Thursday, April 25, 2024
spot_img
spot_img
spot_img
spot_img
spot_img
spot_img

Inhuman incident : ವೃದ್ಧ ಮಾವನನ್ನು ವಾಕಿಂಗ್ ಸ್ಟಿಕ್​​ನಿಂದ ಹೊಡೆದ ಸೊಸೆಯ ಬಂಧನ.!

spot_img

ಜನಸ್ಪಂದನ ನ್ಯೂಸ್, ಮಂಗಳೂರು :  ಇತ್ತೀಚಿಗೆ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಒಂದು ಕಾಲದಲ್ಲಿ ಅಜ್ಜ- ಅಜ್ಜಿ, ತಂದೆ – ತಾಯಿ, ಒಡಹುಟ್ಟಿದ ಅಣ್ಣ- ತಮ್ಮ, ಅಕ್ಕ- ತಂಗಿ, ಅಷ್ಟೆ ಏಕೆ, ಗಂಡ -ಹೆಂಡತಿ, ಅತ್ತೆ– ಮಾವ ಹೀಗೆ ಇಲ್ಲರು ಇಂದೇ ಮನೆಯಲ್ಲಿಯೇ ಸುಖ-ಸಂತೋಷದಿಂದ ಬದುಕಿ ಬಾಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಅವರು ನಮ್ಮವರು, ಇವರು ನಮ್ಮವರು ಅಂತ ಹೇಳಿಕೊಳ್ಳಲು ಅಸೂಯ ಪಡುತ್ತಿರುವುದು ದುರ್ದೈವದ ಸಂಗತಿಯಾಗಿದೆ.

ಈಗೇಕೆ ಈ ವಿಶೇಷ ಅಂದರೆ, ಇಲ್ಲೋಬ್ಬ ಮಹಾ ತಾಯಿ (ಸೊಸೆ ) ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್​​ನಲ್ಲಿ ಮನಸ್ಸೋ ಇಚ್ಚೆ ತಳಿಸಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಂಚೆ ಇಲಾಖೆಯಲ್ಲಿ 55,000 ಹುದ್ದೆಗಳ ನೇಮಕಾತಿ ; ಶೀಘ್ರದಲ್ಲಿ ಅರ್ಜಿ ಆಹ್ವಾನ.!

ಇಂತಹ ಅಮಾನವೀಯ ಘಟನೆಯೊಂದು ಮಂಗಳೂರು ನಗರದಲ್ಲಿ ನಡೆದಿದ್ದು, ಘಟನೆ ಮಾರ್ಚ್ 9 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮಾವ ಪದ್ಮನಾಭ ಸುವರ್ಣ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ ಸೊಸೆಯನ್ನು ಉಮಾಶಂಕರಿ ಎಂದು ತಿಳಿದು ಬಂದಿದೆ. ಪತಿ ವಿದೇಶದಲ್ಲಿದ್ದು ಮನೆಯಲ್ಲಿ ಕೇವಲ ಮಾವ ಅತ್ತೆ ಮಾತ್ರ ಇದ್ದರು. ಸಿಸಿಟಿವಿ ಆಧರಿಸಿ ಪತಿ ಠಾಣೆಗೆ ದೂರು ನೀಡಿದ್ದು, ಕಂಕನಾಡಿ ಪೊಲೀಸರಿಂದ ಉಮಾಶಂಕರಿಯನ್ನು ಬಂಧಿಸಲಾಗಿದೆ.

ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.30,000 ಸ್ಕಾಲರ್ಶಿಪ್ ; ಈಗಲೇ ಅರ್ಜಿ ಸಲ್ಲಿಸಿ.!

ಶರ್ಟ್​ನ್ನು ಸೋಫಾ ಮೇಲೆ ಇಟ್ಟ ವಿಚಾರಕ್ಕೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಮಾವ ಪದ್ಮನಾಭ ಸುವರ್ಣ (87) ತಮ್ಮ ಶರ್ಟ್ ಬಿಚ್ಚಿ ಸೋಫಾ ಮೇಲೆ ಇಟ್ಟಿದ್ದರು. ಅದನ್ನು ನೋಡಿ ಕೆಂಡವಾಗಿದ್ದ ಪಾಪಿ ಸೊಸೆ‌. ‘ಹೋಗಿ ಸಾಯಿ’ ಎಂದು ಹಲ್ಲೆ‌ ಮಾಡಿದ್ದಾರೆ.

ಸದ್ಯ ಉಮಾಶಂಕರಿ ವಿರುದ್ಧ ವೃದ್ಧರ ಮಗಳು ಪ್ರಿಯಾ ಎಂಬುವವರಿಂದ ಕೊಲೆಯತ್ನ ದೂರು ದಾಖಲು ಮಾಡಲಾಗಿದೆ.  (ಎಜೇನ್ಸಿಸ್)

spot_img
spot_img
spot_img
- Advertisment -spot_img