Sunday, September 8, 2024
spot_img
spot_img
spot_img
spot_img
spot_img
spot_img
spot_img

conflict : ಖಬರ್‌ಸ್ಥಾನದಲ್ಲಿ ಮರ ಕಡಿದ ಆರೋಪ : ಭುಗಿಲೆದ್ದ ಸಂಘರ್ಷ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ (Bhadravati) ತಾಲೂಕಿನ ಜಂಬರಘಟ್ಟೆಯಲ್ಲಿ ಮುಸ್ಲಿಂ ಖಬರ್ ಸ್ಥಾನದ ಜಾಗದಲ್ಲಿ ಮರ ಕಡಿದ ವಿಚಾರಕ್ಕೆ ವ್ಯಕ್ತಿಯ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿ ಹೊಸ ಜಂಬಘಟ್ಟೆ ನಿವಾಸಿ ರವಿ (20) ಎಂದು ತಿಳಿದು ಬಂದಿದ್ದು, ಹಲ್ಲೆ ನಡೆಸಿದ ಬಳಿಕ ಯುವಕರು ಪರಾರಿಯಾಗಿದ್ದಾರೆ.

ಘಟನೆಯ ಹಿನ್ನೆಲೆ :
ಹಲ್ಲೆಗೊಳಗಾದ ರವಿ ಜೀವನೋಪಾಯಕ್ಕಾಗಿ (Livelihood) ಕುರಿಗಳನ್ನು ಸಾಕಿದ್ದಾರೆ. ಮನೆಯಲ್ಲಿ ಕುರಿ ಕಟ್ಟುವ ಗೂಟ ಮುರಿದ ಕಾರಣ ಖಬರ್ ಸ್ಥಾನದ ಬಳಿ ಹೋಗಿದ್ದಾರೆ. ಅಕೆಶಿಯ ಮರದಿಂದ ಕೊಂಬೆಯೊಂದನ್ನು ಕಡಿದುಕೊಂಡು ಕುರಿ ಕಟ್ಟಲು ಬೇಕಾದ ಗೂಟವನ್ನು ಸಿದ್ದಪಡಿಸಿಕೊಂಡು ಹೋಗಿದ್ದಾನೆ. ಇದೆ ಘಟನೆಯಿಂದ ಕೋಮು ಸಂಘರ್ಷದ ರೂಪ ಪಡೆದಿದೆ.

ಇದನ್ನು ಓದಿ : ರಸ್ತೆ ಬದಿಯ ವ್ಯಾಪಾರಿಗಳ ಮೇಲೆ ಪೊಲೀಸಪ್ಪನ ದರ್ಪ.!

ರವಿ ಮರ ಕಡಿಯುವುದನ್ನು (Chopping wood) ಕಂಡು ಅಲ್ಲಿಗೆ ಬಂದಿರುವ ಯುವಕರು ರವಿಯನ್ನು ತಡೆದು ಪ್ರಶ್ನಿಸಿ ಹಲ್ಲೆಗೆ ಮುಂದಾಗಿದ್ದಾರೆ. ಇನ್ನೂ ಈ ವಿಚಾರ ಗ್ರಾಮ ಸಮಿತಿಯ ತನಕ ಹೋಗಿದೆ. ಸಮಿತಿಯವರು ಸಣ್ಣದನ್ನೆ ದೊಡ್ಡದು ಮಾಡಿಕೊಂಡು ಹೋಗುವುದು ಬೇಡವೆಂದು ಬುದ್ಧಿಮಾತು ಹೇಳಿದ್ದಾರೆ.

ಗ್ರಾಮ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ಇತ್ಯರ್ಥವಾಗಿದೆ. ಆದರೂ ಸುಮ್ಮನಾಗದ ಕೆಲ ಮುಸ್ಲಿಂ ಯುವಕರು ರವಿ ಮನೆ ಬಳಿ ಹೋಗಿ ಮತ್ತೆ ಗಲಾಟೆ ಮಾಡಿದ್ದಾರೆ. ಗಲಾಟೆ ವಿಷಯ ಅಕ್ಕಪಕ್ಕದವರಿಗೆ ತಿಳಿದು ಗ್ರಾಮದಲ್ಲಿ ಜನರ ಗುಂಪು ಸೇರಿದೆ.

ರವಿ ಮೇಲೆ ಹಲ್ಲೆಗೆ ಮುಂದಾಗ್ತಿದ್ದಂತೆ ಜನರ ನಡುವೆ ನೂಕಾಟ ತಳ್ಳಾಟ ನಡೆದು ಹೊಡೆದಾಟ ನಡೆದು ಹೋಗಿದೆ. ಎರಡು ಕಡೆಯವರಿಗೆ ಗಾಯಗಳಾಗಿದ್ದು (injuries), ಗಾಯಾಳುಗಳು ಹೊಳೆಹೊನ್ನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನು ಓದಿ : ಬಾಲಿವುಡ್ ನಟಿ ಪೂನಂ ಪಾಂಡೆ ಮೇಲೆ ದಾಖಲಾಯ್ತು ಎಫ್.ಐ.ಆರ್.!

ಘರ್ಷಣೆಯಲ್ಲಿ ಮುಸ್ಲಿಂ ಯುವಕರಿಂದ ಮಹಿಳೆಯರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ. ಹೀಗಾಗಿ ಮಹಿಳೆಯರು ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img