Saturday, July 13, 2024
spot_img
spot_img
spot_img
spot_img
spot_img
spot_img

Special news : ಎಷ್ಟೇ ಆಪ್ತರಿರಲೀ ಅವರ ಬಳಿ ನೀವು ಇಂತಹ ವಿಷಯಗಳನ್ನು ಹಂಚಿಕೊಳ್ಳಲೇಬೇಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವು ಜನರು ತಮಗೆ ಏನೇ ವಿಚಾರ ಗೊತ್ತಾದರೂ ಅದನ್ನು ಊರೆಲ್ಲ ಡಂಗೂರ ಸಾರಿ ಬರುತ್ತಾರೆ. ಅಂತೆಯೇ ಮನೆ, ಜಾಗ, ಕಾರು (car) ಮುಂತಾದಗಳ ಖರೀದಿಗೂ ಮೊದಲೇ ಎಲ್ಲರಿಗೂ ಹೇಳಿಕೊಂಡು ಬರುವ ಅಭ್ಯಾಸ ಬಹಳಷ್ಟು ಮಂದಿಗಿರುತ್ತದೆ.

ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ಏಕೆಂದರೆ ನಿಮ್ಮ ಕೆಲವು ಖಾಸಗಿ ಸಂಗತಿಗಳನ್ನು (Private facts) ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದರಿಂದ ನೀವು ಅಂದುಕೊಂಡ ಕೆಲಸ ಕೆಡಬಹುದು.

ಇದನ್ನು ಓದಿ : ಹೋಟೆಲ್​ನ ಒಂದೇ ರೂಂನಲ್ಲಿ ಓರ್ವ ಯುವತಿ ಜೊತೆ 6 ಯುವಕರು ; ದಾಳಿ ಮಾಡಿದ ಪೊಲೀಸರಿಗೆ ಶಾಕ್.!

ಹಾಗಾದರೆ ನಾವು ಎಂತಹ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು (share) ಅಂತ ತಿಳಿಯೋಣ ಬನ್ನಿ.

* ಕುಟುಂಬದ ವಿಷಯಗಳು :
ಮನೆಯ ಕೌಟುಂಬಿಕ ವಿಷಯಗಳನ್ನು ಎಲ್ಲಿಯೂ ಹಂಚಿಕೊಳ್ಳಬಾರದು. ಇದು ಇನ್ನೊಬ್ಬರ ಮಾತಿಗೆ ವಿಷಯವಾಗುತ್ತದೆ. ಅದರ ಹೊರತಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ (solution) ಸಿಗುವುದಿಲ್ಲ. ಹಾಗಾಗಿ ಮನೆಯ ವಿಷಯಗಳನ್ನು ಮನೆಯವರೊಂದಿಗೆ ಕುಳಿತು ಬಗೆಹರಿಸಿಕೊಳ್ಳಿ.

* ಸಂಸಾರದ ಸಮಸ್ಯೆಗಳು (Family problems) :
ಮನಸ್ಸನ್ನು ಹಗುರ ಮಾಡಿಕೊಳ್ಳಲು ಬೇರೆಯವರ ಜೊತೆಗೆ ನಿಮ್ಮ ಸಂಸಾರದ ವಿಷಯಗಳನ್ನು ಹೇಳಿಕೊಂಡಲ್ಲಿ ಮುಂದೆ ಅದೇ ನಿಮಗೆ ಮುಳುವಾಗಬಹುದು. ಏಕೆಂದರೆ ನಿಮ್ಮ ಸಮಸ್ಯೆಗೆ ಪರಿಹಾರ ನೀಡುವುದಕ್ಕಿಂತ, ಮನದೊಳಗೆ ಖುಷಿ ಪಡುವವರೇ ಹೆಚ್ಚಿರುತ್ತಾರೆ. ಹಾಗಾಗಿ ಸಾಧ್ಯವಾದಷ್ಟು ಆ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಿ.

* ಪ್ರಗತಿಯಲ್ಲಿರುವ ಕೆಲಸಗಳು :
ನೀವು ಜಾಗ, ವಾಹನ ಅಥವಾ ನಿವೇಶನ ಖರೀದಿಸಬೇಕು ಎಂದು ಬಯಸಿದ್ದಲ್ಲಿ ಅಥವಾ ಅದಕ್ಕೆ ಪೂರ್ವ ತಯಾರಿ (Preparation) ಮಾಡಿಕೊಳ್ಳುತ್ತಿರುವಾಗ ಯಾವುದೇ ಕಾರಣಕ್ಕೂ ಅದನ್ನು ಇನ್ನೊಬ್ಬರ ಬಳಿ ಹಂಚಿಕೊಳ್ಳಲೇಬೇಡಿ.

ಇದನ್ನು ಓದಿ : Health : ಅತಿಯಾಗಿ ಬಾಯಾರಿಕೆಯಾಗ್ತಿದೆಯಾ.? ಇದು ಈ ರೋಗದ ಲಕ್ಷಣವಾಗಿರಬಹುದು.!

ಏಕೆಂದರೆ ಅಸೂಯೆ (Jealousy) ಯಾವ ಕೆಲಸವನ್ನಾದರೂ ಕೆಡಿಸಬಹುದು. ಹಾಗಾಗಿ ಅಂದುಕೊಂಡ ಪೂರ್ವ ನಿಯೋಜಿತ ಕೆಲಸಗಳು ಮುಗಿಯುವವರೆಗೆ ಯಾರಿಗೂ ಹೇಳದಂತೆ ನೋಡಿಕೊಳ್ಳುವುದು ಒಳಿತು.

* ಕನಸು ಮತ್ತು ಆಕಾಂಕ್ಷೆ :
ಜೀವನದಲ್ಲಿ ನಾವು ಹತ್ತು ಹಲವಾರು ರೀತಿಯಲ್ಲಿ ಕನಸು ಕಾಣುತ್ತೇವೆ. ಅದು ಸಾಕಾರಗೊಳ್ಳುವಷ್ಟು ಶಕ್ತಿಯೂ ಇರುತ್ತದೆ. ಆದರೆ ಆ ಕನಸು ಮತ್ತು ಆಕಾಂಕ್ಷೆಗಳನ್ನು (Dreams and aspirations) ನೀವು ತುಂಬಾ ನಂಬಿರುವವರು, ಆತ್ಮೀಯರ ಜೊತೆಗೂ ಕೂಡ ಹಂಚಿಕೊಳ್ಳಬೇಡಿ. ಏಕೆಂದರೆ ನಾವು ನಂಬಿ ಹೇಳಿರುವ ವಿಷಯಗಳು ಈಡೇರುವುದಕ್ಕಿಂತ, ವಿಫಲಗೊಳ್ಳುವುದೇ (fail) ಹೆಚ್ಚು. ಹಾಗಾಗಿ ನಿಮ್ಮ ಆಸೆಗಳನ್ನು ಯಾರೊಂದಿಗೂ ಹೇಳಬೇಡಿ.

* ಸಂಬಳ ಹಾಗೂ ಹಣದ ವಿಷಯಗಳು :
ಎಷ್ಟೇ ಆಪ್ತರಾಗಿರಲಿ, ನೀವು ಎಷ್ಟು ಸಂಪಾದನೆ ಮಾಡುತ್ತಿದ್ದೀರಿ ಎಂಬ ವಿಚಾರವನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಹೇಳಬೇಡಿ‌.

ಇದನ್ನು ಓದಿ : BMTC : ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ನಿಮ್ಮ ಸಂಬಳ (salary) ಹೆಚ್ಚಿದ್ದರೆ ಕೇಳಿ ಅಸೂಯೆ ಪಡುತ್ತಾರೆ. ಕಡಿಮೆ ಇದ್ದರೆ ವ್ಯಂಗ್ಯ ಮಾಡುವರು. ಹಾಗಾಗಿ ಹಣದ ವಿಷಯಗಳನ್ನು ಯಾರ ಜೊತೆಯಲ್ಲಿಯೂ ಹಂಚಿಕೊಳ್ಳಬೇಡಿ. ಅದೂ ಅಲ್ಲದೆ ಹಣದ ವಿಷಯಗಳು ಸಂಬಂಧವನ್ನು ಒಡೆಯುತ್ತದೆ ಅದರಿಂದಾಗಿ ಈ ಬಗ್ಗೆ ಜಾಗರೂಕರಾಗಿರಿ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img