Sunday, September 8, 2024
spot_img
spot_img
spot_img
spot_img
spot_img
spot_img
spot_img

ಸಾಮಾನ್ಯ ರೋಗಿಯಂತೆ ಸರ್ಕಾರಿ ಆಸ್ಪತ್ರೆಗೆ ಬಂದ IAS ಅಧಿಕಾರಿ ; ಮುಂದೆನಾಯ್ತು.? ವಿಡಿಯೋ ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ತಮ್ಮ ಮುಖವನ್ನು ಮುಚ್ಚಿಕೊಂಡು ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ರೋಗಿಯಂತೆ ಆಸ್ಪತ್ರೆಗೆ ಹೋಗಿ, ದಿಢೀರ್​ ತಪಾಸಣೆ (Quick inspection) ಮಾಡಿ ಅಲ್ಲಿದ್ದ ಸಿಬ್ಬಂದಿಗೆ ಶಾಕ್ ನೀಡಿದ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಸದ್ಯ ಐಎಎಸ್ ಅಧಿಕಾರಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಾಮಾನ್ಯ ರೋಗಿಯಂತೆ‌ (normal patient) ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಪಿಎಸ್ಐ.!

ಫಿರೋಜಾಬಾದ್‌ನಲ್ಲಿರುವ (Firozabad) ದಿದಾ ಮಾಯಿ ಆರೋಗ್ಯ ಕೇಂದ್ರದಲ್ಲಿ ರೋಗಿಗಳು ಎದುರಿಸುತ್ತಿರುವ ತೊಂದರೆಗಳು ಮತ್ತು ಅನಾನುಕೂಲಗಳ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಹಲವು ದೂರುಗಳು ಬಂದಿದ್ದವು.

ಸಾರ್ವಜನಿಕರಿಂದ ಬಂದ ಹಲವಾರು ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಫಿರೋಜಾಬಾದ್ ಸಬ್​ ಡಿವಿಜಿನಲ್​​ ಮ್ಯಾಜಿಸ್ಟ್ರೇಟ್ (ಎಸ್​ಡಿಎಂ) ಕೃತಿ ರಾಜ್, ಆಸ್ಪತ್ರೆಗೆ ದಿಢೀರ್ ಭೇಟಿ ತಪಾಸಣೆ ನಡೆಸಲು ನಿರ್ಧರಿಸಿದರು.

ಅಂತೆಯೇ ಕೃತಿ ರಾಜ್ ಅವರು ರೋಗಿಗಳಂತೆ ಮಾಸ್ಕ್ ಧರಿಸಿ, ವೈದ್ಯರ ತಪಾಸಣೆಗಾಗಿ ಆಸ್ಪತ್ರೆಗೆ ಹೋದರು. ಆದರೆ, ರೋಗಿಗಳ ಜೊತೆ ವೈದ್ಯರು ಸರಿಯಾಗಿ ವರ್ತಿಸುತ್ತಿಲ್ಲ ಎಂಬುದು ಅಧಿಕಾರಿಗೆ ತಿಳಿಯಿತು. ಇದಲ್ಲದೆ, ಆಸ್ಪತ್ರೆಯ ಮೆಡಿಕಲ್ ಸ್ಟಾಕ್ ಸ್ಟೋರ್‌ನಲ್ಲಿ ಹಲವು ಔಷಧಿಗಳು ಅವಧಿ ಮೀರಿರುವುದು (expired) ಗೊತ್ತಾಯಿತು.

ವಿದ್ಯಾರ್ಥಿಗಳಿಗೆ Good News : ರಾಜ್ಯ ಸರ್ಕಾರದಿಂದ ಸ್ಕಾಲರ್ಶಿಪ್.!

ಹಾಜರಾತಿ ದಾಖಲಾತಿಯನ್ನು ಪರಿಶೀಲಿಸಿದಾಗ ರಿಜಿಸ್ಟರ್‌ನಲ್ಲಿ ಕೆಲವು ಸಹಿಗಳಿದ್ದು, ಉಳಿದವರು ಆಸ್ಪತ್ರೆಯಲ್ಲಿ ಇಲ್ಲದಿರುವುದು, ಕರ್ತವ್ಯದಲ್ಲಿದ್ದ ಸಿಬ್ಬಂದಿಯು ಸಹ ಸರಿಯಾಗಿ ಸೇವೆ ಸಲ್ಲಿಸುತ್ತಿಲ್ಲ ಎಂಬುದನ್ನು ತಿಳಿದು ಎಲ್ಲರನ್ನು ಕೃತಿ ರಾಜ್​ ತೀವ್ರ ತರಾಟೆಗೆ ತೆಗೆದುಕೊಂಡರು ಎಂದು ವರದಿ ತಿಳಿಸಿದೆ.

ಈ ಕುರಿತು ಐಎಎಸ್ ಅಧಿಕಾರಿ ಕೃತಿ, ನಾಯಿ ಕಡಿತಕ್ಕೆ ಚುಚ್ಚುಮದ್ದು (injection) ನೀಡಲು 10 ಗಂಟೆ ಕಳೆದರೂ ವೈದ್ಯರು ಬಂದಿರಲಿಲ್ಲ ಎಂದು ದೂರು ಬಂದಿತ್ತು. ಹಾಗಾಗಿ ಮಾರುವೇಷದಲ್ಲಿ ಆಸ್ಪತ್ರೆಗೆ ಹೋಗಿದ್ದೆ. ಆಸ್ಪತ್ರೆಯ ಸ್ಥಿತಿಗತಿ ಕುರಿತು ಶೀಘ್ರವೇ ವರದಿ ಕಳುಹಿಸುವುದಾಗಿ ತಿಳಿಸಿದರು ಎಂದು ವರದಿಯಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img