ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಎಲ್ಲರನ್ನು ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ಪತ್ನಿ ಮೇಲೆ ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿದ ಪತಿ (Husband), ಈ ದಿನದ ಬೆಳಗ್ಗೆ ಸಾರ್ವಜನಿಕರ ಎದುರಲ್ಲೇ ಆಕೆಯನ್ನು 11 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಸಂಕದಕಟ್ಟೆ ಬಸ್ ನಿಲ್ದಾಣದ ಬಳಿ ನಡೆದಿದೆ.
ಘಟನೆ ಹೇಗೆ ನಡೆದಿದೆ?
ಸೋಮವಾರ ಬೆಳಿಗ್ಗೆ ಸುಮಾರು 11.35ರ ಹೊತ್ತಿಗೆ, ಶಿರಾ ಮೂಲದ ರೇಖಾ ಎಂಬ ಮಹಿಳೆ ತನ್ನ 12 ವರ್ಷದ ಮಗಳೊಂದಿಗೆ ಬಸ್ ನಿಲ್ದಾಣದಲ್ಲಿ ನಿಂತಿದ್ದಳು. ಈ ವೇಳೆಯಲ್ಲಿ ಆಕೆಯ ಎರಡನೇ ಪತಿ (Husband) ಯಾಗಿರುವ ಲೋಕೇಶ್ ಅಲಿಯಾಸ್ ಲೋಹಿತಾಶ್ವ ಸ್ಥಳಕ್ಕೆ ಬಂದು ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿನ ಚಕಮಕಿಯ ಮಧ್ಯೆ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಸ್ಥಳೀಯರು ಹಾಗೂ ಪೊಲೀಸರು ತಕ್ಷಣವೇ ಗಾಯಾಳುವನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿದರೂ, ತೀವ್ರ ರಕ್ತಸ್ರಾವದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ರೇಖಾ ಸಾವನ್ನಪ್ಪಿದರು. ವೈದ್ಯರ ಪ್ರಕಾರ, ಆಕೆಯ ದೇಹದ ಮೇಲೆ ಒಟ್ಟು 11 ಚಾಕು ಇರಿತದ ಗುರುತುಗಳು ಕಂಡುಬಂದಿವೆ.
ರೇಖಾ – ಲೋಕೇಶ್ ಸಂಬಂಧ :
ಪೊಲೀಸ್ ತನಿಖೆಯ ಪ್ರಕಾರ, ರೇಖಾ ಈಗಾಗಲೇ ಒಮ್ಮೆ ಮದುವೆಯಾಗಿದ್ದು, ಇಬ್ಬರು ಮಕ್ಕಳ ತಾಯಿ. ಮೊದಲ ಪತಿಯಿಂದ ವಿಚ್ಛೇದನ ಪಡೆದ ನಂತರ, ಕೆಲವು ವರ್ಷಗಳಿಂದ ಲೋಕೇಶ್ ಜೊತೆ ಸಂಪರ್ಕದಲ್ಲಿದ್ದರು. ಇಬ್ಬರೂ ಕೆಲ ತಿಂಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಲೋಕೇಶ್ ಕೂಡ ತನ್ನ ಮೊದಲ ಹೆಂಡತಿಯನ್ನು ಬಿಟ್ಟು ರೇಖಾ ಜೊತೆ ಬದುಕುತ್ತಿದ್ದ.
ಬೆಂಗಳೂರಿಗೆ ಬಂದ ನಂತರ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಖಾ, ಲೋಕೇಶ್‌ಗೆ ಕೂಡ ಅದೇ ಕಂಪನಿಯಲ್ಲಿ ಡ್ರೈವರ್ ಕೆಲಸ ಒದಗಿಸಿದ್ದರು. ಆದರೆ, ರೇಖಾ ಮತ್ತೊಬ್ಬರೊಂದಿಗೆ ಸಂಬಂಧ ಬೆಳೆಸುತ್ತಿದ್ದಾಳೆ ಎಂಬ ಶಂಕೆಯಿಂದ ಪತಿ (Husband) ಲೋಕೇಶ್ ಕೋಪಗೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇದೇ ಕಾರಣದಿಂದ ಕೊಲೆ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಆರೋಪಿ ಪತಿ (Husband) ಯ ಶೋಧ :
ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಸ್ತುತ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಾಗಿ ಬೇಟೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
👉 ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಸಾರ್ವಜನಿಕ ಸ್ಥಳದಲ್ಲೇ ನಡೆದ ಹಿಂಸಾಚಾರ ಜನರಲ್ಲಿ ಭಯವನ್ನುಂಟುಮಾಡಿದೆ.
8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಮಧ್ಯಪ್ರದೇಶದ ಭೋಪಾಲದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ಪ್ರೀತಿಸಿ ಬಳಿಕ ಕುಟುಂಬಸ್ಥರ ಅನುಮತಿಯೊಂದಿಗೆ ಮದುವೆಯಾಗಿದ್ದ ಯುವ ದಂಪತಿ (Couple), ಮದುವೆಯಾಗಿ ಕೇವಲ ಎಂಟು ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಗಂಡ–ಹೆಂಡತಿಯ ನಡುವಿನ ಕಲಹಕ್ಕೆ ಕಾರಣ ಅತ್ತೆ–ಮಾವ ಅಲ್ಲ, ಬದಲಿಗೆ ಇವರ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಮತ್ತು ಅಕ್ವೇರಿಯಂ ಮೀನು.
Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”
ಹೇಗೆ ಶುರುವಾಯಿತು ಕಲಹ?
ಮದುವೆಯಾದ ಬಳಿಕ ಆರಂಭದಲ್ಲಿ ಎಲ್ಲವೂ ಚನ್ನಾಗಿಯೆ ಸಾಗಿತ್ತು. ಗಂಡನು ಮದುವೆಗೂ ಮುಂಚೆ ನಾಯಿ, ಮೊಲ ಮತ್ತು ಅಕ್ವೇರಿಯಂ ಮೀನುಗಳನ್ನು ಸಾಕುತ್ತಿದ್ದ. ಇತ್ತ ಹೆಂಡತಿ ತನ್ನ ಉತ್ತರ ಪ್ರದೇಶದ ಮನೆಯಲ್ಲಿ ಬೆಕ್ಕನ್ನು ಸಾಕಿಕೊಂಡಿದ್ದಳು.
ಮದುವೆಯಾದ ಬಳಿಕ ಹೆಂಡತಿ ತನ್ನ ಬೆಕ್ಕನ್ನು ಗಂಡನ ಮನೆಗೆ ಕರೆದುಕೊಂಡು ಬಂದಳು. ಇಬ್ಬರೂ ಪ್ರಾಣಿಪ್ರೇಮಿಗಳಾಗಿದ್ದರಿಂದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಸಾಗಿತ್ತು. ಆದರೆ ದಿನಗಳು ಕಳೆಯುತ್ತಿದ್ದಂತೆ ಸಮಸ್ಯೆಗಳು ಶುರುವಾಯಿತು.
Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.
ಪತ್ನಿಯ ಹೇಳಿಕೆಯ ಪ್ರಕಾರ, ಗಂಡನ ನಾಯಿ ತನ್ನ ಸಾಕಿದ ಬೆಕ್ಕನ್ನು ನಿರಂತರವಾಗಿ ಹೆದರಿಸುತ್ತಿದೆ, ಬೊಗಳುತ್ತದೆ ಮತ್ತು ಕೆಲವೊಮ್ಮೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ಇದರಿಂದ ಬೆಕ್ಕು ಆಹಾರ ತಿನ್ನಲು ಹೆದರಿಕೊಳ್ಳುತ್ತಿದೆ. ಇದು ನನಗೆ ಮಾನಸಿಕ ಹಿಂಸೆಯಾಗಿದೆ ಎಂದು ಪತ್ನಿ ಆರೋಪಿಸಿದ್ದಾಳೆ.
ಇತ್ತ ಗಂಡ (Husband) ನ ವಾದವೇನೆಂದರೆ, ಪತ್ನಿಯ ಬೆಕ್ಕು ಸದಾ ಅಕ್ವೇರಿಯಂ ಬಳಿ ಕಾದು ಕುಳಿತು ಮೀನು ಹಿಡಿಯಲು ಪ್ರಯತ್ನಿಸುತ್ತದೆ. ಜೊತೆಗೆ ನಾಯಿ ಮೇಲೆಯೂ ದಾಳಿ ಮಾಡಲು ಮುಂದಾಗುತ್ತದೆ. ಹೀಗಾಗಿ ಮನೆತನದಲ್ಲಿ ಪ್ರತಿದಿನ ಕಲಹ, ಅಶಾಂತಿ ನಡೆಯುತ್ತಿದೆ ಎಂದು ಆತ ತಿಳಿಸಿದ್ದಾನೆ.
Warts : ಹೀಗೆ ಮಾಡಿದ್ರೆ ದೇಹದ ಮೇಲಿರುವ ನರುಳ್ಳೆ ಸುಲಭವಾಗಿ ಉದುರಿಹೋಗುತ್ತವೆ.!
ದಂಪತಿ (Couple) ಗಳು ಡಿವೋರ್ಸ್‌ಗೆ ಮೊರೆ :
ಪ್ರಾಣಿಗಳ ಕಾರಣದಿಂದ ದಿನದಿಂದ ದಿನಕ್ಕೆ ಕಲಹ ತೀವ್ರಗೊಂಡ ಹಿನ್ನೆಲೆಯಲ್ಲಿ, ಇಬ್ಬರೂ ದಂಪತಿ (Couple) ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಮದುವೆಯಾಗಿ ಕೇವಲ ಎಂಟು ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿರುವುದರಿಂದ, ನ್ಯಾಯಾಧೀಶರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ದಂಪತಿ (Couple) ಗಳಿಗೆ ಕೌನ್ಸಿಲಿಂಗ್ ಸೂಚನೆ :
ನ್ಯಾಯಾಧೀಶರು ಪ್ರಕರಣವನ್ನು ಆಲಿಸಿ, “ಮದುವೆಗೆ ಕೇವಲ ಎಂಟು ತಿಂಗಳು ಕಳೆದಿದೆ, ಇಂತಹ ಸಮಸ್ಯೆಗಳಿಗೆ ವಿಚ್ಛೇದನವೇ ಪರಿಹಾರವಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ದಂಪತಿ (Couple) ಗೆ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಮುಂದಿನ ವಿಚಾರಣೆ ಅಕ್ಟೋಬರ್‌ನಲ್ಲಿ ನಡೆಯಲಿದೆ.
Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!
ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದ್ದು, ಸಾಕು ಪ್ರಾಣಿಗಳ ಕಾರಣದಿಂದಲೂ ಗಂಡ–ಹೆಂಡತಿ ನಡುವಿನ ಕಲಹ ವಿಚ್ಛೇದನದ ಹಂತಕ್ಕೇರಬಹುದು ಎಂಬುದನ್ನು ಸಾಬೀತುಪಡಿಸಿದೆ.