ಜನಸ್ಪಂದನ ನ್ಯೂಸ್, ಬೆಂಗಳೂರು : ಪೊಲೀಸ್ ಕಾನ್ಸ್‌ಟೇಬಲ್ ಓರ್ವ ರಸ್ತೆ ಬದಿ ತರಕಾರಿ ಮಾರುವವರ (Vegetables Seller) ತಳ್ಳುವ ಗಾಡಿ ಎತ್ತಿಸೋಕೆ ಬಂದು ನಡುರಸ್ತೆಯಲ್ಲಿಯೇ ತಕ್ಕಡಿ ಎಸೆದು ದರ್ಪ ತೋರಿದ ಘಟನೆ ಮೈಸೂರು (Mysore) ಬ್ಯಾಂಕ್ ಸರ್ಕಲ್ ಬಳಿ ನಡೆದಿದೆ.
ಕಷ್ಟಪಟ್ಟು ದುಡಿದು ತಿನ್ನೋರ ಮೇಲೆ ಉಪ್ಪಾರಪೇಟೆ ಸಂಚಾರಿ ಠಾಣೆಯ ಕಾನ್ಸ್‌ಟೇಬಲ್ ಈ ರೀತಿ ದರ್ಪ ತೋರಿದ್ದಾರೆ. ರಸ್ತೆಬದಿ ವ್ಯಾಪಾರಿಗಳ ಮೇಲೆ ರೋಷಾವೇಶ ತೋರಿಸಿದ್ದಾರೆ.
ಇದನ್ನು ಓದಿ : ನಾಯಿಗಳ ಗುಂಪಿನೊಂದಿಗೆ ಕಾಳಿಂಗ ಸರ್ಪದ ಏಕಾಂಗಿ ಹೋರಾಟ ; ವಿಡಿಯೋ ವೈರಲ್.!
ಇನ್ನೂ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತಿಸೋದು ಎಷ್ಟು ಸರಿ ಅಂತ ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು (public) ಪ್ರಶ್ನೆ ಮಾಡುತ್ತಿದ್ದಾರೆ.
ಪೊಲೀಸ್ ನೆಲಕ್ಕೆ ಎಸೆದ ಪರಿಣಾಮ ತಕ್ಕಡಿ ಒಡೆದು ಹೋಗಿದ್ದು, ಪೊಲೀಸ್ ಕಾನ್ಸ್‌ಟೇಬಲ್ ನಾಗರಾಜ್ (Nagaraj) ವರ್ತನೆಗೆ ಸ್ಥಳೀಯ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತರಕಾರಿ ಮಾರುವ ವೇಳೆ ಅಂಗಡಿ ಎತ್ತಿಸಲು ನಾಗರಾಜ್ ಬಂದಿದ್ದರು. ಈ ವೇಳೆ ತಳ್ಳುವ ಗಾಡಿ ಮೇಲಿದ್ದ ತಕ್ಕಡಿ (Weighing machine) ತೆಗೆದುಕೊಂಡು ನೆಲಕ್ಕೆ ಎಸೆದಿದ್ದಾರೆ. ನಡುರಸ್ತೆಯಲ್ಲಿ ತಕ್ಕಡಿ ಎಸೆದು ನಾಗರಾಜ್ ದರ್ಪ ತೋರಿದ್ದಾರೆ.
ಇದನ್ನು ಓದಿ : ದೇವಸ್ಥಾನದ ಶಿವಲಿಂಗದ ಮೇಲೆ ಗೀಚಿ ದುಷ್ಕರ್ಮಿಗಳಿಂದ ವಿಕೃತಿ.!
ಇತ್ತೀಚೆಗೆ ಹೈಕೋರ್ಟ್ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಿಸಬೇಕೆಂದು ಸೂಚನೆ ನೀಡಿತ್ತು. ಕೋರ್ಟ್ ನಿಯಮ ಪಾಲಿಸಬೇಕಾಗಿರುವುದು ಎಲ್ಲರ ಕರ್ತವ್ಯ. ಹೀಗಾಗಿ ನಾಗರಾಜ್ ಕೂಡ ಬಂದು ವ್ಯಾಪಾರಿಗಳ ಬಳಿ ಬಂದು ಅಂಗಡಿ ಎತ್ತುವಂತೆ ಹೇಳಲು ಬಂದು ಈ ರೀತಿ ನಡೆದುಕೊಂಡಿದ್ದಾರೆ.