Friday, June 21, 2024
spot_img
spot_img
spot_img
spot_img
spot_img
spot_img

ನಾಯಿಗಳ ಗುಂಪಿನೊಂದಿಗೆ ಕಾಳಿಂಗ ಸರ್ಪದ ಏಕಾಂಗಿ ಹೋರಾಟ ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಳಿಂಗ ಸರ್ಪವು ವಿಷಕಾರಿ ಹಾವಾಗಿದ್ದು, ಅದನ್ನು ಕಂಡವರು ಮಾರುದ್ದ ದೂರ ಓಡಿಹೋಗುತ್ತಾರೆ. ನಾಯಿಗಳು (dogs) ಹಾಗಲ್ಲ. ಕಾಳಿಂಗ ಅಪಾಯಕಾರಿ ಪ್ರಾಣಿಯಾದರೂ ಕಾದಾಟಕ್ಕೆ ಇಳಿಯುತ್ತವೆ.

ಇನ್ನೂ ಕಾಳಿಂಗ ಸರ್ಪ ಹಾಗೂ ನಾಯಿಯ ಗುಂಪಿನೊಂದಿಗೆ ನಡೆದ ಜಗಳದ ವಿಡಿಯೋವೊಂದು ವೈರಲ್ (Video viral) ಆಗಿದೆ. ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊವನ್ನು ಪೋಸ್ಟ್‌ ಮಾಡಲಾಗಿದೆ.

ಇದನ್ನು ಓದಿ : ರಾತ್ರಿ ಊಟದ ಬಳಿಕ ವೀಳ್ಯದೆಲೆ ತಿನ್ನುವುದರಿಂದ ಆಗುವ ಪ್ರಯೋಜನಗಳು.!

ಸುತ್ತಮುತ್ತಲು ಪೊದೆಗಳಿರುವ ಬಯಲು ಪ್ರದೇಶದಲ್ಲಿ ಹರಿದಾಡುತ್ತಿರುವ ಕಾಳಿಂಗ ಸರ್ಪವನ್ನು ತೋರಿಸುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಆ ಮಾರುದ್ದದ ಹಾವಿನ ಸುತ್ತ ನಿಂತುಕೊಂಡಿರುವ 5 ಬೀದಿ ನಾಯಿಗಳು ಏಕ ಕಾಲಕ್ಕೆ ದಾಳಿ (attack) ಮಾಡಿವೆ. ಒಂದು ಬಾಲ ಕಚ್ಚಿ ಎಳೆದರೆ, ಇನ್ನೊಂದು ದೇಹದ ಮಧ್ಯ ಭಾಗಕ್ಕೆ ಬಾಯಿ ಹಾಕುತ್ತದೆ. ಇನ್ನೊಂದು ತಲೆಯ ಹತ್ತಿರ ಆಕ್ರಮಣ ಮಾಡಲು ಮುಂದಾಗುತ್ತದೆ.

ಇತ್ತ ಹಾವು ಏಕಾಂಗಿಯಾಗಿ (alone) ಹೋರಾಟ ನಡೆಸುತ್ತದೆ. ಹೆಡೆ ಎತ್ತಿ ರೋಷದಿಂದ ಹಿಮ್ಮೆಟ್ಟಿಸಲು ನೋಡುತ್ತದೆ. ಸುತ್ತ ಶತ್ರುಗಳು ತುಂಬಿದ್ದರೂ ಛಲ ಬಿಡದೆ ಏಕಾಂಗಿಯಾಗಿ ಹೋರಾಡುವ ಧೀರ ಯೋಧನಂತೆ ಹಾವು ತನ್ನ ಪ್ರಯತ್ನ (try) ಮುಂದುವರಿಸುತ್ತದೆ.

ಕಾಳಿಂಗ ಸರ್ಪ ಮತ್ತು ಶ್ವಾನ ಗುಂಪುಗಳ ಈ ಕದನದ ಕೊನೆಗೆ ಏನಾಯಿತು ಎನ್ನುವುದು ತಿಳಿದು ಬಂದಿಲ್ಲ. ಒಟ್ಟಿನಲ್ಲಿ ಈ ಭೀಕರ ಹೋರಾಟ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ಇದನ್ನು ಓದಿ : ಠಾಣೆಯ ಆವರಣದಲ್ಲಿಯೇ ಹೆಡ್ ಕಾನ್ಸ್‌ಟೇಬಲ್ ಲೋಕಾಯುಕ್ತ ಬಲೆಗೆ.!

ವಿಡಿಯೋ ನೋಡಿ ಹಲವರು ವಿವಿಧ ರೀತಿಯ ಕಮೆಂಟ್‌ ಮಾಡಿದ್ದಾರೆ. ʼʼತಂಡವಾಗಿ ಕೆಲಸ ಮಾಡಿದರೆ ಯಾವ ಕೆಲಸವೂ ಕಷ್ಟವಲ್ಲ ಎನ್ನುವುದು ಇದರಿಂದ ತಿಳಿದುಕೊಂಡೆ ಎಂದು ಕೆಲವರು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ʼʼಒಗ್ಗಟ್ಟಿನಿಂದ, ಒಂದು ತಂಡವಾಗಿ ಕೆಲಸ ಮಾಡಿದರೆ ಜಯ ನಿಶ್ಚಿತ ಅಂತ ಕಮೆಂಟ್ (comments) ಮಾಡಿದ್ದಾರೆ.

 

View this post on Instagram

 

A post shared by TYRESE (@tyrese)

spot_img
spot_img
- Advertisment -spot_img