Thursday, April 25, 2024
spot_img
spot_img
spot_img
spot_img
spot_img
spot_img

Video : ಎಲ್ಲಿದ್ರೂ ಬಿಡಲ್ಲ ನಮ್ ಜನ ; ಕೊನೆಗೂ ಪತ್ತೇಯಾಗಿಯೇ ಬಿಡ್ತು ಕರಿಮಣಿ ಮಾಲೀಕನ ಊರು..?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿಗಂತೂ ಸೋಶಿಯಲ್ ಮೀಡಿಯಾಗಳಲ್ಲಿ ಕರಿಮಣಿ ಮಾಲೀಕ (Karimani malik) ನೀ ನಲ್ಲ ಹಾಗೂ ಕರಿಮಣಿ ಮಾಲೀಕ ರಾಹುಲ್ಲಾ ಹಾಡು ಸಖತ್ ಟ್ರೆಂಡ್ ಸೃಷ್ಟಿ ಮಾಡಿದೆ.

ಎಲ್ಲಿ ನೋಡಿದ್ರೂ ಈ ಹಾಡಿನ ರೀಲ್ಸ್ ವಿಡಿಯೋ, ಟ್ರೋಲ್ (troll) ಮೀಮ್ಸ್ ಗಳು ಹರಿದಾಡುತ್ತಿವೆ. ಈ ಮಧ್ಯೆ ಕರಿಮಣಿ ಮಾಲೀಕನ ಊರಿನ ಕುರಿತ ಟ್ರೋಲ್ ವಿಡಿಯೋವೊಂದು ಸಖತ್ ವೈರಲ್ ಆಗ್ತಿದೆ.

ನಾಯಕನ ಮಾತು ಕೇಳಿ ಪ್ರಾಣ ಉಳಿಸಿಕೊಂಡ ಆಟಗಾರ ; ಭಯಾನಕ Video ನೋಡಿ.!

ವಿಡಿಯೋದಲ್ಲಿರುವ ದೃಶ್ಯ :

ಒಂದು ಊರಿನ ರಸ್ತೆಯ ಪಕ್ಕದಲ್ಲಿರುವ ನಾಮಫಲಕದಲ್ಲಿ (nameplate) ಕರಿಮಣೀಲು ಎಂಬ ಹೆಸರನ್ನು ಬರೆದಿರುವುದನ್ನು ಕಾಣಬಹುದು. ʼಕರಿಮಣೇಲುʼ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ (Beltangadi) ತಾಲೂಕಿನ ವೇಣೂರು ಎಂಬ ಊರಿಗೆ ಸಮೀಪದಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ.

ಈ ವಿಡಿಯೋವನ್ನು ಬಾನದಾರಿ ಮಿಮ್ಸ್ (@baanadaari_memes) ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ಕರಿಮಣಿ ಮಾಲೀಕನ ಊರು ಸಿಕ್ಬಿಡ್ತು” ಎಂಬ ತಮಾಷೆಯ ಶೀರ್ಷಿಕೆಯನ್ನು ನೀಡಲಾಗಿದೆ. ಸದ್ಯ ಈ ವಿಡಿಯೋ 2.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ.

ಮಾಲೀಕನಿಗಾಗಿ ಆಸ್ಪತ್ರೆಯಲ್ಲೇ ಉಳಿದ ನಾಯಿ ; ಹೃದಯಸ್ಪರ್ಶಿ ವಿಡಿಯೋ Virul.!

ನಮ್ ಜನ ಸಾಕ್ಷಿ (witness) ಎಲ್ಲಿದ್ರೂ ಬಿಡಲ್ಲ ಹುಡ್ಕಿ ಕೇಸ್ ಕ್ಲೋಸ್ ಮಾಡ್ತಾರೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಕರಿಮಣೇಲು ಇದು ನಮ್ಮ ಗ್ರಾಮ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಅಬ್ಬಬ್ಬಾ ಕೊನೆಗೂ ಸಿಕ್ತಲ್ಲಾ ಕರಿಮಣಿ ಮಾಲೀಕನ ಊರು ಎಂದು ತಮಾಷೆ ಮಾಡಿದ್ದಾರೆ. ಅಂತೂ ಇಂತೂ ಕರಿಮಣಿ ಮಾಲೀಕನ ಊರನ್ನು ಹುಡುಕಿದ್ರಲ್ಲಾ ಎಂದು ಒಬ್ಬರು ಕಮೆಂಟ್ (comments) ಮಾಡಿದ್ದಾರೆ.

spot_img
spot_img
spot_img
- Advertisment -spot_img