Monday, November 4, 2024
spot_img
spot_img
spot_img
spot_img
spot_img
spot_img

ಮೊಬೈಲ್‌ನಲ್ಲಿ ಮಾತನಾಡುತ್ತ road ದಾಟುತ್ತೀರಾ.? ಹಾಗಾದ್ರೆ ನೋಡಿ ಈ ಬೆಚ್ಚಿಬೀಳಿಸುವ ವಿಡಿಯೋ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್ : ‌ನೀವು ರಸ್ತೆಯಲ್ಲಿ ಸಂಚರಿಸುವಾಗ ಅಥವಾ ರಸ್ತೆ ದಾಟುವಾಗ ಮೊಬೈಲ್‌ ಪೋನ್‌ನಲ್ಲಿ ಮಾತನಾಡುತ್ತಿರಾ.? ಹಾಗಾದ್ರೆ ನೀವ ಈ ವಿಡಿಯೋ ನೋಡಲೇ ಬೇಕು.

ಸಾಕಷ್ಟು ಸಾರಿ ನಾವು ರಸ್ತೆಯಲ್ಲಿ ನಡೆಯುತ್ತಿರುವಾಗ ಅಥವಾ ರಸ್ತೆ ದಾಟುವಾಗ ತಿಳಿದೋ ಅಥವಾ ತಿಳಿಯದೆಯೋ ಮೊಬೈಲ್‌ ನಲ್ಲಿ ಬ್ಯೂಸಿಯಾಗಿ ಬಿಟ್ಟಿರುತ್ತೇವೆ. ಆಗ ನಮಗೆ ರಸ್ತೆಯಲ್ಲಿ ಚಲಿಸುವ ವಾಹನದ ಬಗ್ಗೆ ಗಮನವಿರುವುದಿಲ್ಲ. ಹಾಗಾಗಿ ಇದರಿಂದ ಅನೇಕ ಅವಘಡಗಳು ಸಂಭವಿಸುತ್ತದೆ.

ಇದನ್ನೂ ಓದಿ : Health : ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಆಹಾರ ಪದಾರ್ಥಗಳಿವು.!

ಇದೀಗ ಅಂತಹದೊಂದು ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಆ ಘಟನೆ ನೋಡಿದರೆ ನೀವೆಂದು ಆ ತಪ್ಪು ಮಾಡಲ್ಲ ಅಂತ ತಿಳ್ಕೊಂಡಿದ್ದೇವೆ.

ಓರ್ವ ವ್ಯಕ್ತಿ ಹೆದ್ದಾರಿ ದಾಟುವಾಗ ಬಾಹ್ಯ ಜಗತ್ತಿನ ಪರಿವೆಯೇ ಇಲ್ಲದೆ ಮೊಬೈಲ್‌ ಪೋನ್‌ನಲ್ಲಿ ಮಾತನಾಡುತ್ತಾ ನಡೆದಿರುತ್ತಾನೆ. ಆಗ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಬಹು ಎತ್ತರಕ್ಕೆ ಎಗರಿ ಕೆಳಗೆ ಬೀಳುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಈ ರೀತಿ ಎಗರಿ ಕೆಳಗೆ ಬಿದ್ದ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆಂದು ತಿಳಿದು ಬಂದಿದೆ.

ಇಂಥ ಆಘಾತಕಾರಿ ಘಟನೆ ಜುಲೈ 14ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದ್ದು, ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರು ಹೊಡೆದ ರಭಸಕ್ಕೆ ವ್ಯಕ್ತಿಯ ತಲೆ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರಗೆ ದಾಖಲಾಗಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನಪ್ಪಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ : SSLC ಪಾಸಾಗಿದ್ದೀರಾ.? ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಮೊಬೈಲ್‌ನಲ್ಲಿ ಮಾತನಾಡುತ್ತ ಕಾರು ಅಪಘಾತದಿಂದ ಸಾವನ್ನಪ್ಪಿದ ವ್ಯಕ್ತಿಯನ್ನು ಅಣ್ಣೋಜಿಗುಡದ ಆರ್‌ಜಿಕೆ ಕಾಲೋನಿ ನಿವಾಸಿ ಬೊಡ್ಡು ಗಿರಿ ಬಾಬು (38) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಜುಲೈ 14ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಾಟ್ಕೇಸರ್ ಗ್ರಾಮದ ಕಡೆಗೆ ಹೋಗಲು ಎನ್‍ಟಿಪಿಸಿ ಎಕ್ಸ್ ರಸ್ತೆಯ ಬಳಿ ಎನ್ಎಚ್ -163 ರಸ್ತೆಯನ್ನು ದಾಟುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಅಪಘಾತವು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೊವನ್ನು @sudhakarudumula “ಎಕ್ಸ್” ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಮತ್ತು ತಮ್ಮ ಪೋಸ್ಟ್‌ನಲ್ಲಿ, ಮೊಬೈಲ್ ಫೋನ್‍ನಲ್ಲಿ ಮಾತನಾಡುವಾಗ ರಸ್ತೆ ದಾಟುವ ವ್ಯಕ್ತಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : ಅಂಚೆ ಇಲಾಖೆಯಲ್ಲಿ ಖಾಲಿ ಇರುವ 44,228 ಹುದ್ದೆಗಳಿಗೆ ಇಂದಿನಿಂದ (ದಿ.15) ಅರ್ಜಿ ಆಹ್ವಾನ.!

ಇನ್ನು ವ್ಯಕ್ತಿಗೆ ಕಾರು ಗುದ್ದಿಸಿದ್ದ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದು, ಪೊಚರಾಮ್ ಐಟಿ ಕಾರಿಡಾರ್ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ಚಾಲಕ ಹಾಗೂ ಆತನ ಕೆಂಪು ಬಣ್ಣದ ಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ನಿರ್ಲಕ್ಷ್ಯದಿಂದ ಮತ್ತು ವೇಗವಾಗಿ ಚಾಲಕ ಕಾರು ಚಲಾಯಿಸಿದ್ದ ಕಾರಣಕ್ಕೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img