಗಿ ಹ್ಯಾಕರ್‌ಗಳ ಕೈಗೆ ಸೇರುತ್ತವೆ.

ಗೂಗಲ್ ಮತ್ತು ಆಪಲ್ ನ ಭದ್ರತಾ ಕ್ರಮಗಳು :

ಗೂಗಲ್ ಪ್ರಕಾರ, ಆಂಡ್ರಾಯ್ಡ್ ವ್ಯವಸ್ಥೆಗಳು ಪ್ರತಿ ತಿಂಗಳು ಕೋಟ್ಯಾಂತರ ಸ್ಪ್ಯಾಮ್ ಕರೆಗಳು ಮತ್ತು ಸಂದೇಶ (Message) ಗಳನ್ನು ತಡೆಯುತ್ತಿವೆ. ಜಿಮೇಲ್ ಕೂಡಾ 99.9% ಸ್ಪ್ಯಾಮ್ ಇಮೇಲ್‌ಗಳನ್ನು ತಡೆಹಿಡಿಯುತ್ತದೆ.
ಆದರೆ ಕೆಲವು ಸಂದೇಶಗಳು ಈ ಭದ್ರತಾ ಅಂಚುಗಳನ್ನು ತಪ್ಪಿಸಿಕೊಂಡು ಬಳಕೆದಾರರ ಇನ್‌ಬಾಕ್ಸ್‌ಗೆ ತಲುಪುತ್ತವೆ.

ಇದೇ ವೇಳೆ ಆಪಲ್ ತನ್ನ iOS ವ್ಯವಸ್ಥೆಯಲ್ಲಿ ಹೊಸ ಭದ್ರತಾ ವೈಶಿಷ್ಟ್ಯಗಳನ್ನು ಸೇರಿಸಿದೆ. ಕಾಲ್ ಸ್ಕ್ರೀನಿಂಗ್ ಮತ್ತು ಮೆಸೇಜ್ ಫಿಲ್ಟರ್‌ಗಳು, ಇದು ಅನುಮಾನಾಸ್ಪದ ಸಂದೇಶಗಳನ್ನು ತಡೆಯಲು ಸಹಕಾರಿಯಾಗಿದೆ.

Accident : “ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ; 20 ಮಂದಿ ದುರ್ಮರಣ.!”
ಸ್ಮಿಶಿಂಗ್ ಎಂದರೇನು? :

ಸೈಬರ್ ತಜ್ಞರ ಪ್ರಕಾರ, ಈ ರೀತಿಯ ವಂಚನೆಗೆ “ಸ್ಮಿಶಿಂಗ್ (Smishing)” ಎಂದು ಕರೆಯಲಾಗುತ್ತದೆ̤ ಇದು ಫಿಶಿಂಗ್ (Phishing)‌ನ ಮೊಬೈಲ್ ಆವೃತ್ತಿಯಾಗಿದೆ. ಇವು Message ಅಥವಾ ಮೆಸೇಜಿಂಗ್ ಆಪ್‌ಗಳ ಮೂಲಕ ಬರುವ ವಂಚನೆ ಪ್ರಯತ್ನಗಳು.

ಬಳಕೆದಾರರು ಏನು ಮಾಡಬೇಕು?

ಗೂಗಲ್ ಮತ್ತು ಎಫ್‌ಬಿಐ ಇಬ್ಬರೂ ನೀಡಿರುವ ಸಲಹೆಯ ಪ್ರಕಾರ,

  • ಅಪರಿಚಿತ ಸಂಖ್ಯೆಯಿಂದ ಬಂದ ಸಂದೇಶ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
  • ಯಾವುದೇ ಬ್ಯಾಂಕ್ ಅಥವಾ ಸಂಸ್ಥೆ OTP, ಪಾಸ್‌ವರ್ಡ್ ಅಥವಾ ಖಾತೆ ವಿವರಗಳನ್ನು ಸಂದೇಶ (Message) ದ ಮೂಲಕ ಕೇಳುವುದಿಲ್ಲ ಎಂಬುದನ್ನು ನೆನಪಿಡಿ.
  • ತಪ್ಪಾಗಿ ಲಿಂಕ್ ಕ್ಲಿಕ್ ಮಾಡಿದರೆ ತಕ್ಷಣ ಬ್ಯಾಂಕ್ ಖಾತೆ ಪರಿಶೀಲಿಸಿ, ಪಾಸ್‌ವರ್ಡ್ ಬದಲಾಯಿಸಿ, ಅಗತ್ಯವಿದ್ದರೆ ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ದೂರು ದಾಖಲಿಸಿ.
“ಯುವತಿಯನ್ನು ಕೂರಿಸಿಕೊಂಡು ಅಪಾಯಕಾರಿ Bike ವ್ಹೀಲಿಂಗ್ ; ಮುಂದೆನಾಯ್ತು? ವಿಡಿಯೋ ನೋಡಿ.!”
ಜಾಗೃತಿಯೇ ಸುರಕ್ಷೆ :

ಸೈಬರ್ ವಂಚನೆಗಳು ದಿನದಿಂದ ದಿನಕ್ಕೆ ನವೀನ ರೂಪ ಪಡೆಯುತ್ತಿವೆ. ತಜ್ಞರ ಮಾತಿನಲ್ಲಿ, “ಸ್ವಲ್ಪ ಎಚ್ಚರಿಕೆ ಸಾಕು, ದೊಡ್ಡ ನಷ್ಟವನ್ನು ತಪ್ಪಿಸಬಹುದು.” ಆದ್ದರಿಂದ ಯಾವುದೇ ಸಂದೇಶ (Message) ವನ್ನು ಕ್ಲಿಕ್ ಮಾಡುವ ಮೊದಲು ಯೋಚಿಸಿ.
“ನಿಮ್ಮ ಜಾಗೃತಿಯೇ ನಿಮ್ಮ ಆನ್‌ಲೈನ್ ರಕ್ಷಣೆಯ ಶಕ್ತಿ!”


ನೀವೂ ಮೊಬೈಲ್‌ನಲ್ಲಿ ದೇವರ Wallpaper ಇಟ್ಟುಕೊಂಡಿದ್ದೀರಾ? ತಕ್ಷಣವೇ ತೆಗೆಯಿರಿ ; ಏಕೆ ಗೊತ್ತೆ?

Wallpaper

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿವೆ. ಯಾವುದೇ ವಯೋಮಾನದ, ವಿದ್ಯಾರ್ಥಿಗಳು, ಉದ್ಯೋಗಿಗಳು ಅಥವಾ ಗೃಹಿಣಿಯರಾಗಿರಲಿ ಎಲ್ಲರೂ ತಮ್ಮ ಮೊಬೈಲ್‌ (Mobile) ಫೋನ್‌ನಲ್ಲಿ ತಮ್ಮ ಇಷ್ಟದ ರೀತಿಯಲ್ಲಿ ಕಸ್ಟ್‌ಮೈಸ್‌ ಮಾಡಿಕೊಳ್ಳಲು ಇಷ್ಟಪಡುತ್ತಾರೆ.

ಅದರಲ್ಲೂ ಫೋನ್‌ನ ವಾಲ್‌ಪೇಪರ್‌ (Wallpaper) ಬದಲಾವಣೆ ಮಾಡುವುದು ಸಾಮಾನ್ಯ. ಅನೇಕರು ತಮ್ಮ ಧಾರ್ಮಿಕ ನಂಬಿಕೆ ಅಥವಾ ಭಕ್ತಿಯಿಂದ ದೇವರ ಅಥವಾ ದೇವತೆಗಳ ಚಿತ್ರಗಳನ್ನು ಮೊಬೈಲ್‌ ಪರದೆ (Wallpaper) ಯ ಮೇಲೆ ಹಾಕಿಕೊಳ್ಳುತ್ತಾರೆ.

ಆದರೆ ಇಲ್ಲಿ ಪ್ರಶ್ನೆ ಏನೆಂದರೆ? ಮೊಬೈಲ್‌ನಲ್ಲಿ ದೇವರ ಫೋಟೋ ಇಡುವುದು ಶುಭವೇ? ಅಥವಾ ಅಶುಭವೇ? ಎಂಬುದು. ಇದನ್ನು ಧಾರ್ಮಿಕ ಮತ್ತು ವಾಸ್ತು ದೃಷ್ಟಿಯಿಂದ ವಿವರವಾಗಿ ಇದೀಗ ತಿಳಿದುಕೊಳ್ಳೋಣ ಬನ್ನಿ.

“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“
ಮೊಬೈಲ್‌ ವಾಲ್‌ಪೇಪರ್‌ (Wallpaper) ನಮ್ಮ ಮನಸ್ಸಿನ ಪ್ರತಿಬಿಂಬ :

ನಾವು ಫೋನ್‌ನ ಪರದೆಯ ಮೇಲೆ ಇಡುವ ಚಿತ್ರಗಳು ನಮ್ಮ ವ್ಯಕ್ತಿತ್ವ ಮತ್ತು ಮನೋಭಾವವನ್ನು ತೋರಿಸುತ್ತವೆ ಎಂದು ಪರಿಣಿತರು ಹೇಳುತ್ತಾರೆ. ಅನೇಕರು ದೇವಾಲಯಗಳು ಮತ್ತು ಮಸೀದಿಗಳಂತಹ ಧಾರ್ಮಿಕ ಸ್ಥಳಗಳ ಚಿತ್ರಗಳನ್ನು ಸಹ ಇಡುತ್ತಾರೆ.

ಹಾಗೆಯೇ ದೇವರ ಅಥವಾ ದೇವತೆಗಳ ಚಿತ್ರಗಳನ್ನು ವಾಲ್‌ಪೇಪರ್‌ (Wallpaper) ಆಗಿ ಇಟ್ಟು ಅವರ ಭಕ್ತಿಯನ್ನು ವ್ಯಕ್ತಪಡಿಸಲು ಅದನ್ನು ಬಳಸುತ್ತಾರೆ. ಆದರೆ, ವಾಸ್ತು ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ಅದು ಎಲ್ಲ ಸಂದರ್ಭಗಳಲ್ಲೂ ಶುಭಕರವಲ್ಲ.

ಮದುವೆಯಾಗು ಎಂದ Girlfriend ; ಗುಂಡಿ ತೋಡಿ ಹೂತು ಹಾಕಿದ ಪ್ರಿಯಕರ.!
ದೇವರ ಚಿತ್ರವನ್ನು ಫೋನ್‌ನಲ್ಲಿ ಇಡುವುದು ಅಶುಭವೇ?

ಪಾರಂಪರಿಕ ನಂಬಿಕೆಯ ಪ್ರಕಾರ, ದೇವರ ಅಥವಾ ದೇವತೆಗಳ ಫೋಟೋವನ್ನು ಮೊಬೈಲ್‌ನಲ್ಲಿ ಇಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದರ ಪ್ರಮುಖ ಕಾರಣ ಎಂದರೆ,

  • ನಾವು ಫೋನ್‌ ಅನ್ನು ಎಲ್ಲೆಡೆ ಬಳಸುತ್ತೇವೆ. ಕೆಲವೊಮ್ಮೆ ಬಾತ್ರೂಮ್‌, ಬೆಡ್‌ರೂಮ್ ಅಥವಾ ಅಶುದ್ಧ ಸ್ಥಳಗಳಲ್ಲಿ ಕೂಡ.
  • ದೇವರ ಚಿತ್ರವನ್ನು ಇಂತಹ ಸ್ಥಳಗಳಲ್ಲಿ ತೋರಿಸುವುದು ಅಗೌರವಕರವಾದ ಕೃತ್ಯ ಎನ್ನಲಾಗಿದೆ.
  • ಇದು ನಮ್ಮ ಭಕ್ತಿಯನ್ನು ತೋರಿಸುವ ಬದಲಿಗೆ ಅಪರೋಕ್ಷವಾಗಿ ಪಾಪದ ಕೆಲಸ ಎಂದು ಧಾರ್ಮಿಕರು ನಂಬುತ್ತಾರೆ.
ರಾಜ್ಯದಲ್ಲಿ “Aarogya Kavacha” ಸೇವೆ ಬಲಪಡಿಸಲು 3,691 ಹೊಸ ಹುದ್ದೆಗಳ ಸೃಷ್ಟಿ.!
ಪ್ರತಿಕೂಲ ಪರಿಣಾಮಗಳ ಸಾಧ್ಯತೆ :

ವಾಸ್ತು ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವರ ಚಿತ್ರವನ್ನು ಮೊಬೈಲ್‌ನಲ್ಲಿ ಇಡುವುದರಿಂದ ಕೆಲವು ನಕಾರಾತ್ಮಕ ಶಕ್ತಿಗಳು ಆಕರ್ಷಿತರಾಗಬಹುದು ಎಂದು ಹೇಳಲಾಗುತ್ತದೆ.

ಅಶುದ್ಧ ಕೈಗಳಿಂದ ಅಥವಾ ಅಶುದ್ಧ ಸ್ಥಳಗಳಲ್ಲಿ ಫೋನ್ ಬಳಸುವುದರಿಂದ ದೇವರ ಚಿತ್ರಕ್ಕೆ ಅಪಮಾನ ಆಗುತ್ತದೆ ಎನ್ನುವುದು ನಂಬಿಕೆ. ಇದರ ಪರಿಣಾಮವಾಗಿ ಕುಟುಂಬದಲ್ಲಿ ಕಲಹ, ಮನಸ್ಸಿನಲ್ಲಿ ಅಶಾಂತಿ ಅಥವಾ ಆರ್ಥಿಕ ಸಮಸ್ಯೆಗಳು ಎದುರಾಗಬಹುದು ಎಂಬ ಧಾರ್ಮಿಕ ಅಭಿಪ್ರಾಯವಿದೆ.

ಯಾವ ರೀತಿಯ ವಾಲ್‌ಪೇಪರ್‌ (Wallpaper) ಗಳನ್ನು ಇಡಬಾರದು?
  • ದೇವರ ಅಥವಾ ದೇವತೆಗಳ ಚಿತ್ರಗಳನ್ನು,
  • ಧಾರ್ಮಿಕ ಸ್ಥಳಗಳ ಫೋಟೋಗಳು (ಮಂದಿರ, ಮಸೀದಿ, ಚರ್ಚ್‌ ಇತ್ಯಾದಿ) ಮತ್ತು
  • ಅತ್ಯಂತ ಗಾಢ ಬಣ್ಣದ ಅಥವಾ ಕತ್ತಲಾದ ಹಿನ್ನೆಲೆಯ ವಾಲ್‌ಪೇಪರ್‌ (Wallpaper).
Dog : ಮಾಲೀಕನ ಸಾವು ಸಹಿಸಲಾರದೆ ನಾಯಿ ಕೂಡ ಬಿಟ್ಟಿತು ಪ್ರಾಣ..!

ಇವುಗಳ ಬದಲು ಪ್ರಕೃತಿ ದೃಶ್ಯಗಳು, ಪಾಸಿಟಿವ್‌ ಮಂತ್ರಗಳ ಉಲ್ಲೇಖಗಳು ಅಥವಾ ಹಲಸುಬಣ್ಣದ ಹಿನ್ನೆಲೆಗಳು ಮೊಬೈಲ್‌ ಪರದೆಗೆ ಉತ್ತಮ ಪರಿಣಾಮ ನೀಡುತ್ತವೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಸಂಪಾದಕೀಯ :

ದೇವರ ಮೇಲಿನ ಭಕ್ತಿ ಮನಸ್ಸಿನೊಳಗಿರಬೇಕು, ಮೊಬೈಲ್‌ ಪರದೆಯಲ್ಲಲ್ಲ (Wallpaper) ಎಂಬ ನಂಬಿಕೆ ಇದೆ. ಮೊಬೈಲ್‌ನಲ್ಲಿ ದೇವರ ಚಿತ್ರವನ್ನು ಇಡುವ ಬದಲು, ಪ್ರತಿದಿನ ಬೆಳಿಗ್ಗೆ ದೇವರ ಸ್ಮರಣೆ ಮಾಡುವುದೇ ಹೆಚ್ಚು ಶುಭಕರ. ದೇವರ ಚಿತ್ರಗಳನ್ನು ಮನೆಯ ಪೂಜಾಮಂಟಪದಲ್ಲಿ ಅಥವಾ ಧ್ಯಾನಸ್ಥಳದಲ್ಲಿ ಇಡುವುದು ಉತ್ತಮ ಫಲಿತಾಂಶ ನೀಡುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ.

“ಸ್ನೇಹಿತನ ಜೊತೆ ಇದ್ದ MBA ವಿದ್ಯಾರ್ಥಿನಿಯನ್ನು ಹೊತ್ತೊಯ್ಯ್ದು ದೌರ್ಜನ್ಯ ; ಪೊಲೀಸರಿಂದ ಶೋಧ.!”

ಅಂತಿಮವಾಗಿ ಹೇಳುವುದೇನೆಂದರೆ, ದೇವರ ಚಿತ್ರವನ್ನು ಮೊಬೈಲ್‌ ವಾಲ್‌ಪೇಪರ್‌ (Wallpaper) ಆಗಿ ಬಳಸುವುದು ಧಾರ್ಮಿಕ ದೃಷ್ಟಿಯಿಂದ ಅಶುಭವೇ ಹೊರತು ಶುಭವಲ್ಲ. ಅದಕ್ಕಾಗಿಯೇ ಭಕ್ತಿಯನ್ನೂ ಗೌರವವನ್ನೂ ಸರಿಯಾದ ಸ್ಥಳದಲ್ಲಿ ಪ್ರದರ್ಶಿಸುವುದು ಅತ್ಯಂತ ಅಗತ್ಯ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments