Saturday, July 27, 2024
spot_img
spot_img
spot_img
spot_img
spot_img
spot_img

ಮಥುರಾ ಮಂದಿರ ಕೆಡವಿದ್ದು ಔರಂಗಜೇಬನೇ ; RTI ಅರ್ಜಿಗೆ ಪುರಾತತ್ವ ಇಲಾಖೆ ಉತ್ತರವೇನು.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಪುರಾತತ್ವ ಇಲಾಖೆಯಿಂದ ಶ್ರೀಕೃಷ್ಣ (Shri Krishna) ಜನ್ಮಸ್ಥಾನ ಮಥುರಾ (Mathura) ಹಾಗೂ ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ದೊರೆತಿದೆ.

ಮಥುರಾದ ಶ್ರೀಕೃಷ್ಣ ಜನ್ಮಸ್ಥಾನದಲ್ಲಿದ್ದ ಮಂದಿರವನ್ನು ಕೆಡವಿ ಮೊಘಲ್ ದೊರೆ ಔರಂಗಜೇಬ ಮಸೀದಿ ಕಟ್ಟಿದ ಎಂದು ಆರ್‌ಟಿಐ ಅರ್ಜಿದಾರರೊಬ್ಬರ ಪ್ರಶ್ನೆಗೆ ಪುರಾತತ್ವ ಇಲಾಖೆ (Department of Archaeology) ಉತ್ತರ ನೀಡಿದೆ.

ದೇಶಾದ್ಯಂತ ಇರುವ ದೇವಾಲಯಗಳ ಬಗ್ಗೆ ದೆಹಲಿಯ (Delhi) ಮೈನ್‌ಪುರಿಯ ನಿವಾಸಿ ಅಜಯ್ ಪ್ರತಾಪ್ ಸಿಂಗ್ ಎಂಬುವವರು ಆರ್‌ಟಿಐ ಅಡಿಯಲ್ಲಿ ಪುರಾತತ್ವ ಇಲಾಖೆಗೆ ಮಾಹಿತಿ ಕೇಳಿದ್ದರು. ಇದರಲ್ಲಿ ಮಥುರಾದಲ್ಲಿರುವ ಶ್ರೀಕೃಷ್ಣನ ಜನ್ಮಸ್ಥಳದ ಬಗ್ಗೆಯೂ ಮಾಹಿತಿ ಕೇಳಿದ್ದರು.

ಇದನ್ನು ಓದಿ : ರಸ್ತೆ ಬದಿಯ ವ್ಯಾಪಾರಿಗಳ ಮೇಲೆ ಪೊಲೀಸಪ್ಪನ ದರ್ಪ.!

1920 ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರಕಟವಾದ ಗೆಜೆಟ್ ಆಧಾರದ ಮೇಲೆ ಮಥುರಾದಲ್ಲಿ ಮೊದಲು, ಮಸೀದಿ ಇದ್ದ ಜಾಗದಲ್ಲಿ ಕತ್ರಾ ಕೇಶವದೇವ ದೇವಾಲಯವಿತ್ತು (temple). ನಂತರದಲ್ಲಿ ಔರಂಗಜೇಬನ ಕಾಲದಲ್ಲಿ ಅದನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಯಿತು ಎಂದು ಭಾರತದ ಪುರಾತತ್ವ ಇಲಾಖೆಯು ಉತ್ತರಿಸಿದೆ.

ಬ್ರಿಟಿಷರ ಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲೋಕೋಪಯೋಗಿ ಇಲಾಖೆಯು (Department of Public Works) ಉತ್ತರ ಪ್ರದೇಶದ ವಿವಿಧೆಡೆ 39 ಸ್ಮಾರಕಗಳ ಪಟ್ಟಿಯನ್ನು ನೀಡಿತ್ತು ಎಂದು ದಾಖಲಿಸಲಾಗಿದೆ. ಈ ಪಟ್ಟಿಯಲ್ಲಿ ಕತ್ರಾ ಕೇಶವ ದೇವ್ ಭೂಮಿಯಲ್ಲಿರುವ ಶ್ರೀ ಕೃಷ್ಣ ಭೂಮಿಯನ್ನು 37 ನೇ ಸ್ಥಾನದಲ್ಲಿ ಉಲ್ಲೇಖಿಸಲಾಗಿದೆ.

ಹಿಂದೆ ಕತ್ರಾ ದಿಬ್ಬದ ಮೇಲೆ ಕೇಶವ ದೇವ್ ದೇವಾಲಯವಿತ್ತು ಎಂದು ಬರೆಯಲಾಗಿದೆ. ಅದನ್ನು ಕೆಡವಿ, ಆ ಸ್ಥಳವನ್ನು ಮಸೀದಿಗಾಗಿ ಬಳಸಲಾಯಿತು ಎಂದು ಈ ರಾಜ್ಯಪತ್ರದಲ್ಲಿ ಮಾಹಿತಿ ಇದೆ ಎಂದು ಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸ್ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್ ತಿಳಿಸಿದ್ದಾರೆ.

ಆರ್‌ಟಿಐ ಮೂಲಕ ಸಿಕ್ಕಿದ ಮಾಹಿತಿಯನ್ನು ಅಲಹಾಬಾದ್‌ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ಗಳಲ್ಲಿ‌ (Supreme court) ಮುಂದಿನ ದಿನಗಳಲ್ಲಿ ನಡೆಯಲಿರುವ ವಿಚಾರಣೆ ವೇಳೆ ಸಲ್ಲಿಕೆ ಮಾಡಲಾಗುತ್ತದೆ ಎಂದು ಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸ್ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್ ಹೇಳಿದ್ದಾರೆ.

ವಿವಾದದ ಬಗ್ಗೆ ಮಾಹಿತಿ :
ಭಾರತಕ್ಕೆ ಬಂದ ಮುಸ್ಲಿಂ ದಾಳಿಕೋರ ಔರಂಗಜೇಬ್ ಮಥುರಾದಲ್ಲಿನ ದೇವಾಲಯವನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಿಸಿದ್ದ. 1670ರಲ್ಲಿ ಮಥುರಾದ ಕೇಸರಿ ಕೇಶವದೇವನ ದೇವಾಲಯವನ್ನು ಕೆಡವಲು (demolish) ಆತ ಆದೇಶ ನೀಡಿದ್ದ, ಇದಾದ ನಂತರ ಅಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗುತ್ತದೆ.

ಇದನ್ನು ಓದಿ : ನಾಯಿಗಳ ಗುಂಪಿನೊಂದಿಗೆ ಕಾಳಿಂಗ ಸರ್ಪದ ಏಕಾಂಗಿ ಹೋರಾಟ ; ವಿಡಿಯೋ ವೈರಲ್.!

13.37 ಎಕರೆ ಜಮೀನಿನ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ಈ ವಿವಾದ ಇದ್ದು, ಶ್ರೀ ಕೃಷ್ಣ ಜನ್ಮಸ್ಥಾನವು 10.9 ಎಕರೆ ಜಮೀನಿನ ಮಾಲೀಕತ್ವವನ್ನು (ownership) ಹೊಂದಿದ್ದರೆ, ಶಾಹಿ ಈದ್ಗಾ ಮಸೀದಿಯು ಎರಡೂವರೆ ಎಕರೆ ಜಮೀನಿನ ಮಾಲೀಕತ್ವವನ್ನು ಹೊಂದಿದೆ.

ಹಿಂದೂ ಸಮುದಾಯವೂ ಈ ಎರಡೂವರೆ ಎಕರೆ ಕೂಡ ಅಕ್ರಮ ಒತ್ತುವರಿಯಿಂದ (Illegal occupation) ಪಡೆದ ಜಾಗವಾಗಿದ್ದು, ಈ ಭೂಮಿ ಕೂಡ ಮಥುರಾ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಸೇರಿದ್ದಾಗಿದ್ದು, ಇಲ್ಲಿರುವ ಈದ್ಗಾ ಮಸೀದಿಯನ್ನು ತೆರವುಗೊಳಿಸಿ ಅಲ್ಲಿನ ಸಂಪೂರ್ಣ ಭೂಮಿಯನ್ನು ಶ್ರೀಕೃಷ್ಣ ಜನ್ಮಸ್ಥಾನಕ್ಕೆ ನೀಡಬೇಕು ಎಂಬುದು ಹಿಂದುಗಳ ಒತ್ತಾಯವಾಗಿದೆ.

spot_img
spot_img
- Advertisment -spot_img