Tuesday, September 17, 2024
spot_img
spot_img
spot_img
spot_img
spot_img
spot_img
spot_img

ಪೆಟ್ರೋಲ್ ಹಾಗೂ ಡೀಸೆಲ್ ಹಾಕಿಸುವ ವಾಹನ ಮಾಲೀಕರಿಗೆ ಕೇಂದ್ರದ ದೊಡ್ಡ Order.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್ : ನಿಮ್ಮ ಬಳಿ ಯಾವೂದಾದರು ವಾಹನವಿದೆಯೇ.? ಹಾಗಾದ್ರೆ ಖಂಡಿತಾ ಈ ಸುದ್ದಿ ಓದಿ.!

ಪೆಟ್ರೋಲ್/ಡೀಸೆಲ್ ಪಂಪ್ (Petrol and Diesel Pump) ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮೋಸಕ್ಕೊಳಗಾಗುತ್ತಿದ್ದಾರೆ. ಈ ಕುರಿತು ಗಮನ ಹರಿಸಿರುವ ಕೇಂದ್ರ ಸರ್ಕಾರ ವಿಶೇಷ ಸೂಚನೆಯನ್ನು ಹೊರಡಿಸಿದೆ.

ಇದನ್ನು ಓದಿ : Health : ಪನೀರ್ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

ಪಂಪ್‌ಗಳಲ್ಲಿ ಮಾಲೀಕರು ಯಾವ ರೀತಿ ಗ್ರಾಹಕರನ್ನು ವಂಚಿಸುತ್ತಾರೆ.?

ಪೆಟ್ರೋಲ್/ಡೀಸೆಲ್ ಪಂಪ್ ಮಾಲೀಕರು ಗ್ರಾಹಕರಿಗೆ ಹೇಗೆ ವಂಚಿಸುತ್ತಾರೆ ಎಂಬುದರ ಕುರಿತು ಕೇಂದ್ರ ಸರ್ಕಾರ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಇನ್ನು ಮುಂದೆ ನೀವು ನಿಮ್ಮ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಳ್ಳುವಾಗ ತಪ್ಪದೆ ಈ ಕೆಲ ಪ್ರಕ್ರಿಯೆಯನ್ನು ಗಮನವಿಟ್ಟು ನೋಡಿ.

* ಸಾಂದ್ರತೆ (Density) :

ಸಾಂದ್ರತೆ ಎಂದರೆ ನಿರ್ದಿಷ್ಟ ಪ್ರಮಾಣದಲ್ಲಿ ಪ್ಯಾಕ್ ಮಾಡಲಾದ ಶಕ್ತಿಯ ಅಳತೆ. ಪೆಟ್ರೋಲ್/ಡೀಸೆಲ್ ಸಾಂದ್ರತೆಯು ನಿಮ್ಮ ವಾಹನ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ.

ಭಾರತ ಸರ್ಕಾರ ಹೊರಡಿಸಿರುವ ಪ್ರಕಟಣೆಯ ಪ್ರಕಾರ ಪೆಟ್ರೋಲ್ 720-775 KG/M³ ಹಾಗೂ ಡೀಸೆಲ್ 820-880 KG/M³ ನಷ್ಟು ಸಾಂದ್ರತೆ (Density)ಯನ್ನು ಕಡ್ಡಾಯವಾಗಿ ಹೊಂದಿರಬೇಕು. ಈ ಮೇಲ್ಕಂಡ ಅಳತೆಗಿಂತ ಸಾಂದ್ರತೆ (Density)ಯಲ್ಲಿ ವ್ಯತ್ಯಾಸ ಇದ್ದರೆ, ನಿಮ್ಮ ವಾಹನ ಸಮಸ್ಯೆಗೀಡಾಗಿ ಲಕ್ಷಗಟ್ಟಲೆ ಹಣ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹೀಗಾಗಿ ಮುಂದಿನ ಬಾರಿ ಪೆಟ್ರೋಲ್ ಹಾಕಿಸುವಾಗ ಮೀಟರ್ ನಲ್ಲಿ ಇಂಧನದ ಸಾಂದ್ರತೆ (Density) ಎಷ್ಟಿದೆ ಎಂಬುದನ್ನು ತಪ್ಪದೆ ಪರಿಶೀಲಿಸಿ.

ಇದನ್ನು ಓದಿ : ಹಾವು-ಮುಂಗುಸಿ ಬದ್ಧವೈರಿಗಳಾಗಲು ಕಾರಣವೇನು.? ; ಹಾವು-ಮುಂಗುಸಿ ಕಾದಾಟದ Video ನೋಡಿ.!

* ಮೀಟರ್ ರೀಡಿಂಗ್ (Meter Reading) :

ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸುವಂತಹ ಸಂದರ್ಭದಲ್ಲಿ ನೀವು ಹೇಳಿರುವ ಮೊತ್ತಕ್ಕೆ ಅವರು ಪೆಟ್ರೋಲ್ ಅಥವಾ ಡೀಸೆಲ್ (Petrol and Diesel) ಅನ್ನು ಹಾಕುವಂತಹ ಸಂದರ್ಭದಲ್ಲಿ ಮೀಟರ್ ರೀಡಿಂಗ್ (Meter Reading) 0.00 ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆನಂತರ ಮೀಟರ್ ರೀಡಿಂಗ್ 0.೦೦ ಯಿಂದ 2.00ಕ್ಕೆ ಚಾಲಿತಗೊಂಡರೆ ಯಾವುದೇ ಸಮಸ್ಯೆ ಇಲ್ಲ, ಮೊದಲಿಗೆ 0 ಯಿಂದ‌ 5.00ಕ್ಕೆ ಜಂಪ್ ಆದರೆ ಪೆಟ್ರೋಲ್ ಘಟಕದವರು ಶಾರ್ಟ್ ಫ್ಯುಲಿಂಗ್ (Short Fueling) ಮಾಡಿ ವಂಚಿಸುತ್ತಿದ್ದಾರೆ ಎಂದರ್ಥ.

ಜನಸ್ಪಂದನ ನ್ಯೂಸ್, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

ಪೆಟ್ರೋಲ್/ಡೀಸೆಲ್ ಪಂಪ್ ಮೇಲೆ ಗ್ರಾಹಕರು ದೂರು ನೀಡಬಹುದು :

ನಿಮ್ಮ ವಾಹನಕ್ಕೆ ಹಾಕಿದಂತಹ ಇಂಧನದಲ್ಲಿ ನಿಮಗೆ ಯಾವುದೇ ರೀತಿಯ ಸಂದೇಹ ಮೂಡಿದರೆ ಗ್ರಾಹಕರು ಕಾನೂನು ಬದ್ಧವಾಗಿ ದೂರನ್ನು ದಾಖಲಿಸಬಹುದು ಅಥವಾ ರಾಷ್ಟ್ರೀಯ ಗ್ರಾಹಕರ ಸಹಾಯವಾಣಿ ಸಂಖ್ಯೆ 1915 ಗೆ ಕರೆ ಮಾಡಿ ಆ ಘಟಕದ ವಿರುದ್ಧ ದೂರು ದಾಖಲಿಸಬಹುದು. (ಎಜೇನ್ಸಿಸ್)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img