Monday, October 27, 2025

Janaspandhan News

HomeCrime NewsAccident : ಭೀಕರ ರಸ್ತೆ ಅಪಘಾತ ; ಬೊಲೆರೊ ಕಾರು ಕಾಲುವೆಗೆ ಬಿದ್ದು 11 ಭಕ್ತರ...
spot_img
spot_img
spot_img

Accident : ಭೀಕರ ರಸ್ತೆ ಅಪಘಾತ ; ಬೊಲೆರೊ ಕಾರು ಕಾಲುವೆಗೆ ಬಿದ್ದು 11 ಭಕ್ತರ ದುರ್ಮರಣ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಭಾನುವಾರ ಬೆಳಿಗ್ಗೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಇಟಿಯಾಥೋಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬೆಲ್ವಾ ಬಹುತಾ ಮಜ್ರಾ ರೆಹ್ರಾ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ (Accident) ಸಂಭವಿಸಿದೆ. ಖರ್ಗುಪುರದ ಪ್ರಸಿದ್ಧ ಪೃಥ್ವಿನಾಥ್ ದೇವಾಲಯಕ್ಕೆ ನೀರು ಅರ್ಪಿಸಲು ಬೊಲೆರೊ ಕಾರುನಲ್ಲಿ ಹೊರಟಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಸರಯು ಕಾಲುವೆಗೆ ಬಿದ್ದ ಪರಿಣಾಮ 11 ಜನ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತ (Accident) ದ ಸಮಯದಲ್ಲಿ ಕಾರಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 15 ಮಂದಿ ಇದ್ದರು. ಮೋತಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿಹಗಾಂವ್‌ನಿಂದ ಬಂದಿದ್ದ ಈ ಭಕ್ತರು ಬೊಲೆರೊ ವಾಹನದಲ್ಲಿ ಖರ್ಗುಪುರದ ದೇವಾಲಯಕ್ಕೆ ತೆರಳುತ್ತಿದ್ದರು.

ಇದನ್ನು ಓದಿ : Luteri Dulhan : 8 ಮದುವೆ, ರೂ.50 ಲಕ್ಷ ವಂಚನೆ : 9ನೇ ಶಿಕಾರಕ್ಕೂ ಮುನ್ನ ಬಂಧನ”.!

ಕಾರು ಬೆಲ್ವಾ ಬಹುತಾ ಮಜ್ರಾ ರೆಹ್ರಾ ತಲುಪಿದ ವೇಳೆಗೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡ ಕಾರು ನೇರವಾಗಿ ಸರಯು ಕಾಲುವೆಗೆ ಬಿದ್ದ ಪರಿಣಾಮ ಈ ಅಪಘಾತ (Accident) ಸಂಭವಿಸಿದೆ.

ಕಾರ್ಯಾಚರಣೆಗಿಳಿದ ಸ್ಥಳೀಯರು ಮತ್ತು ಪೊಲೀಸ್ ಇಲಾಖೆ :

ಅಪಘಾತ (Accident) ಕಂಡ ಪ್ರತ್ಯಕ್ಷದರ್ಶಿಗಳು ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮತ್ತು ಇಟಿಯಾಥೋಕ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ವಾಹನದಿಂದ 11 ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನು ಓದಿ : Bus : ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿ.!
ಉಳಿದ ನಾಲ್ವರು ಗಾಯಾಳುಗಳ ಸ್ಥಿತಿ ಗಂಭೀರ :

ಅಪಘಾತ (Accident) ವಾದ ಕಾರಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 15 ಜನರಲ್ಲಿ 11 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಉಳಿದ ನಾಲ್ವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತಪಟ್ಟವರಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದ್ದು, ಗಾಯಗೊಂಡವರ ಸ್ಥಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇದನ್ನು ಓದಿ : KFD : “ಕರ್ನಾಟಕ ಅರಣ್ಯ ಇಲಾಖೆಯಲ್ಲಿ 6,000 ಹೊಸ ಹುದ್ದೆಗಳ ನೇಮಕಾತಿಗೆ ಸಿದ್ಧತೆ”.!
ಕುಟುಂಬದವರ ಆಕ್ರಂದನ :

ಈ ದುರ್ಘಟನೆ (Accident) ಯ ಸುದ್ದಿ ಇಡೀ ಗ್ರಾಮದಲ್ಲಿ ಶೋಕದಲ್ಲಿ ಮುಳಗಿದ್ದು, ಸ್ಥಳೀಯ ಗ್ರಾಮಸ್ಥರು ಹಾಗೂ ಬಂಧುಮಿತ್ರರು ದುಃಖವ್ಯಕ್ತಪಡಿಸಿದ್ದಾರೆ.

ಅಪಘಾತದ (Accident) ವಿಡಿಯೋ :


Itching : ಗುಪ್ತಾಂಗದಲ್ಲಿ ತುರಿಕೆಯೇ? ಇಲ್ಲಿದೆ ಪ್ರಮುಖ ಕಾರಣಗಳು ಮತ್ತು ಮನೆಮದ್ದುಗಳು.!

Itching

ಜನಸ್ಪಂದನ ನ್ಯೂಸ್‌, ಆರೋಗ್ಯ : ಮಳೆಗಾಲದಲ್ಲಿ ಕೆಲವರಿಗೆ ಖಾಸಗಿ ಭಾಗದಲ್ಲಿ ತುರಿಕೆ (Itching) ಮತ್ತು ಉರಿಯಂತಹ ಲಕ್ಷಣಗಳು ಕಂಡುಬರುತ್ತವೆ. ಈ ಸಮಸ್ಯೆ ಸಾಮಾನ್ಯವಾಗಿ ಸ್ವಚ್ಛತೆಯ ಕೊರತೆಯಿಂದ ಉಂಟಾಗುತ್ತಿದ್ದು, ಮತ್ತೇ ಕೆಲವೊಮ್ಮೆ ಬ್ಯಾಕ್ಟೀರಿಯಾ, ಶಿಲೀಂಧ್ರ (ಫಂಗಸ್) ಅಥವಾ ಎಸ್ಜಿಮಾ ಇಂತಹ ಚರ್ಮದ ಸಮಸ್ಯೆಗಳ ಪರಿಣಾಮವಾಗಿರಬಹುದು.

ಈ ರೀತಿಯ ತುರಿಕೆ (Itching) ಸಮಸ್ಯೆಗಳನ್ನು ನಿರ್ಲಕ್ಷಿಸದೇ, ಸರಿಯಾದ ಮುನ್ನೆಚ್ಚರಿಕೆ ಮತ್ತು ಮನೆಮದ್ದುಗಳೊಂದಿಗೆ ನಿಯಂತ್ರಣಕ್ಕೆ ತರಬಹುದು. ಇಲ್ಲಿ ಮುಖ್ಯ ಕಾರಣಗಳು ಹಾಗೂ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ:

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಅಗಷ್ಟ 01 ರ ದ್ವಾದಶ ರಾಶಿಗಳ ಫಲಾಫಲ.!
ಗುಪ್ತಾಂಗ ತುರಿಕೆ (Itching) ಗೆ ಪ್ರಮುಖ ಕಾರಣಗಳು :

1. ರೇಜರ್ ಬಳಕೆ (Razor Burn) :
ಗುಪ್ತಾಂಗದ ಭಾಗದಲ್ಲಿ ಕೂದಲನ್ನು ತೆಗೆದುಹಾಕಲು ರೇಜರ್‌ ಬಳಸಿ ಸ್ವಚ್ಛತೆ ಕಾಯ್ದುಕೊಳ್ಳುವಾಗ, ಕೆಲವೊಮ್ಮೆ ಚರ್ಮದಲ್ಲಿ ಸಣ್ಣ ಗೀರುಗಳು ಉಂಟಾಗಿ ತುರಿಕೆ (Itching) ಗೆ ಕಾರಣವಾಗಬಹುದು. ಇದರ ಪರಿಣಾಮವಾಗಿ ಚರ್ಮ ಕೆಂಪಾಗುವುದು ಸಾಮಾನ್ಯ.

2. ಕಾಂಟ್ಯಾಕ್ಟ್ ಡರ್ಮಟೈಟಿಸ್ :
ಹೊಸ ಶೌಚೋಪಕರಣಗಳು ಅಥವಾ ಸ್ಕಿನ್‌ಕೆರ್ ಉತ್ಪನ್ನಗಳನ್ನು ಬಳಸಿದಾಗ ಕೆಲವೊಮ್ಮೆ ಚರ್ಮ ಅಲರ್ಜಿಗೆ ಒಳಗಾಗಬಹುದು. ಹೊಸ ಲೋಷನ್, ಸಾಬೂನು ಅಥವಾ ಕ್ಲೀನ್ಸರ್‌ಗಳ ಬಳಕೆಯಿಂದ ತುರಿಕೆ, ಕೆಂಪು ದದ್ದುಗಳು ಕಂಡುಬರುವ ಸಾಧ್ಯತೆ ಇದೆ.

3. ಯೀಸ್ಟ್ ಸೋಂಕು (Yeast Infection) :
ಯೀಸ್ಟ್ ತೇವಾಂಶದ ತಾಣಗಳಲ್ಲಿ ಬೆಳೆಯುತ್ತದೆ. ಬಿಗಿಯಾದ ಒಳಉಡುಪು ಧರಿಸುವುದು, ಶೌಚಾಲಯದ ನಂತರ ಸರಿಯಾಗಿ ಒರಸಿಕೊಳ್ಳದೆ ಇರುವುದು ಅಥವಾ ತೇವವಿರುವ ಬಟ್ಟೆ ಧರಿಸುವುದು ಯೀಸ್ಟ್ ಸೋಂಕಿಗೆ ದಾರಿ ಮಾಡಿಕೊಡುತ್ತದೆ.

4. ಎಕ್ಸಿಮಾ (Eczema) :
ಚರ್ಮದಲ್ಲಿ ಉಲ್ಬಣಗೊಂಡ ಕೆಂಪು ದದ್ದುಗಳು, ನೀರು ಹೊರಸೂಸುವ ಪುರುಷಕಿಗಳು ಮತ್ತು ಕಜ್ಜಿದಾಗ ಉರಿ ಉಂಟುಮಾಡುವ ಲಕ್ಷಣಗಳೊಂದಿಗೆ ಎಕ್ಸಿಮಾ ಕಾಣಿಸಿಕೊಳ್ಳಬಹುದು. ಇದು ಮೊಣಕಾಲು, ಮೊಣಕೈ ಮಾತ್ರವಲ್ಲದೇ ಗುಪ್ತಾಂಗದ ಭಾಗದಲ್ಲೂ ಕಂಡುಬಿಡಬಹುದು.

ಇದನ್ನು ಓದಿ : Health : 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ವರ್ಷಕ್ಕೊಮ್ಮೆ ಈ ಆರೋಗ್ಯ ತಪಾಸಣೆಗಳನ್ನು ಮಾಡಿಸಲೇಬೇಕು.!
ತುರಿಕೆಗೆ ಸಾಮಾನ್ಯ ರೋಗಲಕ್ಷಣಗಳು :
  • ನಿರಂತರವಾಗಿ ತುರಿಸಿಕೊಳ್ಳಬೇಕೆಂಬ ಭಾವನೆ.
  • ಚರ್ಮ ಕೆಂಪಾಗುವುದು ಮತ್ತು ಊತ.
  • ಮೊಡವೆಗಳು ಅಥವಾ ಪುಟಗಳು.
  • ಚರ್ಮದ ಒಣತನ.
  • ತುರಿಕೆ ಬಳಿಕ ನೋವು ಅಥವಾ ಸುಡು ಅನಿಸಿಕೆ.
ತುರಿಕೆ ನಿವಾರಣೆಗೆ ಸಹಾಯಕ ಮನೆಮದ್ದುಗಳು :

1. ಅಲೋವೆರಾ ಜೆಲ್ :
ಅಲೋವೆರಾ ತುರಿಕೆ (Itching) ನಿವಾರಣೆಗೆ ಬಹಳ ಉತ್ತಮವಾಗಿ ಕೆಲಸ ಮಾಡುತ್ತದೆ. ಇದನ್ನು ನೇರವಾಗಿ ತುರಿಕೆ ಇರುವ ಜಾಗಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಬೇಕು.

2. ತೆಂಗಿನೆಣ್ಣೆ :
ಶುದ್ಧ ತೆಂಗಿನೆಣ್ಣೆಯು ಚರ್ಮಕ್ಕೆ ತೇವಾಂಶ ಒದಗಿಸುವುದು ಮಾತ್ರವಲ್ಲದೇ ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ತುರಿಕೆ (Itching) ಇರುವ ಸ್ಥಳಕ್ಕೆ ಹಚ್ಚಿ, 20 ನಿಮಿಷದ ನಂತರ ತೊಳೆಯುವುದು ಉತ್ತಮ.

ಇದನ್ನು ಓದಿ : Luteri Dulhan : 8 ಮದುವೆ, ರೂ.50 ಲಕ್ಷ ವಂಚನೆ : 9ನೇ ಶಿಕಾರಕ್ಕೂ ಮುನ್ನ ಬಂಧನ”.!

3. ಗ್ರೀಕ್ ಮೊಸರು :
ಯೀಸ್ಟ್ ಸೋಂಕು ಕಡಿಮೆ ಮಾಡಲು ಸಹಾಯಕವಾದ ಗ್ರೀಕ್ ಮೊಸರು, ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ತುರಿಕೆ ಇರುವ ಭಾಗಕ್ಕೆ ಹಚ್ಚಬಹುದು.

4. ಅಡಿಗೆ ಸೋಡಾ (ಬೇಕಿಂಗ್ ಸೋಡಾ) :
ಶಿಲೀಂಧ್ರನಾಶಕ ಗುಣಗಳಿರುವ ಅಡಿಗೆ ಸೋಡಾವನ್ನು ಸ್ನಾನದ ನೀರಿಗೆ ಸೇರಿಸುವುದು ಅಥವಾ ಪೇಸ್ಟ್ ತಯಾರಿಸಿ ಬಳಕೆಯಲ್ಲಿಡುವುದು ಸಹಕಾರಿಯಾಗುತ್ತದೆ.

5. ಐಸ್ ಪ್ಯಾಕ್ :
ತುರಿಕೆ ತೀವ್ರವಾಗಿರುವ ಸಂದರ್ಭಗಳಲ್ಲಿ, ಬಟ್ಟೆಯಲ್ಲಿ ಸುತ್ತಿದ ಐಸ್ ಪ್ಯಾಕ್ ಅನ್ನು ಕೆಲವು ನಿಮಿಷಗಳ ಕಾಲ ತುರಿಕೆ (Itching) ಭಾಗದಲ್ಲಿ ಇಡಬಹುದು.

ಇದನ್ನು ಓದಿ : Girlfriend ಜೊತೆ ಪತಿಯನ್ನು ರೆಸ್ಟೋರೆಂಟ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ : ಮುಂದೆ ಏನಾಯಿತು.?
ಸಂಪಾದಕೀಯ :

ಗುಪ್ತಾಂಗದ ತುರಿಕೆ (Itching) ಆರಂಭದಲ್ಲೇ ಈ ಮನೆಮದ್ದುಗಳು ಸಹಾಯ ಮಾಡಬಹುದು. ಆದರೆ ದಿನ ಕಳೆದಂತೆ ತುರಿಕೆ ತೀವ್ರವಾಗುವುದಾದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಯಾವುದೇ ರೀತಿಯ ತೀವ್ರ ಅಸ್ವಸ್ಥತೆಯನ್ನು ನಿರ್ಲಕ್ಷ್ಯ ಮಾಡುವುದರಿಂದ ಹೆಚ್ಚಿನ ಸಮಸ್ಯೆಗಳ ಎದುರಾಗಬಹುದು.

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತೀರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments