Tuesday, September 17, 2024
spot_img
spot_img
spot_img
spot_img
spot_img
spot_img
spot_img

ಬೆಕ್ಕು, ನಾಯಿ ಸಾಕುವುದಿಲ್ಲ ಈ ಗ್ರಾಮದಲ್ಲಿ; ವಿಷ ಸರ್ಪಗಳೇ ಇಲ್ಲಿ ಸಾಕು ಪ್ರಾಣಿಗಳು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಸಾಮಾನ್ಯವಾಗಿ ನಾವು ನಮ್ಮ ಮನೆಗಳಲ್ಲಿ ಬೆಕ್ಕು, ನಾಯಿ, ಕುರಿ, ಕೋಳಿಯಂತಹ ಪ್ರಾಣಿಗಳನ್ನು ಸಾಕುತ್ತೇವೆ. ಆದರೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಸಾಕು ಪ್ರಾಣಿಗಳನ್ನು ಬಿಟ್ಟು ಹಾವುಗಳನ್ನು ತಮ್ಮ ಮನೆಗಳಲ್ಲಿ ಗ್ರಾಮಸ್ಥರು ಸಾಕುತ್ತಾರೆ.

ಅಚ್ಚರಿಯಾದರೂ ಇದು ಸತ್ಯ. ಶೆತ್ಪಾಲ್‌ ಗ್ರಾಮದಲ್ಲಿ ವಿಷ ಶರ್ಪಗಳೇ ಪ್ರಮುಖ ಅತಿಥಿಗಳು. ಇಲ್ಲಿ ಹಾವುಗಳಿಗೆ ವಿಶೇಷ ಗೌರವ ನೀಡಲಾಗುವುದು.

ನಾಗರ ಹಾವು ಮನೆಗೆ ಬಂದರೆ ಅದನ್ನು ಅದೃಷ್ಟವೆಂದು ಪರಿಗಣಿಸಲಾಗಿದೆ, ಹಾವುಗಳಿಗೆ ಇರಲೆಂದೇ ವ್ಯವಸ್ಥೆ ಮಾಡಲಾಗುವುದು. ಈ ಪದ್ಧತಿ ಈ ಗ್ರಾಮದಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದ್ದು, ಈಗಲೂ ರೂಢಿಯಲ್ಲಿದೆ.

ಈ ಗ್ರಾಮದ ಮನೆಗಳಲ್ಲಿ ಹಾವು ಮನೆಯೊಳಗಡೆ ಹಾಯಾಗಿ ಮಲಗಿರುತ್ತದೆ. ಪಕ್ಕದಲ್ಲೇ ಮಕ್ಕಳು ಕೂಡ ಆಡವಾಡುತ್ತಿರುತ್ತಾರೆ. ಈ ಹಾವುಗಳು ಮಕ್ಕಳಿಗೆ ಏನೂ ಮಾಡುವುದಿಲ್ಲ, ಮನೆಯಲ್ಲಿ ಒಬ್ಬ ಸದಸ್ಯನಂತೆ ಇರುತ್ತದೆ.

ಅಚ್ಚರಿಯ ಸಂಗತಿಯೆಂದರೆ ಈ ಗ್ರಾಮದಲ್ಲಿ ಇದುವರೆಗೆ ಯಾರು ಹಾವು ಕಚ್ಚಿ ಸತ್ತಿರುವ ಉದಾಹರಣೆಯೇ ಇಲ್ಲ. ಇಲ್ಲಿ ಹಾವು ಹಾಗೂ ಮನುಷ್ಯರ ನಡುವೆ ಒಳ್ಳೆಯ ಸಂಬಂಧವಿರುತ್ತದೆ.

ಇನ್ನೂ ಶಿವನಲ್ಲಿ ಕುತ್ತಿಗೆ ಸುತ್ತ ಹಾವು ಸುತ್ತಿರುತ್ತದೆ, ಹಾಗಾಗಿ ಈ ಗ್ರಾಮದಲ್ಲಿ ಹಾವುಗಳಲ್ಲಿ ಶಿವನನ್ನು ಕಾಣಲಾಗುವುದು. ಹಾಗಾಗಿ ಹಾವು ಕಂಡರೆ ಯಾವುದೇ ಭಯವಿಲ್ಲದೇ ಇಲ್ಲಿ ಹಾವನ್ನು ಪೂಜಿಸುತ್ತಾರೆ ಗ್ರಾಮಸ್ಥರು.

ತಮ್ಮ ಮನೆಯಲ್ಲಿ ಸಾಕಿರುವ ಹಾವಿಗೆ ಅದು ತಿನ್ನುವ ಆಹಾರ ನೀಡುತ್ತಾರೆ. ಕಾಯಿಲೆ ಬರದಂತೆ ಆರೈಕೆ ಮಾಡುತ್ತಾರೆ. ಇಲ್ಲಿ ಹಾವಿನ ವಿಷ ತೆಗೆದು ಸಾಕುವುದಿಲ್ಲ, ಬದಲಿಗೆ ವಿಷ ಸರ್ಪವನ್ನೇ ಸಾಕುತ್ತಾರೆ.

ಹಾವುಗಳು ಈ ಊರಿನವರಿಗೆ ಏನೂ ಮಾಡುವುದಿಲ್ಲ, ಆದರೆ ಹೊರಗಿನವರಿಗೆ ಹಾವು ಬಳಿ ಹೋಗದಂತೆ ಸೂಚಿಸಲಾಗುವುದು. ಏಕೆಂದರೆ ಹಾವುಗಳು ಮನೆಯವರ ಜೊತೆ ಫ್ರೀ ಆಗಿ ಇದ್ದಂತೆ ಅಪರಿಚಿತರ ಜೊತೆ ಇರುವುದಿಲ್ಲ.

 

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img