Wednesday, September 17, 2025

Janaspandhan News

HomeCrime NewsBike-Scooter-collision : 2-3 ಸುತ್ತು ಹಾಕಿ ಕೆಳಗೆ ಬಿದ್ದ ಬೈಕ್‌ ಸವಾರ ; ವಿಡಿಯೋ ವೈರಲ್.!
spot_img
spot_img
spot_img

Bike-Scooter-collision : 2-3 ಸುತ್ತು ಹಾಕಿ ಕೆಳಗೆ ಬಿದ್ದ ಬೈಕ್‌ ಸವಾರ ; ವಿಡಿಯೋ ವೈರಲ್.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬೈಕ್-ಸ್ಕೂಟಿ (Bike-Scooter) ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಹಾರಿ ಬಿದ್ದಿರುವ ಘಟನೆಯೊಂದು ನಡೆದಿದ್ದು, ಸದ್ಯ ಅದರ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಚೆನ್ನೈ ಜಿಲ್ಲೆಯ ಎಣ್ಣೋರ್ ಬೀಚ್ ಬಳಿ ಈ ಭೀಕರ ರಸ್ತೆ ಅಪಘಾತ (Bike-Scooter ಡಿಕ್ಕಿ) ಸಂಭವಿಸಿದ್ದು, ಅದರ ಸಿಸಿಟಿವಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿದ toll-plaza ಸಿಬ್ಬಂದಿ ; 4 ಜನರ ಬಂಧನ.!

ಮಾಹಿತಿಯ ಪ್ರಕಾರ, ನಿನ್ನೆ ಆಗಸ್ಟ್ 18 ಸೋಮವಾರದಂದು ಸ್ಕೂಟಿಯೊಂದು ಇದ್ದಕ್ಕಿದ್ದಂತೆ ಯು-ಟರ್ನ್ ತೆಗೆದುಕೊಳ್ಳಲು ಪ್ರಯತ್ನಿಸುವುದು ಕಾಣುತ್ತದೆ. ಆ ವೇಳೆ ಹಿಂಬದಿಯಿಂದ ಹೆಚ್ಚಿನ ವೇಗದಲ್ಲಿ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಬೈಕ್ (Bike) ಗಾಳಿಯಲ್ಲಿ ಹಾರಿ ಹೋಗಿ ಕೆಲ ಮೀಟರ್ ದೂರ ಎಳೆದಾಡಿದ ನಂತರ ರಸ್ತೆಗೆ ಬಿದ್ದಿದೆ.

ಡಿಕ್ಕಿಯ ಪರಿಣಾಮವಾಗಿ ಬೈಕ್ ಸವಾರನು 2-3 ಬಾರಿ ಉರುಳಿಕೊಂಡು ಕೆಳಗೆ ಬಿದ್ದಿದ್ದಾನೆ. ನಂತರ ಬೈಕ್ ಬಿದ್ದು ಅವನ ಮೇಲೆಯೇ ಹತ್ತಿದೆ. ಮತ್ತೊಂದೆಡೆ, ಸ್ಕೂಟಿ ಸವಾರ ಕೆಲ ಮೀಟರ್ ದೂರ ಎಸೆದಾಡಲ್ಪಟ್ಟಿದ್ದರೂ, ಆತ ಎದ್ದು ತನ್ನ ವಾಹನದತ್ತ ಹೋದ ದೃಶ್ಯ ವೀಡಿಯೋದಲ್ಲಿ ಕಾಣಿಸಿದೆ. ಆದರೆ ಡಿಕ್ಕಿಯ ನಂತರ ಬೈಕ್ ಸವಾರ ಯಾವುದೇ ಚಲನೆ ಇಲ್ಲದೆ ಬಿದ್ದಿರುವುದನ್ನು ದೃಶ್ಯಗಳಲ್ಲಿ ಗಮನಿಸಬಹುದು.

Belagavi : ಭಾರೀ ಮಳೆಯಿಂದಾಗಿ 8 ತಾಲ್ಲೂಕುಗಳಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ.!

ಈ ಘಟನೆಯಲ್ಲಿ ಸವಾರರು ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ ಎಂದು ದೃಶ್ಯಗಳಲ್ಲಿ ಗೋಚರಿಸುತ್ತದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡವರ ಸ್ಥಿತಿ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸುತ್ತಿದೆ.

ಬೈಕ್-ಸ್ಕೂಟಿ (Bike-Scooter) ಡಿಕ್ಕಿ ವಿಡಿಯೋ :


Thyroid : ಥೈರಾಯ್ಡ್ ಸಮಸ್ಯೆ ಇರುವವರು ಈ 5 ಆಹಾರ ಸೇವಿಸಬೇಡಿ : ತಜ್ಞರ ಎಚ್ಚರಿಕೆ.!

Thyroid

ಜನಸ್ಪಂದನ ನ್ಯೂಸ್‌, ಆರೋಗ್ಯ : ಥೈರಾಯ್ಡ್ (Thyroid) ಸಮಸ್ಯೆ ನಿಯಂತ್ರಣಕ್ಕೆ ಔಷಧಿಗಳು ಅಗತ್ಯವಾದರೂ, ಕೇವಲ ಔಷಧಿ ಸೇವನೆಯೇ ಸಾಕಾಗುವುದಿಲ್ಲ, ತಿನ್ನುವ ಆಹಾರಕ್ಕೂ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ.

ತಪ್ಪಾದ ಆಹಾರ ಪದ್ಧತಿಗಳು ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುವುದರ ಜೊತೆಗೆ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ತಜ್ಞರ ಪ್ರಕಾರ, ಥೈರಾಯ್ಡ್ (Thyroid) ರೋಗಿಗಳು ತಪ್ಪಿಸಬೇಕಾದ ಕೆಲವು ಆಹಾರಗಳು ಇಲ್ಲಿವೆ.

Belagavi : ಭಾರೀ ಮಳೆಯಿಂದಾಗಿ 8 ತಾಲ್ಲೂಕುಗಳಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ.!
ಥೈರಾಯ್ಡ್ (Thyroid) ರೋಗಿಗಳು ತಪ್ಪಿಸಬೇಕಾದ ಆಹಾರಗಳಿವು :

👉 ಸೋಯಾ ಉತ್ಪನ್ನಗಳು :
ಸೋಯಾಬೀನ್, ಸೋಯಾ ಹಾಲು, ಟೋಫು ಮುಂತಾದ ಉತ್ಪನ್ನಗಳು ಥೈರಾಯ್ಡ್ (Thyroid) ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಇವುಗಳನ್ನು ಸೇವನೆ ಮಾಡುವುದು ಬೇಡ.

👉 ಎಲೆಕೋಸು ಮತ್ತು ಹೂಕೋಸು :
ತರಕಾರಿಗಳು ಆರೋಗ್ಯಕರವಾದರೂ, ಎಲೆಕೋಸು ಮತ್ತು ಹೂಕೋಸು ಥೈರಾಯ್ಡ್ ರೋಗಿಗಳಿಗೆ ಸೂಕ್ತವಲ್ಲ. ಇವುಗಳು ಹಾರ್ಮೋನುಗಳ ಸಮತೋಲನಕ್ಕೆ ಅಡ್ಡಿಯಾಗಬಹುದು.

ಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿದ toll-plaza ಸಿಬ್ಬಂದಿ ; 4 ಜನರ ಬಂಧನ.!

👉 ಸಂಸ್ಕರಿಸಿದ ಆಹಾರಗಳು :
ಪ್ಯಾಕ್ಡ್ ಮತ್ತು ಪ್ರೊಸೆಸ್ಡ್ ಫುಡ್‌ಗಳಲ್ಲಿ ಹೆಚ್ಚುವರಿ ಉಪ್ಪು ಹಾಗೂ ಸಕ್ಕರೆ ಇರುತ್ತದೆ. ಇವು ತೂಕವನ್ನು ಹೆಚ್ಚಿಸುವುದರೊಂದಿಗೆ ಥೈರಾಯ್ಡ್ (Thyroid) ಸಮಸ್ಯೆಯನ್ನು ಹದಗೆಡಿಸುತ್ತವೆ.

👉 ಸಿಹಿತಿಂಡಿಗಳು ಮತ್ತು ಸಕ್ಕರೆ :
ಹೆಚ್ಚಿನ ಸಕ್ಕರೆ ಹಾಗೂ ಸಿಹಿತಿಂಡಿಗಳ ಸೇವನೆಯಿಂದ ತೂಕ ನಿಯಂತ್ರಣ ಕಷ್ಟವಾಗುತ್ತದೆ. ಜೊತೆಗೆ ದೈಹಿಕ ಅಸಮತೋಲನ ಹೆಚ್ಚಾಗುವ ಸಾಧ್ಯತೆಯೂ ಇದೆ.

👉 ಕಾಫಿ :
ಖಾಲಿ ಹೊಟ್ಟೆಯಲ್ಲಿ ಅಥವಾ ಔಷಧಿ ಸೇವನೆಯ ತಕ್ಷಣ ಕಾಫಿ ಕುಡಿಯುವುದು ತಪ್ಪು. ಇದು ಔಷಧಿಯ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಈ ಲಕ್ಷಣಗಳು ಕಾಣಿಸಿಕೊಂಡರೆ ಅದು ರಕ್ತನಾಳಗಳು Blocked ಆಗಿರುವ ಎಚ್ಚರಿಕೆ.!

ಸಂಪಾದಕೀಯ : ಆರೋಗ್ಯ ತಜ್ಞರ ಸಲಹೆಯಂತೆ, ಥೈರಾಯ್ಡ್ (Thyroid) ರೋಗಿಗಳು ಈ ಆಹಾರಗಳನ್ನು ತಪ್ಪಿಸಿ, ಸಮತೋಲನಯುತ ಆಹಾರ ಪದ್ಧತಿಯನ್ನು ಅನುಸರಿಸಿದರೆ ಔಷಧಿಗಳ ಫಲಿತಾಂಶ ಉತ್ತಮವಾಗಿರುತ್ತದೆ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments