Friday, July 12, 2024
spot_img
spot_img
spot_img
spot_img
spot_img
spot_img

ನಿಂತಿದ್ದ ವಾಹನಕ್ಕೆ ಕುರಿ ತುಂಬಿದ ವಾಹನ ಡಿ*ಕ್ಕಿ ; 25 ಕುರಿಗಳು ಸಹಿತ ಮೂವರ ಸಾ*ವು.!

spot_img

ಜನಸ್ಪಂದನ ನ್ಯೂಸ್, ಹಾವೇರಿ : ಜಿಲ್ಲೆಯ ಸವಣೂರು ತಾಲ್ಲೂಕಿನ ತೆವರಮೆಳ್ಳಳ್ಳಿ ಗ್ರಾಮದ ಶಿಮ್ಲಾ ಡಾಬಾ ಬಳಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ (National highway) ಯಲ್ಲಿ ಕುರಿಗಳನ್ನು ತುಂಬಿದ್ದ ವಾಹನ ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟು, 10ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿರುವ ಘಟನೆ ನಡೆದಿದೆ.

ಬೆಳಗಾವಿಯಿಂದ ಕಾಕೋಳ ಗ್ರಾಮಕ್ಕೆ ಬರುವಾಗ ಮಾರ್ಗ ಮಧ್ಯ ಈ ದುರಂತ ಸಂಭವಿಸಿದೆ.

ಅಯ್ಯಯ್ಯೋ ಸನ್ನಿ ಲಿಯೋನ್ ಮೇಲೆ ಬಿತ್ತು ಹಾವು ; ಮುಂದೆನಾಯ್ತು.? Video ನೋಡಿ.!

ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ಕುರಿ ವ್ಯಾಪಾರಿಗಳಾದ ಮೈಲಾರಪ್ಪ ಕೈದಾಳ (40), ಗುಡ್ಡಪ್ಪ ಕೈದಾಳ (42) ಹಾಗೂ ಚಾಲಕ ಶಿವಕುಮಾರ ಹೊಳೆಪ್ಪನವರ (22) ಮೃತ ದುರ್ದೈವಿಗಳು.

ಉಳಿದ ನಾಲ್ವರ ಕೈಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಅದರಲ್ಲಿ ಬೀರಪ್ಪ ನಿಂಗರಾಜ್ ಹಿತ್ತಲಮನಿ ನಿಂಗಪ್ಪ ಕೊರಗುಂದ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ದಾವಣಗೆರೆ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಅಪಘಾತವು ಬಂಕಾಪುರ ಟೋಲ್ ಬಳಿ ನಡೆದಿದ್ದು, ಈ ದುರ್ಘಟನೆಯಲ್ಲಿ ಮೂವರು ವ್ಯಕ್ತಿಗಳು ಸೇರಿದಂತೆ 20 ಕುರಿಗಳು ಸಾವನನಪ್ಪಿವೆ.

ಅಪರೂಪದ ಘಟನೆ : ಒಂದನೇ ಮಗು ಹುಟ್ಟಿದ 22 ದಿನದ ನಂತರ 2ನೇ ಮಗುವಿಗೆ ಜನ್ಮ ನೀಡಿದ ತಾಯಿ.!

ಕುರಿ ತುಂಬಿಕೊಂಡು ಹೋಗುತ್ತಿದ್ದ ವಾಹನ ರಸ್ತೆ ಬದಿಯಲ್ಲಿ ನಿಂತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

spot_img
spot_img
- Advertisment -spot_img