ಜನಸ್ಪಂದನ ನ್ಯೂಸ್, ನೌಕರಿ : ಇನ್ಮುಂದೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ BPL ಕಾರ್ಡ್ ಹೊಂದಿದ ಕುಟುಂಬಗಳು CT Scan ಮತ್ತು MRI ಸ್ಕ್ಯಾನಿಂಗ್ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಈ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನು ಓದಿ : SCI : ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
CT Scan ಮತ್ತು MRI ಸ್ಕ್ಯಾನಿಂಗ್ ಮಾಡಿಸಲು ಬಡವರು ದುಬಾರಿ ವೆಚ್ಚ ಭರಿಸಬೇಕಿತ್ತು, ಹೀಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ PPP ಮಾದರಿಯಲ್ಲಿ ಒದಗಿಸಲಾಗುತ್ತಿರುವ CT Scan ಮತ್ತು MRI ಸ್ಕ್ಯಾನಿಂಗ್ಳನ್ನು ಉಚಿತವಾಗಿಸಲು ನಿರ್ಣಯಿಸಲಾಗಿದೆ.
BPL Card ದಾರರು ಈಗಾಗಲೇ ಅಸ್ತಿತ್ವದಲ್ಲಿರುವ ಅಂಗಾಂಗ ಕಸಿ (ಜೀವಸಾರ್ಥಕಥೆ) ಯೋಜನೆಯಲ್ಲಿ Lungs, heart ಮತ್ತು Marrow transplant ಸೇರಿಸಿ ಅಸ್ತಿತ್ವದಲ್ಲಿರುವ ಅಂಗಾಂಗ ಕಸಿ ಯೋಜನೆ ವಿಸ್ತರಿಸುವುದು.
ಇದನ್ನು ಓದಿ : 13ನೇ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಳ್ಳಲು 3 ಬಾರಿ ಜಿಗಿದರೂ ಬದುಕುಳಿದ ವ್ಯಕ್ತಿ.!
ಆ ಮೂಲಕ ಕಸಿ ವಿಧಾನದ ದರಗಳಂತೆ immuno-suppression ಔಷಧ ಕೊಡಲು ಹಾಗೂ autologous ಮೂಳೆ ಮಜ್ಜೆಯ ಕಸಿ ಕೈಗೊಳ್ಳಲು ಸಂಪುಟ ಒಪ್ಪಿಗೆ ಸೂಚಿಸಿದೆ.
ಕಣ್ಣಿನ ಉಚಿತ ತಪಾಸಣೆ, ಕನ್ನಡಕ ವಿತರಿಸುವ ಆಶಾಕಿರಣ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.