ಜನಸ್ಪಂದನ ನ್ಯೂಸ್, ರಂಗಾರೆಡ್ಡಿ : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಸಮೀಪದ ಮಿರ್ಜಗುಡ ಪ್ರದೇಶದಲ್ಲಿ ಸೋಮವಾರ (ನ.03) ನಡೆದ ಭೀಕರ ರಸ್ತೆ ಅಪಘಾತ (Accident) ದಲ್ಲಿ ಕನಿಷ್ಠ 20 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ತಂದೂರ್ ಡಿಪೋಗೆ ಸೇರಿದ ಸರ್ಕಾರಿ ಬಸ್ ಒಂದು ಚೆವೆಲ್ಲಾ ಕಡೆಗೆ ತೆರಳುತ್ತಿದ್ದ ವೇಳೆ ಜಲ್ಲಿ ಕಲ್ಲು ತುಂಬಿದ್ದ ಟ್ರಕ್ ವಿರುದ್ಧ ದಿಕ್ಕಿನಿಂದ ಬಂದು ಬಸ್‌ಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ (Accident) ಸಂಭವಿಸಿದೆ.
Kannada ರಾಜ್ಯೋತ್ಸವ ಸಂಭ್ರಮದ ನಡುವೆ ಮಂಗನ ಚೆಲ್ಲಾಟ ; ನೆರೆದಿದ್ದ ಜನರಿಗೆ ಪ್ರಾಣಭೀತಿ ; ವಿಡಿಯೋ ವೈರಲ್.!
ಅಪಘಾತ (Accident) ದ ತೀವ್ರತೆಯಿಂದ ಬಸ್‌ನ ಮುಂಭಾಗ ಸಂಪೂರ್ಣ ನಾಶವಾಗಿದ್ದು, ಪ್ರಯಾಣಿಕರಲ್ಲಿ 1 ವರ್ಷದ ಮಗು ಸೇರಿದಂತೆ 11 ಮಹಿಳೆಯರು ಮತ್ತು 9 ಪುರುಷರು ಮೃತಪಟ್ಟಿದ್ದಾರೆ. ಸುಮಾರು 24 ಮಂದಿ ಗಾಯಗೊಂಡಿದ್ದು, ಇವರಲ್ಲಿ ಐದು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.
ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಅಪಘಾತಕ್ಕೀಡಾದ (Accident) ಬಸ್‌ನಲ್ಲಿ ಸುಮಾರು 70 ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಹಲವರು ಟ್ರಕ್‌ನ ಜಲ್ಲಿಕಲ್ಲು ಬಸ್ ಒಳಗೆ ಬಿದ್ದ ಪರಿಣಾಮ ಅದರಡಿಗೆ ಸಿಲುಕಿಕೊಂಡಿದ್ದರು.
Belagavi ಯಲ್ಲಿ ರಾಜ್ಯೋತ್ಸವದ ಮೆರವಣಿಗೆ ವೇಳೆ 6 ಮಂದಿಗೆ ಚಾಕು ಇರಿತ : ಆಸ್ಪತ್ರೆಗೆ ದಾಖಲು.!
ಸ್ಥಳೀಯರು ಕೂಡ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಟ್ರಕ್ ಚಾಲಕ ಅತಿ ವೇಗದಲ್ಲಿ ಚಾಲನೆ ಮಾಡುತ್ತಿದ್ದಾಗ ಮತ್ತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ತಪ್ಪು ದಿಕ್ಕಿನಿಂದ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂಬ ಮಾಹಿತಿ ದೊರಕಿದೆ. ಡಿಕ್ಕಿಯ ತೀವ್ರತೆಯಿಂದ ಟ್ರಕ್ ಪಲ್ಟಿಯಾಗಿದ್ದು, ಅದರಲ್ಲಿದ್ದ ಜಲ್ಲಿಕಲ್ಲು ಬಸ್‌ನೊಳಗೆ ಬಿದ್ದಿದೆ.
“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“
ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಕೆಲವರು ವಿದ್ಯಾರ್ಥಿಗಳಾಗಿದ್ದು, ವಾರಾಂತ್ಯದ ಬಳಿಕ ಕಾಲೇಜುಗಳಿಗೆ ಹಿಂತಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ನಂತರ ಹೈದರಾಬಾದ್–ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟಣೆ ಉಂಟಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತ (Accident) ದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ. ಸ್ಥಳೀಯರು ಇಂತಹ ದುರ್ಘಟನೆಗಳನ್ನು ತಡೆಗಟ್ಟಲು ಭಾರಿ ವಾಹನಗಳ ನಿಯಂತ್ರಣ ಹಾಗೂ ವೇಗ ನಿಯಮಗಳ ಕಟ್ಟುನಿಟ್ಟಾದ ಜಾರಿಗೆ ಒತ್ತಾಯಿಸಿದ್ದಾರೆ.
ವಿಡಿಯೋ :
Horrific Road Accident in Ranga Reddy District! A truck driving on the wrong side collided head-on with a TGRTC bus near Khanapur Gate, Chevella mandal, injuring several passengers. Transport Minister Ponnam Prabhakar expressed shock, ordered immediate relief, and directed… pic.twitter.com/pLwRgj0pcJ
— Ashish (@KP_Aashish) November 3, 2025
“ಯುವತಿಯನ್ನು ಕೂರಿಸಿಕೊಂಡು ಅಪಾಯಕಾರಿ Bike ವ್ಹೀಲಿಂಗ್ ; ಮುಂದೆನಾಯ್ತು? ವಿಡಿಯೋ ನೋಡಿ.!”

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯಾಗುವ ಹುಚ್ಚು ಕೆಲವರನ್ನು ಅಪಾಯಕಾರಿ ಮಟ್ಟದ ಕ್ರಮಗಳತ್ತ ಎಳೆದುಕೊಂಡು ಹೋಗುತ್ತಿದೆ. ಕೆಲವು ಸೆಕೆಂಡ್‌ಗಳ “ವೈರಲ್ ವಿಡಿಯೋ”ಗಾಗಿ ಜೀವವನ್ನೇ ಪಣಕ್ಕಿಡುವ ಘಟನೆಗಳು ಹೆಚ್ಚಾಗುತ್ತಿವೆ.
ಇತ್ತೀಚಿನ ಘಟನೆಯಲ್ಲಿ ಯುವಕನೊಬ್ಬ ತನ್ನ ಸ್ನೇಹಿತೆಯೊಂದಿಗೆ ಅಪಾಯಕಾರಿ ರೀತಿಯಲ್ಲಿ “ಬೈಕ್ ವ್ಹೀಲಿಂಗ್ (Bike Wheeling)” ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ, ಬೈಕ್ (Bike) ಸವಾರನೊಬ್ಬ ರಸ್ತೆಯ ಮಧ್ಯೆ ತನ್ನ ವಾಹನವನ್ನು ವೇಗವಾಗಿ ಚಲಾಯಿಸುತ್ತಿದ್ದಾನೆ. ಆತನ ಹಿಂದೆ ಯುವತಿಯೊಬ್ಬಳು ಕುಳಿತಿದ್ದಾಳೆ. ಕೆಲ ಕ್ಷಣಗಳ ಬಳಿಕ ಸವಾರನು ಸ್ಟಂಟ್ ಮಾಡಲು ಯತ್ನಿಸುತ್ತಾನೆ.
ಬೈಕ್‌ನ ಮುಂಭಾಗದ ಚಕ್ರವನ್ನು ನೆಲದಿಂದ ಎತ್ತಿ, ಕೇವಲ ಹಿಂಬದಿ ಚಕ್ರದ ಮೇಲೆ ಚಲಾಯಿಸಲು ಆರಂಭಿಸುತ್ತಾನೆ. ಯುವತಿಯು ಸಹ ಖುಷಿಯಿಂದ ಆತನ ಕೃತ್ಯಕ್ಕೆ ಸಹಕರಿಸುತ್ತಾ ಕೈಯನ್ನು ಮೇಲಕ್ಕೆತ್ತುತ್ತಾಳೆ, ಆದರೆ ಕ್ಷಣಾರ್ಧದಲ್ಲೇ ಪರಿಸ್ಥಿತಿ ಬದಲಾಗುತ್ತದೆ.
ಸಮತೋಲನ ಕಳೆದುಕೊಂಡ ಬೈಕ್ (Bike) ಇಬ್ಬರನ್ನೂ ಬಿಸಾಡಿ ಬಿಡುತ್ತದೆ. ಯುವಕ ಮತ್ತು ಯುವತಿ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅವರ ಹಿಂದೆ ಬರುತ್ತಿದ್ದ ಮತ್ತೊಂದು ಬೈಕ್‌ಗೂ (Bike) ಡಿಕ್ಕಿ ಸಂಭವಿಸಿದೆ. ಈ ದೃಶ್ಯ ನೋಡಿ ನೆಟ್ಟಿಗರು ಆಘಾತಗೊಂಡಿದ್ದಾರೆ.
ಈ ವಿಡಿಯೋ ಈಗ ಎಕ್ಸ್ (ಹಳೆಯ ಟ್ವಿಟರ್) ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಿಯುತ್ತಿದೆ. “ಈ ರೀತಿಯ ಮೂರ್ಖತನಕ್ಕೆ ಯಾವುದೇ ಪುರಾವೆ ಬೇಕಿಲ್ಲ” ಎಂಬ ಶೀರ್ಷಿಕೆಯಲ್ಲಿ ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿ ನೆಟ್ಟಿಗರು ತೀವ್ರ ಕೋಪ ವ್ಯಕ್ತಪಡಿಸಿದ್ದಾರೆ,
- “ಜನರ ಜೀವವನ್ನು ಪಣಕ್ಕಿಟ್ಟು ಕೆಲವು ಕ್ಷಣಗಳ ಖ್ಯಾತಿಗಾಗಿ ಇಂತಹ ಸ್ಟಂಟ್ ಮಾಡುವುದು ನಿಷೇಧಿಸಬೇಕು”,
- “ಪೊಲೀಸರು ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಕಾಮೆಂಟ್‌ಗಳ ಸುರಿಮಳೆ ಹರಿದಿದೆ.
ಈ ಘಟನೆ ಮತ್ತೊಮ್ಮೆ ರಸ್ತೆ ಸುರಕ್ಷತೆ ಮತ್ತು ಸಾಮಾಜಿಕ ಮಾಧ್ಯಮದ ‘ವೈರಲ್ ಸಂಸ್ಕೃತಿ’ ಕುರಿತಂತೆ ಗಂಭೀರ ಚಿಂತನೆಗೆ ಕಾರಣವಾಗಿದೆ. ಖ್ಯಾತಿಗಾಗಿ ಜೀವದ ಬೆಲೆಯಾಟ ಆಡುತ್ತಿರುವ ಯುವ ಜನತೆ ಇಂತಹ ಘಟನೆಗಳಿಂದ ಪಾಠ ಕಲಿಯಬೇಕೆಂಬ ಅಭಿಪ್ರಾಯ ಜನರಲ್ಲಿ ವ್ಯಕ್ತವಾಗಿದೆ.
ಬೈಕ್ (Bike) ವ್ಹೀಲಿಂಗ್ ವಿಡಿಯೋ :
https://twitter.com/i/status/1984268448172736616







