Wednesday, May 22, 2024
spot_img
spot_img
spot_img
spot_img
spot_img
spot_img

ಲೈಂಗಿಕ ಕಿರುಕುಳ ಆರೋಪ ; DIG ಸೇವೆಯಿಂದ ವಜಾ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಿಆರ್‌ಪಿಎಫ್ ಡಿಐಜಿ ಖಜಾನ ಸಿಂಗ್‌ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಸಾಬೀತಾಗಿರುವ (prove) ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

ಲೈಂಗಿಕ ಕಿರುಕುಳ (Physical abuse) ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಹಿನ್ನೆಲೆ ಕರ್ತವ್ಯದಿಂದ ವಜಾಗೊಳಿಸಿ (dismissed) ಆದೇಶ ಹೊರಡಿಸಲಾಗಿದೆ.

ಇದನ್ನು ಓದಿ : LS Election – 2024 : ಮತದಾನ ಬಹಿಷ್ಕರಿಸಿದ್ದ ಗ್ರಾಮದಲ್ಲಿ ಮತಯಂತ್ರ – ಮತಗಟ್ಟೆ ಪುಡಿ ಪುಡಿ.!

ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಖಜನಾ ಸಿಂಗ್‌ರನ್ನು ವಜಾಗೊಳಿಸುವ ಪ್ರಕ್ರಿಯೆ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ (to Union Home Ministry) ಶಿಫಾರಸು ಮಾಡಲಾಗಿದೆ.

ಮುಂಬಯಿಯಲ್ಲಿ ಸೇವೆ ಸಲ್ಲಿಸುತ್ತಿರುವ ಖಜಾನ ಸಿಂಗ್‌ಗೆ ನೋಟಿಸ್‌ ಕೂಡ ನೀಡಲಾಗಿತ್ತು.

ಇನ್ನು ತಮ್ಮ ವಿರುದ್ಧ ಲೈಂಗಿಕ ಕಿರುಕುಳ (Sexual harassment) ಆರೋಪ ಕೇಳಿ ಬರುತ್ತಿದ್ದಂತೆ ಈ ಹಿಂದೆಯೇ ಖಂಜನ್‌ ಸಿಂಗ್‌ ಅದನ್ನು ನಿರಾಕರಿಸಿದ್ದರು. ತಮ್ಮ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಇಂತಹ ಸುಳ್ಳು ಆರೋಪಗಳನ್ನು (False accusations) ಮಾಡಲಾಗುತ್ತಿದೆ ಎಂದು ಹೇಳಿದ್ದರು ಎಂದು ವರದಿ ತಿಳಿಸಿದೆ.

ಇದನ್ನು ಓದಿ : ಪಬ್ಲಿಕ್‌ನಲ್ಲಿಯೇ ಜಾರಿತು ನಟಿಯ clothes ; ಮೂರು ಬಿಟ್ಟವರು ಊರಿಗೆ ದೊಡ್ಡವರೆಂದ ನೆಟ್ಟಿಗರು.!

ಇನ್ನು ಖಂಜನ್‌ ಸಿಂಗ್‌ ವಿರುದ್ಧ ಎರಡು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿತ್ತು. ಇದೀಗ ಒಂದು ಪ್ರಕರಣದಲ್ಲಿ ಅವರು ದೋಷಿ ಎಂದು ಸಾಬೀತಾಗಿದ್ದು, ಮತ್ತೊಂದು ಪ್ರಕರಣದ ತನಿಖೆ ಮುಂದುವರಿದೆ ಎಂದು ಸಿಆರ್‌ಪಿಎಫ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿರುವ ಖಜಾನ ಸಿಂಗ್‌ 1986 ಏಷ್ಯನ್‌ ಗೇಮ್ಸ್‌ನ ಈಜು ಸ್ಪರ್ಧೆಯಲ್ಲಿ ಭಾರತಕ್ಕೆ ಮೊಟ್ಟ ಮೊದಲ ಬೆಳ್ಳಿ ಪದಕ ಗೆದ್ದಿದ್ದರು.

 

spot_img
spot_img
spot_img
- Advertisment -spot_img