ಜನಸ್ಪಂದನ ನ್ಯೂಸ್, ಗದಗ : ಗದಗದ ಲಕ್ಷ್ಮೇಶ್ವರ (Lakshmeshwar) ಪಟ್ಟಣದಲ್ಲಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಸೇರಿದ ಮನೆಯಲ್ಲಿ ಕಾರು ಚಾಲಕ ಆತ್ಮಹತ್ಯೆಗೆ (Car Driver Suicide) ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ (Shirahatti BJP MLA Dr. Chandru Lamani) ಅವರಿಗೆ ಸೇರಿದ ಮನೆಯಲ್ಲಿ ಕಾರು ಚಾಲಕ ಸುನೀಲ್ ಲಮಾಣಿ (25) ಎಂಬಾತ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : 7 ಮದುವೆ ಮುಚ್ಚಿಟ್ಟು ಮತ್ತೆ ಮದುವೆಯಾಗಿದ್ದ Lady ; ವಿಚಾರ ತಿಳಿದು ಪತಿ ಮಾಡಿದ್ದೇನು ಗೊತ್ತಾ.?
ಶಾಸಕ ಚಂದ್ರು ಲಮಾಣಿ ಅವರು ಇತ್ತೀಚೆಗೆ ಖರೀದಿಸಿದ್ದ ನಿವಾಸದಲ್ಲೇ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆ ಕಟ್ಟುವ ವಿಷಯದಲ್ಲಿ (In terms of building a house) ಸುನೀಲ್ ಲಮಾಣಿ ಹಾಗೂ ಸಹೋದರರ ನಡುವೆ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.
ಇದನ್ನು ಓದಿ : ನೂರಾರು ಜನರ ಮುಂದೆ ಯುವತಿಯ ಬರ್ಬರ ಹತ್ಯೆ ; ವಿಡಿಯೋ Viral.!
ಕೌಟುಂಬಿಕ ಕಲಹದ ಹಿನ್ನೆಲೆ (Background of family feud) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಿಂದಿನ ಸುದ್ದಿ : 7 ಮದುವೆ ಮುಚ್ಚಿಟ್ಟು ಮತ್ತೆ ಮದುವೆಯಾಗಿದ್ದ ಲೇಡಿ ; ವಿಚಾರ ತಿಳಿದು ಪತಿ ಮಾಡಿದ್ದೇನು ಗೊತ್ತಾ.?
ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ, ಏಳು ಮದುವೆಯಾಗಿದ್ದ (A woman who had seven marriages) ವಿಚಾರ ಮುಚ್ಚಿಟ್ಟ ಕಿಲಾಡಿ ಲೇಡಿ, ಎಂಟನೇ ಮದುವೆಯಾಗಿ ಪತಿಯ ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿ ಆತನ ವಿರುದ್ದವೇ ಸುಳ್ಳು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಇದನ್ನು ಓದಿ : Video : ಡಿಸಿಪಿ ಕಚೇರಿ ಮುಂದೆ ಗರ್ಲ್ಫ್ರೆಂಡ್ ಬರ್ತ್ಡೇ ಆಚರಿಸಿ ಸವಾಲೆಸೆದ ಗ್ಯಾಂಗ್ಸ್ಟರ್.!
ಸುಳ್ಳು ಪ್ರಕರಣ (false case) ದಾಖಲಿಸಿದ ಆರೋಪದಡಿ ಮಹಿಳೆ ಸೇರಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.
ಮೋಸ ಹೋದ ರಾಮ ಕೃಷ್ಣ (62) ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಮಂಡ್ಯ ಜಿಲ್ಲೆ ಮದ್ದೂರು ಟೌನ್‌ನ (Maddur Town of Mandya District) ಎಚ್. ಎಂ. ವಿಜಯಲಕ್ಷ್ಮಿ (54), ಮಂಡ್ಯದ ರೇಖಾ (40), ವನಜಾ (45) ಮತ್ತು ನಂದೀಶ (30) ಎಂಬುವವರ ವಿರುದ್ಧ ಬಿಎನ್ 2 0 314, 316(2), 318(4), 351(2), 351(3), 61(2), 82(1), 82(2), 83, 3(5) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!
ಘಟನೆಯ ಹಿನ್ನೆಲೆ :
ದೂರುದಾರ ರಾಮಕೃಷ್ಣ ಅವರು ಪತ್ನಿ ಸಾವನ್ನಪ್ಪಿದ್ದಾರೆ. 2020ರ ನವೆಂಬರ್‌ನಲ್ಲಿ ಅವರಿಗೆ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಎಚ್. ಎಂ. ವಿಜಯಲಕ್ಷ್ಮೀ ಪರಿಚಯವಾಗಿದೆ. ನಂತರ ರಾಮನಗರದ ದೇವಸ್ಥಾನವೊಂದರಲ್ಲಿ ಗುರು- ಹಿರಿಯರ ಸಮ್ಮುಖದಲ್ಲಿ ವಿಜಯಲಕ್ಷ್ಮೀ ಅವರನ್ನು ರಾಮಕೃಷ್ಣ ಎರಡನೇ ಮದುವೆಯಾಗಿದ್ದರಂತೆ (second marriage).
ಈ ಮದುವೆಗೂ ಮುಂಚೆ ಈ ಹಿಂದೆ ನನಗೆ ಮದುವೆಯಾಗಿದ್ದು, ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ವಿಜಯಲಕ್ಷ್ಮೀ ರಾಮಕೃಷ್ಣಗೆ ತಿಳಿಸಿದ್ದರು.
ಇದನ್ನು ಓದಿ : ರೊಮ್ಯಾಂಟಿಕ್ ಆಗಿ ಪತ್ನಿಗೆ ಹೂ ಮುಡಿಸುತ್ತಿರುವಾಗ ಹಸುವಿನ ಆಗಮನ ; ಮುಂದೆನಾಯ್ತು Video ನೋಡಿ.!
ಬಳಿಕ ರಾಮಕೃಷ್ಣ ಅವರನ್ನು ಮದುವೆಯಾದ ಕೆಲ ದಿನಗಳ ಬಳಿಕ ಅವರ ಪಿಎಫ್ ಹಣ ಕಬಳಿಸುವ ಉದ್ದೇಶದಿಂದ ಸಣ್ಣಪುಟ್ಟ ವಿಚಾರಕ್ಕೆ ಮನೆಯಲ್ಲಿ ಜಗಳ ಮಾಡುವುದು, ಮಾನಸಿಕ ಮತ್ತು ದೈಹಿಕ ಹಿಂಸೆ (Mental and physical violence) ನೀಡುವುದು, ಪಿಎಫ್ ಹಣ ನೀಡದಿದ್ದಲ್ಲಿ ನೇಣು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ರಾಮಕೃಷ್ಣ ಆರೋಪಿಸಿದ್ದಾರೆ.
ತಾನು ಏಳು ಮದುವೆಯಾಗಿರುವ ವಿಚಾರವನ್ನು ವಿಜಯಲಕ್ಷ್ಮಿ ಮುಚ್ಚಿಟ್ಟಿದ್ದಾರೆ. ಮದುವೆ ಆದ ಗಂಡಂದಿರಿಗೆ ಗೊತ್ತಾಗದಂತೆ ನಗದು ಹಣ ಹಾಗೂ ಚಿನ್ನಾಭರಣ ದೋಚಿದ್ದಾರೆ. ವಾಪಸ್ಸು ಕೊಡು ಎಂದು ಕೇಳಿದರೆ ನೇಣು ಹಾಕಿಕೊಳ್ಳುವುದಾಗಿ ಬೆದರಿಸಿದ್ದಾರಂತೆ. ಇದೇ ರೀತಿ ರಾಮಕೃಷ್ಣ ಅವರಿಗೆ ತಿಳಿಯದಂತೆ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳು ಮತ್ತು 25 ಲಕ್ಷ ನಗದು ಕದ್ದೊಯ್ದಿದ್ದಾರೆ.
ಅಲ್ಲದೇ ರಾಮಕೃಷ್ಣ ವಿರುದ್ಧ ಮದ್ದೂರು ಹಾಗೂ ಮಂಡ್ಯ ನ್ಯಾಯಾಲಯಗಳಲ್ಲಿ ಚೆಕ್ ಬೌನ್ಸ್ ಎಂದು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.