ಜನಸ್ಪಂದನ ನ್ಯೂಸ್, ಡೆಸ್ಕ್ : ದೇವಸ್ಥಾನದ ಉತ್ಸವದ ಮೆರವಣಿಗೆ ಸಂದರ್ಭದಲ್ಲಿ (A festive procession occasion) ಆನೆಯೊಂದು ಅಟ್ಟಹಾಸ ಮೆರೆದಿದ್ದು, ಸುಮಾರು ಹದಿನೇಳು ಜನರು ಗಾಯಗೊಂಡ ಘಟನೆ ನಡೆದಿದೆ
ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದ ವೇಳೆ ಇಂತದ್ದೊಂದು ಘಟನೆ ಸಂಭವಿಸಿದೆ. ಕೇರಳದ ಮಲಪ್ಪುರಂ ನ (Malappuram, Kerala) ಪುತಿಯಂಗಡಿಯಲ್ಲಿ ಬುಧವಾರ (ಜ. 8) ಬೆಳಿಗ್ಗೆ ಈ ಆಘಾತಕಾರಿ ಘಟನೆ (shocking incident) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Video : ಡಿಸಿಪಿ ಕಚೇರಿ ಮುಂದೆ ಗರ್ಲ್ಫ್ರೆಂಡ್ ಬರ್ತ್ಡೇ ಆಚರಿಸಿ ಸವಾಲೆಸೆದ ಗ್ಯಾಂಗ್ಸ್ಟರ್.!
ಇನ್ನೂ ಘಟನೆಯ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಆನೆಯು ಉದ್ರೇಕಗೊಂಡು ಜನರ ಗುಂಪಿನತ್ತ ಧಾವಿಸಿದೆ. ಈ ವೇಳೆ ಓರ್ವ ವ್ಯಕ್ತಿಯನ್ನು ಸೊಂಡಿಲಿನಲ್ಲಿ ಎತ್ತಿ ಗಾಳಿಯಲ್ಲಿ ಬಿಸಾಕುತ್ತಿರುವುದನ್ನು (Raised in the trunk and thrown in the air) ಕಾಣಬಹುದು.
ಇದನ್ನು ಓದಿ : ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಅಂದ್ರೆ ನೀವು ನಂಬುತ್ತಿರಾ.? ಈ Video ನೋಡಿ.!
ಆ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಕೊಟ್ಟಕಲ್‌ನ ಆಸ್ಟರ್ ಮಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಬಳಿಕ ಆನೆಯನ್ನು ಅದರ ಪಾಲಕರು ನಿಯಂತ್ರಣಕ್ಕೆ ತಂದರು (The elephant was brought under control with the help of the guardians). ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನರು ಆನೆಯ ವರ್ತನೆಯನ್ನು ಕಂಡು ದಿಕ್ಕುಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ವೇಳೆ ಕಾಲ್ತುಳಿತವೂ (stampede) ಸಂಭವಿಸಿದೆ ಎಂದು ವರದಿಯಾಗಿದೆ.
ಇದನ್ನು ಓದಿ : Video : ಗಾಳಿಪಟ ಹಾರಿಸುತ್ತಿರುವ ಮಂಗ : “ಇದು ಭಾರತದಲ್ಲಿ ಮಾತ್ರ ಸಾಧ್ಯ” ಎಂದ ನೆಟ್ಟಿಗರು.!
ಆನೆಯು ಸೊಂಡಿಲಿನಿಂದ ವ್ಯಕ್ತಿಯನ್ನು ಎತ್ತಿ ಬಿಸಾಕುತ್ತಿರುವ ವಿಡಿಯೋ ಇಲ್ಲಿದೆ :
#WATCH | Malappuram, Kerala: Many people were injured when an elephant turned violent during Puthiyangadi annual 'nercha' at BP Angadi, Tirur
(ANI)#Kerala #elephantattack #elephant #Nercha #Tirur pic.twitter.com/7yMQu6Fczk
— Argus News (@ArgusNews_in) January 8, 2025
ಹಿಂದಿನ ಸುದ್ದಿ : ಈ ಒಂದು ಬೇರಿನಲ್ಲಿದೆ ಅತ್ಯದ್ಭುತ ಆರೋಗ್ಯ ಪ್ರಯೋಜನಗಳು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಹಲವರು ಚಳಿಗಾಲದಲ್ಲಿ ಕೆಮ್ಮು, ನೆಗಡಿ, ಜ್ವರ ಬಂದರೆ ನೈಸರ್ಗಿಕ ಪರಿಹಾರಗಳನ್ನು (natural remedy) ಬಳಸುತ್ತಾರೆ. ಅವುಗಳಲ್ಲಿ ಮುಲೇಥಿ ಬೇರು (ಲೈಕೋರೈಸ್ ರೂಟ್) ಒಂದಾಗಿದೆ.
ಇದನ್ನು ಓದಿ : ಕಡಲೆ ಕಾಯಿ (ಶೇಂಗಾ) ಸೇವನೆಯಿಂದ ಆಗುವ ನಂಬಲಾರ್ಹ ಪ್ರಯೋಜನಗಳಿವು.!
ಯಷ್ಟಿಮಧು ಚೂರ್ಣ ಎಂಬ ಹೆಸರಿನಲ್ಲಿ ಈ ಬೇರಿನ ಪುಡಿ ಆಯುರ್ವೇದದ ಅಂಗಡಿಗಳಲ್ಲಿ (Ayurvedic shops) ಸಿಗುತ್ತದೆ. ಇದರ ಬೇರನ್ನು ಅಥವಾ ಈ ಚೂರ್ಣವನ್ನು ಸ್ವಲ್ಪವೇ ಸ್ವಲ್ಪ ತೆಗೆದುಕೊಂಡು ನೀರಿನಲ್ಲಿ ಹತ್ತು ನಿಮಿಷ ಕುದಿಸಿ ಊಟ ಮಾಡುವುದಕ್ಕಿಂತ ಮುಂಚೆ (Boil for ten minutes before eating) ಕುಡಿಯುವುದರಿಂದ ಜಠರದ ಒಳಭಾಗದಲ್ಲಿ (Inside the stomach) ರಕ್ಷಣಾ ಕವಚವೊಂದನ್ನು ನಿರ್ಮಿಸಿ ಉರಿ ಮತ್ತು ಎದೆಯುರಿ ಅಥವಾ ಹುಳಿತೇಗು ಆಗದಂತೆ ತಡೆಯಬಹುದು ಎಂದು ವರದಿಯಾಗಿದೆ.
ಇಂಡೊಮೆಥಾಸಿನ್- ಪ್ರೇರಿತ ಹುಣ್ಣುಗಳನ್ನು (Indomethacin- induced ulcers) ಹೊಂದಿರುವ ಇಲಿಗಳಿಗೆ ಲೈಕೋರೈಸ್ ಎಫ್‌ಟಿ (ಫಾಮೋಟಿಡಿನ್) ಸಂಯೋಜನೆಯ ಚಿಕಿತ್ಸೆಯನ್ನು ನೀಡಲಾಯಿತು. ಅಚ್ಚರಿಯ ಸಂಗತಿಯೆಂದರೆ ಇತರೆ ಚಿಕಿತ್ಸೆಗಿಂತ ಎಫ್‌ಟಿ ಮತ್ತು ಲೈಕೋರೈಸ್‌ಗಳು ಹುಣ್ಣುಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಯಿತು ಎಂದು ಪಬ್‌ಮೆಡ್‌ನಲ್ಲಿ ಪ್ರಕಟವಾದ ಜೋರ್ಡಾನ್‌ನ ಅಲ್- ಇಸ್ರಾ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಫಾರ್ಮಸಿಯು ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!
ಪ್ರಯೋಜನಗಳು :
ಮುಲೇಥಿಯಲ್ಲಿ ಫೈಟೊಈಸ್ಟ್ರೊಜೆನ್‌ಗಳು ಇದ್ದು ಅದು ಹಾರ್ಮೋನ್ ಮಟ್ಟವನ್ನು ನಿಯಂತ್ರಿಸಲು (regulate hormone levels) ಸಹಾಯ ಮಾಡುತ್ತದೆ.
ಹೊಟ್ಟೆಯ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಇದು ತುಂಬಾ ಪ್ರಯೋಜನಕಾರಿ. ಹೊಟ್ಟೆಯಲ್ಲಿ ಲೋಳೆಯ ಉತ್ಪಾದನೆಯನ್ನು ಹೆಚ್ಚಿಸಿ (Increase the production of mucus in the stomach), ಹೊಟ್ಟೆಯ ಒಳಪದರವನ್ನು ರಕ್ಷಿಸುತ್ತದೆ. ಅಲ್ಲದೇ ಗ್ಯಾಸ್ಟ್ರಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
ಇದನ್ನು ಓದಿ : Shocking ಘಟನೆ : ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದವನ ಜೊತೆ ಓಡಿಹೋದ 10ರ ಬಾಲಕಿ.!
ಮುಲೇಥಿಯು ಸಕ್ಕರೆಗಿಂತ ಸಿಹಿಯಾಗಿರುತ್ತದೆ. ಹಾಗಾಗಿ ಸಿಹಿತಿಂಡಿಗಳು ಮತ್ತು ಔಷಧಿಗಳನ್ನು ತಯಾರಿಸುವಾಗ ನೈಸರ್ಗಿಕ ಸಿಹಿಕಾರಕವಾಗಿ (Natural sweetener) ಇದನ್ನು ಉಪಯೋಗಿಸಲಾಗುತ್ತದೆ.
ಸಂಧಿವಾತ, ಅಲರ್ಜಿ ಮತ್ತು ಚರ್ಮದ ಕಿರಿಕಿರಿಯ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಆ್ಯಂಟಿವೈರಲ್, ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಪ್ರತಿರಕ್ಷಣಾ ವ್ಯವಸ್ಥೆಯನ್ನು (Immune system) ಇದು ಬಲಪಡಿಸುತ್ತದೆ.
ಇದನ್ನು ಓದಿ : ರೊಮ್ಯಾಂಟಿಕ್ ಆಗಿ ಪತ್ನಿಗೆ ಹೂ ಮುಡಿಸುತ್ತಿರುವಾಗ ಹಸುವಿನ ಆಗಮನ ; ಮುಂದೆನಾಯ್ತು Video ನೋಡಿ.!
ನೋಯುತ್ತಿರುವ ಗಂಟಲು ಮತ್ತು ಉಸಿರಾಟದ ಸೋಂಕುಗಳಿಂದ ಮುಲೇಥಿಯು ಪರಿಹಾರವನ್ನು ನೀಡುತ್ತದೆ.
ದೇಹವು ಸೋಂಕುಗಳ ವಿರುದ್ಧ ಹೋರಾಡಲು ಮುಲೇಥಿ ಸಹಾಯ ಮಾಡುತ್ತದೆ.
ಹಾರ್ಮೋನುಗಳ ಅಸಮತೋಲನ ಅಥವಾ ಋತುಬಂಧದ ಲಕ್ಷಣಗಳನ್ನು (Menopausal symptoms) ಅನುಭವಿಸುತ್ತಿರುವ ಮಹಿಳೆಯರಿಗೆ ಇದರಿಂದ ಪ್ರಯೋಜನ ಪಡೆಯಬಹುದು.
ಇದನ್ನು ಓದಿ : ತೊಡೆ ಮೇಲೆ Girlfriend ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಕಾರು ಚಲಾಯಿಸಿದ ಯುವಕ.!
ಆದರೆ ಮುಲೇಥಿಯ ದೀರ್ಘಾವಧಿಯ ಸೇವನೆ ಅಥವಾ ಮಿತಿಮೀರಿದ ಬಳಕೆಯು ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ (Long- term consumption or overuse can cause side effects). ಆದ್ದರಿಂದ ನೀವು ನಿಯಮಿತವಾಗಿ ಬಳಸುವ ಯೋಚನೆಯಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.