ಜನಸ್ಪಂದನ ನ್ಯೂಸ್, ಬೆಳಗಾವಿ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಅಂತಹದೆ ಒಂದು ಘಟನೆ ಬೆಳಗಾವಿ (Belagavi) ಜಿಲ್ಲೆಯ ಗೋಕಾಕ ತಾಲ್ಲೂಕಿನ ಕಪರಟ್ಟಿ ಗ್ರಾಮದಲ್ಲಿ ಶನಿವಾರ ದಿನದಂದು ನಡೆದಿರುವುದು ಬೆಳಕಿಗೆ ಬಂದಿದೆ.
ಶನಿವಾರ ಸಂಜೆ ಸುಮಾರು 4 ಗಂಟೆಗೆ S.S.L.C ಓದುತ್ತಿದ್ದ ಸತೀಶ ಬಾಗನ್ನವರ (16) ಹೃದಯಾಘಾತದಿಂದ ಅಚಾನಕ್ ಸಾವಿಗೀಡಾದರು. ಈ ಘಟನೆಗೆ ಸಂಬಂಧಿಸಿದ ಸುದ್ದಿ ಅವರ ಅಣ್ಣ ಬಸವರಾಜ ಬಾಗನ್ನವರ (24) ಗೆ ತಲುಪಿದಾಗ, ಅವರು ಕೂಡಾ ಆಘಾತದಿಂದ ಹೃದಯಾಘಾತಕ್ಕೆ ಒಳಗಾಗಿದ್ದಾರೆ.
DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!
ಕೂಡಲೇ ಅಣ್ಣ ಬಸವರಾಜ ಅವರನ್ನು ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ದುರ್ದೈವಶಾತ್ ಬಸವರಾಜ ಅವರು ಹೃದಯಾಘಾತದಿಂದ ಮೃತರಾದರು.
ಮೃತ ಬಸವರಾಜ ಅವರ ಪತ್ನಿ ಪವಿತ್ರಾ (20) ಗರ್ಭಿಣಿಯಾಗಿದ್ದು, ಗಂಡ ಮತ್ತು ಮೈದುನನ ಸಾವಿನ ಸುದ್ದಿ ಕೇಳಿ ಶಾಕ್‌ಗೆ ಒಳಗಾದರು. ಅವರನ್ನು ಕೂಡ ಬೆಳಗಾವಿ (Belagavi) ಯ ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!
ಸತೀಶ 10ನೇ ತರಗತಿಯಲ್ಲಿ ಓದುತ್ತಿದ್ದು, ಬಸವರಾಜ ಬಟ್ಟೆ ಅಂಗಡಿಯಲ್ಲಿ ಉದ್ಯೋಗದಲ್ಲಿದ್ದರು. ಕುಟುಂಬದ ಹಿರಿಯರು ತಮ್ಮ ಮಕ್ಕಳ ಅಕಸ್ಮಿಕ್ ಸಾವಿನ ಸುದ್ದಿ ಕೇಳಿ ಆಘಾತಕ್ಕೀಡಾಗಿದ್ದಾರೆ.
ಈ ಘಟನೆ ಬೆಳಗಾವಿ (Belagavi) ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ವೈದ್ಯಕೀಯ ತಜ್ಞರು, ಹೃದಯ ಆರೋಗ್ಯದ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆವಹಿಸುವಂತೆ ವಿನಂತಿಸಿದ್ದಾರೆ.
Online Game ನ ಭಯಾನಕತೆ : ನನ್ನ ಮಗಳಿಗೆ ಬೆತ್ತಲೆ ಫೋಟೋ ಕಳಿಸುವಂತೆ ಹೇಳಿದ್ದ ; ಸ್ಟಾರ್ ನಟ ಅಕ್ಷಯ್ ಕುಮಾರ್.!
ಜನಸ್ಫಂದನ ನ್ಯೂಸ್, ಮುಂಬೈ : ಮಕ್ಕಳ ಮೇಲೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ತಮ್ಮ ಜೀವನದ ಘಟನೆ ಹಂಚಿಕೊಂಡಿದ್ದಾರೆ. ಅವರು ತಮ್ಮ 13 ವರ್ಷದ ಪುತ್ರಿಯೊಂದಿಗೆ ಆಗಿದ್ದ ಒಂದು ಸೈಬರ್ ಘಟನೆ ಕುರಿತು ಶುಕ್ರವಾರ ಮುಂಬೈನ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಸೈಬರ್ ಜಾಗೃತಿ ತಿಂಗಳು 2025 ಉದ್ಘಾಟನಾ ಸಮಾರಂಭದಲ್ಲಿ ವಿವರಿಸಿದ್ದಾರೆ.
ಏನಿದು ಘಟನೆ?
ಕೆಲ ತಿಂಗಳ ಹಿಂದೆ, “ನಾನು ಮನೆಯಲ್ಲಿದ್ದಾಗ ನನ್ನ ಮಗಳು ಆನ್‌ಲೈನ್ ವಿಡಿಯೋ ಗೇಮ್ (Online video game) ಆಡುತ್ತಿದ್ದರು. ಆಗ, ಅನಾಮಿಕ ವ್ಯಕ್ತಿಯೊಬ್ಬ ಆನ್‌ಲೈನ್ ಮೂಲಕ ಸಂಪರ್ಕಿಸಿ, ಆಕೆಯ ಚಿತ್ರವನ್ನು ಕಳುಹಿಸುವಂತೆ ಕೇಳಿದ್ದಾನೆ ಎಂದು ನಟ ಅಕ್ಷಯ್ ಹೇಳಿದ್ದಾರೆ.
ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!
ಆ ಆನ್‌ಲೈನ್ ಗೇಮ್‌ಗಳಲ್ಲಿ ನೀವು ಅಪರಿಚಿತ ವ್ಯಕ್ತಿಯೊಂದಿಗೆ ಕೂಡ ಆಡಬಹುದಾಗಿದೆ. ಅಕ್ಷಯ್ ಕುಮಾರ್ ಅವರ ಪುತ್ರಿ ಆನ್‌ಲೈನ್ ಗೇಮ್ (Game) ಆಡುತ್ತಿದ್ದಾಗ, ಆಟದ ಮಧ್ಯ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ‘ಧನ್ಯವಾದಗಳು’, ‘ಚೆನ್ನಾಗಿ ಆಡಿದೀರಿ’ ಮತ್ತು ‘ಅದ್ಭುತ’ ಮುಂತಾದ ಸಭ್ಯ ಸಂದೇಶಗಳೊಂದಿಗೆ ಪ್ರಾರಂಭಿಸಿದರು. ಅದು ಒಳ್ಳೆಯ ವ್ಯಕ್ತಿಯಂತೆ ತೋರುತ್ತಿತ್ತು.
ಸ್ವಲ್ಪ ಸಮಯದ ನಂತರ, ಅವನು ನನ್ನ ಮಗಳನ್ನ ‘ನೀನು ಗಂಡೋ ಅಥವಾ ಹೆಣ್ಣು?’ ಎಂಬ ಸಂದೇಶ ಬಂದಿತು. ನನ್ನ ಮಗಳು ಹೆಣ್ಣು ಎಂದು ಉತ್ತರ ಕೊಟ್ಟಳು. ಬಳಿಕ ಅವನು ‘ನಿನ್ನ ಬೆತ್ತಲೆ ಚಿತ್ರ ಕಳಿಸಬಹುದೇ?’ ಎಂದು ಕೇಳಿದನು. ನನ್ನ ಮಗಳು ಭಯಗೊಂಡು ಆ ಗೇಮ್ (Game) ಸ್ವಿಚ್ ಆಫ್ ಮಾಡಿದರು.”
Private : ಬೆಡ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪತ್ನಿಯ ಗೌಪ್ಯ ಕ್ಷಣ ಸೆರೆಹಿಡಿದ ಪತಿ.!
ಈ ಘಟನೆ, ಸೈಬರ್ ಅಪರಾಧಗಳು ಕೇವಲ ಕಿರುಮಟ್ಟದ ಅಂಚಿನ ವಿಷಯವಲ್ಲ, ಬೆಳೆಯುತ್ತಿರುವ ಮಕ್ಕಳಿಗೆ ನೇರವಾಗಿ ಹಾನಿ ತರುವಂತಹದು ಎಂಬುದನ್ನು ತೋರಿಸುತ್ತದೆ.
ಶಾಲೆಯಲ್ಲಿ ಸೈಬರ್ ಶಿಕ್ಷಣ ಕಡ್ಡಾಯವಾಗಲಿ :
ಅಕ್ಷಯ್ ಕುಮಾರ್ ಶಾಲಾ ವಿದ್ಯಾರ್ಥಿಗಳಿಗೆ (7ನೇ–10ನೇ ತರಗತಿ) ಸೈಬರ್ ಜಾಗೃತಿ ಮತ್ತು ಡಿಜಿಟಲ್ ಸುರಕ್ಷತಾ ಶಿಕ್ಷಣವನ್ನು ವಾರದ ಪ್ರಮುಖ ವಿಷಯವಾಗಿ ಸೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. “ಮಕ್ಕಳನ್ನು ಡಿಜಿಟಲ್ ಜಾಗದಲ್ಲಿ ಸುರಕ್ಷಿತವಾಗಿ ಮತ್ತು ಮಾಹಿತಿ ಸಮೃದ್ಧಿಯಾಗಿ ಬೆಳೆಸುವುದು ಬಹಳ ಮುಖ್ಯ” ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮ ಮತ್ತು ಭಾಗವಹಿಸಿದವರು :
ಈ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರು, ರಶ್ಮಿ ಶುಕ್ಲಾ, ಇಕ್ಬಾಲ್ ಸಿಂಗ್ ಚಾಹಲ್ (IPS) ಮತ್ತು ರಾಣಿ ಮುಖರ್ಜಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.
DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!
ಅಕ್ಷಯ್ ಕುಮಾರ್‌ನ ಈ ಅಭಿಪ್ರಾಯವು, ಸೈಬರ್ ಅಪರಾಧದ ತೀವ್ರತೆಯನ್ನು ಜನರ ಗಮನಕ್ಕೆ ತರುತ್ತಿದ್ದು, ಮಕ್ಕಳಿಗೆ ಆನ್‌ಲೈನ್ ಸುರಕ್ಷತೆಯನ್ನು ಕಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಿದೆ.
ಆನ್‌ಲೈನ್ ವಿಡಿಯೋ ಗೇಮ್ (Game) ಕುರಿತು ಅಕ್ಷಯ ವಿಡಿಯೋ :
#WATCH | Mumbai | Actor Akshay Kumar says, "I want to tell you all a small incident which happened at my house a few months back. My daughter was playing a video game, and there are some video games that you can play with someone. You are playing with an unknown stranger. While… pic.twitter.com/z9sV2c9yC6
— ANI (@ANI) October 3, 2025
An online game is a video game that is either partially or primarily played through the Internet or any other computer network available. Online game / Games are ubiquitous on modern gaming platforms, including PCs, consoles and mobile devices, and span many genres, including first-person shooters, strategy games, and massively multiplayer online role-playing game̤