Sunday, September 8, 2024
spot_img
spot_img
spot_img
spot_img
spot_img
spot_img
spot_img

Video : ಪೆಟ್ರೋಲ್ ತುಂಬಿದಕ್ಕೆ ಹಣ ಕೇಳಿದ ಬಂಕ್ ಸಿಬ್ಬಂದಿ ; ಕಾರು ಗುದ್ದಿಸಿದ ಪೊಲೀಸ್ ಅಧಿಕಾರಿ ; ಬಂಧನ, ಅಮಾನತು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಕೆಲವು ಜನರಿಗೆ ಅಧಿಕಾರದ ಮದ ಎಷ್ಟುರುತ್ತೆಂದರೆ ಮುಂದಿನ ಮನುಷ್ಯ ಆತನಿಗೆ ಕಾಣುವುದೆ ಇಲ್ಲ. ಅದರಲ್ಲೂ ಕೆಲ ಪೊಲೀಸ್‌ ಅಧಿಕಾರಿಗಳ ವರ್ತನೆಯಂತೂ ಹೇಳಲಿಕ್ಕೆಬಾರದು. ಇಂಥ ಅಧಿಕಾರಿಗಳಿಂದಲೆ ಪೂರ್ತಿ ಇಲಾಖೆಯನ್ನೇ ಸಂಶಯದ ದೃಷ್ಠಿಯಿಂದ ಸಾಮಾಜ ನೋಡಲು ಪ್ರಾರಂಭಿಸಿದೆ.

ಇಂಥ ಜನರು ಮಾನವೀಯತೆ ಮತ್ತು ಕರ್ತವ್ಯವನ್ನು ಮರೆತು ವರ್ತಿಸುತ್ತಾರೆ. ಇದೀಗ ಅದೇ ರೀತಿಯ ಘಟನೆಯೊಂದು ಪಕ್ಕದ ಕೇರಳದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದ್ದು, ಮಾಡಿದ ಘನಂದಾರಿ ಕೆಲಸದಿಂದ ಅಮಾನತು ಶಿಕ್ಷಯನ್ನು ಅನುಭವಿಸುತ್ತಿದಾನೆ.

ಮತ್ತಷ್ಟು ಓದಿ : NHB : ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ.!

ಪೊಲೀಸ್​ ಅಧಿಕಾರಿಯೋರ್ವ ತನ್ನ ಕಾರಿಗೆ ಫುಲ್​ ಟ್ಯಾಂಕ್ ಪೆಟ್ರೋಲ್ ತುಂಬಿಸಿ ಹಣ ಕೊಡಲು ನಿರಾಕರಿಸಿದ್ದಾನೆ. ಆದರೆ ಬಂಕ್ ಸಿಬ್ಬಂದಿ ಪೊಲೀಸ್​ ಅಧಿಕಾರಿಗೆ ಪ್ರಶ್ನಿಸಿದ್ದಾನೆ.  ಹೀಗೆ ಪ್ರಶ್ನಿಸಿದಕ್ಕೆ ಅಧಿಕಾರಿ ಸಿಬ್ದಂದಿಗೆ ಕಾರು ಗುದ್ದಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಕಣ್ಣೂರಿನಲ್ಲಿ ಘಟನೆ ನಡೆದಿದ್ದು, ಎಎಸ್​ಐ ಕೆ. ಸಂತೋಷ್​ ಕುಮಾರ್ ಎಂಬುವವರು ಪೆಟ್ರೋಲ್ ಬಂಕ್ ನೌಕರ ಅನಿಲ್​ಗೆ ಡಿಕ್ಕಿ ಹೊಡೆದಿದ್ದಾರೆ, ಅದರ ಪರಿಣಾಮ ಅನಿಲ್​ ಕಾರಿನ ಬಾನೆಟ್​ ಮೇಲೆ ಬಿದ್ದಿದ್ದಾರೆ. ಅದನ್ನು ಲೆಕ್ಕಿಸದೆ 150 ಮೀಟರ್​ಗಳವರೆಗೆ ಎಳೆದೊಯ್ದಿದ್ದಾರೆ ಎನ್ನಲಾಗಿದೆ.

ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ, ಕೆ ಸಂತೋಷ್​ ಎಂಬುವವರು ತಮ್ಮ ಕಾರಿಗೆ ಪೆಟ್ರೋಲ್ (ರೂ.2100/-) ತುಂಬಿಸಿ ಬಳಿಕ ಹಣ ಕೊಡಲು ನಿರಾಕರಿಸಿದ್ದರು.ಸಂತೋಷ್ ಕುಮಾರ್ ಅವರನ್ನು ಹೊರಹೋಗದಂತೆ ತಡೆಯಲು ಅನಿಲ್ ಪ್ರಯತ್ನಿಸುತ್ತಿದ್ದಂತೆ, ಪೊಲೀಸ್ ಅಧಿಕಾರಿ ಕಾರು ಗುದ್ದಿಸಿದ್ದಾರೆ. ಕ್ಯಾಮರಾದಲ್ಲಿ ಈ ಘಟನೆ ಸೆರೆಯಾಗಿದೆ.

ಮತ್ತಷ್ಟು ಓದಿ : ಮೊಬೈಲ್‌ನಲ್ಲಿ ಮಾತನಾಡುತ್ತ road ದಾಟುತ್ತೀರಾ.? ಹಾಗಾದ್ರೆ ನೋಡಿ ಈ ಬೆಚ್ಚಿಬೀಳಿಸುವ ವಿಡಿಯೋ.!

ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆದ ನಂತರ ಎಎಸ್‌ಐ ಸಂತೋಷ್ ಕುಮಾರ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಕೈಗಳಿಗೆ ಗಾಯವಾಗಿರುವ ಅನಿಲ್ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಕಣ್ಣೂರು ನಗರ ಪೊಲೀಸ್ ಕಮಿಷನರ್ ಅಜಿತ್ ಕುಮಾರ್ ಅವರು ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿರುವುದನ್ನು ಖಚಿತಪಡಿಸಿದ್ದಾರೆ. ಆರೋಪಿ ಅಧಿಕಾರಿಯನ್ನು ಬಂಧಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದರು.

ವಿಡಿಯೋ ಕೃಪೆ : A V Creations.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img