Thursday, April 25, 2024
spot_img
spot_img
spot_img
spot_img
spot_img
spot_img

ಹೋಳಿ ಹಬ್ಬದಂದು ಈ 5 ವಸ್ತುಗಳನ್ನು ತರುವುದು ಅದೆಷ್ಟು ಅದೃಷ್ಟ ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಹೋಳಿ ಹಬ್ಬವನ್ನು (Holi festival) ದೇಶಾದ್ಯಂತ ಆಚರಿಸಲಾಗುತ್ತದೆ. ಈ ಬಣ್ಣದ ಹಬ್ಬವು ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಅಚ್ಚುಮೆಚ್ಚು. ಹಾಗಾಗಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ.

ಈ ವರ್ಷ, ಹೋಳಿ ಹಬ್ಬವನ್ನು ಮಾರ್ಚ್ 25 ರಂದು ಆಚರಿಸಲಾಗುವುದು. ಹುಣ್ಣಿಮೆ ತಿಥಿಯು ಮಾ. 24 ರಂದು ಬೆಳಿಗ್ಗೆ 09:54ಕ್ಕೆ ಆರಂಭವಾಗಿ, ಮಾ. 25 ರಂದು ಮಧ್ಯಾಹ್ನ 12:29 ಕ್ಕೆ ಕೊನೆಗೊಳ್ಳುತ್ತದೆ (end).

ಇದನ್ನು ಓದಿ : Video : ಎಲ್ಲಿದ್ರೂ ಬಿಡಲ್ಲ ನಮ್ ಜನ ; ಕೊನೆಗೂ ಪತ್ತೇಯಾಗಿಯೇ ಬಿಡ್ತು ಕರಿಮಣಿ ಮಾಲೀಕನ ಊರು..?

ಇನ್ನು ಹೋಳಿ ಹಬ್ಬದಂದು ಕೆಲವು ವಸ್ತುಗಳನ್ನು ಮನೆಗೆ ಕೊಂಡುಕೊಂಡು (sail) ಬರಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

* ಆಮೆಯನ್ನು (Turtle) ಬಹಳ ಪವಿತ್ರ ಜೀವಿ ಎಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಹೋಳಿ ಹಬ್ಬದ ದಿನ ಲೋಹದ ಆಮೆಯನ್ನು ಖರೀದಿಸಿ ಮನೆಗೆ ತರುವುದು ಶುಭವೆಂದು ಪರಿಗಣಿಸಲಾಗುತ್ತದೆ.

ಮನೆಯ ಪೂಜಾ ಸ್ಥಳದಲ್ಲಿ ಇದನ್ನು ಇಡುವುದು ಒಳ್ಳೆಯದು. ಈ ಪರಿಹಾರದಿಂದ, ಲಕ್ಷ್ಮೀ ದೇವಿಯು ಸಂತೋಷಪಡುತ್ತಾಳೆ ಮತ್ತು ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಯಾಗುತ್ತಾಳೆ.

ಇದನ್ನು ಓದಿ : ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.30,000 ಸ್ಕಾಲರ್ಶಿಪ್ ; ಈಗಲೇ ಅರ್ಜಿ ಸಲ್ಲಿಸಿ.!

* ಹೋಳಿ ಹಬ್ಬದಂದು ನಿಮ್ಮ ಮನೆಗೆ ಬಿದಿರಿನ ಸಸ್ಯವನ್ನು ತನ್ನಿ. ಇದು ನಿಮ್ಮ ಮನೆಗೆ ಅದೃಷ್ಟ (good luck) ತರುತ್ತದೆ. ಇದು ಕುಟುಂಬ ಸದಸ್ಯರ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ.

* ಸುಂದರವಾದ ತೋರಣಗಳನ್ನು ನಿಮ್ಮ ಮನೆಗೆ ತಂದು ಮನೆಯ ಮುಖ್ಯ ಬಾಗಿಲಿಗೆ ನೇತುಹಾಕಿ. ಇದು ಮನೆಯ ವಾಸ್ತು ದೋಷಗಳನ್ನು ನಿವಾರಿಸುವುದಲ್ಲದೆ ತುಂಬಾ ಸುಂದರವಾಗಿ ಕಾಣುತ್ತದೆ.

* ಅಕ್ವೇರಿಯಂ (Aquarium) ಅನ್ನು ಕುಬೇರನ ಸ್ಥಳವೆಂದು ಪರಿಗಣಿಸಲಾಗಿರುವುದರಿಂದ ಇದನ್ನು ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಿ. ಇದು ಮನೆಯಲ್ಲಿ ಇದ್ದಲ್ಲಿ ಸಂತೋಷ, ಸಮೃದ್ಧಿಯನ್ನು ಕಾಪಾಡುತ್ತದೆ. ಮನೆಯಲ್ಲಿ ಆರ್ಥಿಕ ಸ್ಥಿತಿ ಹದಗೆಡುವುದಿಲ್ಲ ಎನ್ನಲಾಗುತ್ತದೆ. ಹಾಗಾಗಿ ಮನೆಯಲ್ಲಿ ಅಕ್ವೇರಿಯಂ ತಂದು ಇಡಬಹುದು.

* ಡ್ರ್ಯಾಗನ್ ಪ್ರತಿಮೆ (Dragon statue) ಅಥವಾ ಚಿತ್ರವನ್ನು ಇಡುವುದು ಸಹ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ಮನೆಯ ಸದಸ್ಯರಿಗೆ ದುಷ್ಟ ಶಕ್ತಿಗಳಿಂದ ತೊಂದರೆಯಾಗದಂತೆ ಮತ್ತು ದೃಷ್ಟಿ ದೋಷದಿಂದ ಬಳಲುವುದನ್ನು ತಪ್ಪಿಸುತ್ತದೆ.

ಇದನ್ನು ಓದಿ : ಮಾಲೀಕನಿಗಾಗಿ ಆಸ್ಪತ್ರೆಯಲ್ಲೇ ಉಳಿದ ನಾಯಿ ; ಹೃದಯಸ್ಪರ್ಶಿ ವಿಡಿಯೋ Virul.!

* ಹೋಳಿ ಹಬ್ಬದ ದಿನ ಬೆಳ್ಳಿಯ ನಾಣ್ಯವನ್ನು (silver coin) ಖರೀದಿಸಿ ಮನೆಗೆ ತನ್ನಿ. ಈ ರೀತಿ ಮಾಡುವುದರಿಂದ ಮನೆಯಲ್ಲಿನ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈ ಬೆಳ್ಳಿಯ ನಾಣ್ಯವನ್ನು ಕೆಂಪು ಅಥವಾ ಹಳದಿ ಬಟ್ಟೆಯಲ್ಲಿ ಸುತ್ತಿ, ಅದರ ಮೇಲೆ ಅರಿಶಿನವನ್ನು ಹಚ್ಚಿ ಒಳ್ಳೆಯ ಜಗದಲ್ಲಿ ಇರಿಸಿ.

spot_img
spot_img
spot_img
- Advertisment -spot_img