Friday, September 20, 2024
spot_img
spot_img
spot_img
spot_img
spot_img
spot_img
spot_img

ಪೇಪರ್ ಆಧಾರಿತ ಆಸ್ತಿ ನೋಂದಣಿ ವ್ಯವಸ್ಥೆ ರದ್ದು ; e-ಆಸ್ತಿ ನೋಂದಣಿ ಕಡ್ಡಾಯ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಸರ್ಕಾರಿ ಸೌಲಭ್ಯ : ಇಲ್ಲಿಯವರೆಗೆ ಯಾವುದೇ ಆಸ್ತಿ ನೋಂದಣಿ ಮಾಡಿಸಲು ದಾಖಲೆಗಳನ್ನು ಪೇಪರ್ ಮೂಲಕ ಸಲ್ಲಿಸಬೇಕಾಗಿತ್ತು ಆದರೆ ಈಗ ಭಾರತದಲ್ಲಿ ಪೇಪರ್ ಆಧಾರಿತ ಆಸ್ತಿ ನೋಂದಣಿ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ.

ಅಂದರೇ, ಕಡ್ಡಾಯವಾಗಿ ಎಲ್ಲಾ ಆಸ್ತಿ ನೋಂದಣಿಗಳನ್ನು ಈಗ ಡಿಜಿಟಲ್ ವೇದಿಕೆಯಲ್ಲಿ (ಇ-ನೋಂದಣಿ) ಮಾಡಬೇಕಾಗಿದೆ. ಪೇಪರ್’ನಲ್ಲಿ ನೋಂದಣಿ ಮಾಡುವ ಕಾರ್ಯದಿಂದ ಸರ್ಕಾರಕ್ಕೆ ಹೆಚ್ಚು ನಷ್ಟ ಆಗುತ್ತಿದೆ. ಈ ಹೊಸ ನಿಯಮವು ವಿಧಾಸಭೆಯಲ್ಲಿ ಅಂಗೀಕಾರವಾಗಿದೆ. ಇನ್ನು ಮುಂದೆ ನಿಮ್ಮ ಚರಾಸ್ಥಿಯ ನೋಂದಣಿ ಕಡ್ಡಾಯವಾಗಿ “ಇ- ನೋಂದಣಿ” ವೇದಿಕೆಯಲ್ಲಿ ಮಾಡಿಸಬೇಕು.

ರಾಜಕೀಯ ಪಕ್ಷಕ್ಕೂ ಮಾನ ಇದೆ ಎಂದ High-court ; ಏನಿದು ಕೇಸ್.?

ಏನಿದು ಇ–ನೋಂದಣಿ ಪ್ರಕ್ರಿಯೆ.? :

ಎಲ್ಲಾ ಕ್ಷೇತ್ರದಲ್ಲಿ ಈಗ ಡಿಜಿಟಲ್ ವ್ಯವಸ್ಥೆ ಬಂದಿದೆ. ಇದು ಡಿಜಿಟಲ್ ವ್ಯವಸ್ಥೆಗೆ ಹೊಸ ಸೇರ್ಪಡೆ ಆಗಿದೆ. ಮನೆ, ಭೂಮಿ ಅಥವಾ ಇತರ ಆಸ್ತಿಗಳ ನೋಂದಣಿಯನ್ನು ಡಿಜಿಟಲ್ ವೇದಿಕೆಯಲ್ಲಿ ಮಾಡುವ ಒಂದು ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯು ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಕಾವೇರಿ ತಂತ್ರಾಂಶದಲ್ಲಿ ಅಟೋಮ್ಯಾಟಿಕ್ ಆಗಿ ನಗರ ಸಭೆ ವ್ಯಾಪ್ತಿಯ ಡೇಟಾ ಬೇಸ್ ಚೆಕ್‌ ಆಗಿದ್ದರೆ ಮಾತ್ರ ಇ – ನೋಂದಣಿ ಯಲ್ಲಿ ನಿಮ್ಮ ಆಸ್ತಿ ನೋಂದಣಿ ಆಗಲಿದೆ.

ಈ ಯೋಜನೆಯ ಉದ್ದೇಶಗಳು ಏನು.?

ವ್ಯವಸ್ಥೆಯಲ್ಲಿ ಇರುವ ಭ್ರಷ್ಟಾಚಾರ ಮತ್ತು ವಂಚನೆಯನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಹೊಸ ಕಾಯಿದೆಯನ್ನು ತರಲಾಗಿದೆ. ಹಾಗೂ ಇ-ನೋಂದಣಿ ಪ್ರಕ್ರಿಯೆಯು ಹೆಚ್ಚು ಪಾರದರ್ಶಕ ಮತ್ತು ದಕ್ಷವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಪೇಪರ್ ಮೂಲಕ ನೋಂದಣಿ ಆಗಿರುವ ಪ್ರತಿಯನ್ನು ಕಳೆದುಕೊಳ್ಳುವ ಸಂಭವ ಇತ್ತು. ಈಗ ಇ-ನೋಂದಣಿ ದಾಖಲೆ ಮಾಡುವುದರಿಂದ ಕಳೆದುಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಪೇಪರ್ ನೋಂದಣಿ ಮಾಡಿಸುವ ಸಲುವಾಗಿ ನಾಗರಿಕರು ಹತ್ತಾರು ಬಾರಿ ಇಲಾಖೆಗಳಿಗೆ ಹೋಗಿ ನೋಂದಣಿ ಬೇಕಿತ್ತು ಅದನ್ನು ತಪ್ಪಿಸಿ ನಾಗರಿಕರಿಗೆ ಸುಲಭವಾಗಿ ನೋಂದಣಿ ಪ್ರಕ್ರಿಯೆ ಆಗಲಿ ಎಂಬ ಉದ್ದೇಶದಿಂದ ಈ ಯೋಜನೆ ಜಾರಿ ಆಗಿದೆ.

ಬಸ್ಸಿನಲ್ಲಿಯೇ ವಿದ್ಯಾರ್ಥಿನಿಗೆ ಲೈಂ*ಗಿಕ ದೌ*ರ್ಜನ್ಯವೆಸಗಿದ ಕಂಡಕ್ಟರ್‌ನಿಗೆ ಕೋರ್ಟ್ ನೀಡಿದ ಶಿಕ್ಷೆಯೇನು ಗೊತ್ತಾ.?

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ.? :

ಆಸ್ತಿ ನೋಂದಣಿಗಾಗಿ ಈಗ ಆನ್‌ಲೈನ್‌ನಲ್ಲಿ ಸುಲಭವಾಗಿ ಮಾಡಬಹುದು. ನೀವು ಇ ನೋಂದಣಿ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಆಸ್ತಿಯ ವಿವರ ಮತ್ತು ಮೂಲ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು. ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ನಂತರ, ನೋಂದಣಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು. ನಿಮಗೆ ಅನುಕೂಲಕರವಾದ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಇದೆ. ನೀವು ಆಯ್ಕೆ ಮಾಡಿದ ದಿನಾಂಕದಂದು ನೀವು ಉಪನೋಂದಾಣಿ ಕಚೇರಿಗೆ ಭೇಟಿ ನೀಡಿ, ನಿಮ್ಮ ಭಾವಚಿತ್ರ, ಸಹಿ ಮತ್ತು ಹೆಬ್ಬೆಟ್ಟಿನ ಗುರುತನ್ನು ನೀಡಿದ ಕೆಲವೇ ನಿಮಿಷಗಳಲ್ಲಿ ನಿಮ್ಮ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ವ್ಯವಸ್ಥೆಯಲ್ಲಿ ಇನ್ನಷ್ಟು ಪಾರದರ್ಶಕತೆ ಕಾಯ್ದುಕೊಳ್ಳಲು ಡಿಡಿ ವ್ಯವಸ್ಥೆ ತೆಗೆದುಹಾಕಿ ಡಿಜಿಟಲ್ ಪಾವತಿ ವ್ಯವಸ್ಥೆ ಅನುಷ್ಠಾನ ಮಾಡಲಾಗಿದೆ. ಇದರಿಂದ ಸೋರಿಕೆ ತಡೆಗಟ್ಟಲು ಹೆಚ್ಚು ಅನುಕೂಲವಾಗಲಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತಿನ ದಿನಾಂಕ ಪ್ರಕಟ.!

ಈ ವ್ಯವಸ್ಥೆಯಿಂದ ಕೆಲವು ಜನರಿಗೆ ತೊಂದರೆಯೂ ಆಗಬಹುದು :

  • ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಅಥವಾ ತಂತ್ರಜ್ಞಾನವಿಲ್ಲದ ಜನರಿಗೆ ಇ-ಆಸ್ತಿ ವ್ಯವಸ್ಥೆ ಮಾಡಲು ಕಷ್ಟವಾಗಬಹುದು.
  • ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು ಅಥವಾ ಇಂಟರ್ನೆಟ್‌ಗೆ ಸೌಲಭ್ಯ ಇಲ್ಲದೆ ಇರುವವರಿಗೆ ಇದು ಕಷ್ಟ ಆಗುತ್ತದೆ.
  • ಕೆಲವು ಅಧಿಕಾರಿಗಳು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಜನರಿಂದ ಹಣವನ್ನು ವಸೂಲಿ ಮಾಡಬಹುದು.
  • ಸೈಬರ್ ಸೆಂಟರ್’ಗಳು ಜನರ ವೈಯಕ್ತಿಕ ಮಾಹಿತಿಯನ್ನು ವ್ಯವಸ್ಥೆಯಲ್ಲಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
  • ಈ ಮಾಹಿತಿಯನ್ನು ಕದಿಯಬಹುದು ಅಥವಾ ಕಾನೂನುಬಾಹಿರ ಉದ್ದೇಶಗಳಿಗಾಗಿ ಬಳಸಬಹುದು.
WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img