Thursday, April 25, 2024
spot_img
spot_img
spot_img
spot_img
spot_img
spot_img

ಟೀ ಜೊತೆ ಬಿಸ್ಕತ್ತು ತಿಂತೀರಾ.? ಈ ರೋಗ ಬರಬಹುದು ಇರಲಿ ಎಚ್ಚರ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಈ ಪ್ರಪಂಚದಲ್ಲಿ ಬಹಳಷ್ಟು ಮಂದಿಯ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ (tea & coffee). ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್​ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ.

ಒಂದು ಹೊತ್ತು ಊಟ (one time lunch) ಬೇಕಾದರೂ ಬಿಡುವೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಇದ್ದಾರೆ.

ಇದನ್ನು ಓದಿ : ಅಪರೂಪದ ಘಟನೆ : ಒಂದನೇ ಮಗು ಹುಟ್ಟಿದ 22 ದಿನದ ನಂತರ 2ನೇ ಮಗುವಿಗೆ ಜನ್ಮ ನೀಡಿದ ತಾಯಿ.!

ಇನ್ನೂ ಅಧಿಕ ತೂಕ (overweight) ಹೊಂದಿದ್ದು, ತೂಕ ಇಳಿಸಲು ಪ್ರಯತ್ನ ಮಾಡುತ್ತಿದ್ದು, ಬೆಳಗ್ಗೆ ಚಹಾ ಕುಡಿಯುವ ರೂಢಿ ಹೊಂದಿದ್ದರೆ ಇದು ಅನಾರೋಗ್ಯಕರ ಆಯ್ಕೆ ಆಗಿದೆ. ಯಾಕಂದ್ರೆ ದಿನದ ಆರಂಭವನ್ನು ಆರೋಗ್ಯಕರ ಪಾನೀಯದ ಜೊತೆ ಆರಂಭಿಸಿ. ಕೆಫೀನ್ ಮತ್ತು ಸಕ್ಕರೆ ಚಹಾದ ಜೊತೆ ದಿನದ ಆರಂಭವು ಸಾಕಷ್ಟು ತೊಂದರೆ ಉಂಟು ಮಾಡುತ್ತದೆ.

ಇನ್ನು ಟೀ ಜತೆ ಬಿಸ್ಕತ್ತು​ ಸೇವನೆ ಸಾಮಾನ್ಯವಾಗಿದೆ. ಆದರೆ, ಈ ಕಾಂಬಿನೇಷನ್​ (combination) ಹಿಂದಿರುವ ಅಪಾಯ ಮಾತ್ರ ಯಾರಿಗೂ ತಿಳಿದಿಲ್ಲ. ಕೆಲವರು ಇದನ್ನು ಅಭ್ಯಾಸವಾಗಿ ಮಾಡುತ್ತಿದ್ದಾರೆ. ಆದರೆ ಪ್ರತಿದಿನ ಚಹಾದೊಂದಿಗೆ ಬಿಸ್ಕತ್ತುಗಳನ್ನು (biscuits) ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಪ್ರತಿನಿತ್ಯ ಸಕ್ಕರೆ ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ದೇಹವು ಹೆಚ್ಚು ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ. ಕಾಲಾನಂತರದಲ್ಲಿ ಇದು ಟೈಪ್ 2 ಮಧುಮೇಹಕ್ಕೆ (diabetes) ಕಾರಣವಾಗಬಹುದು.

ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ತ್ವರಿತ ಏರಿಕೆಯಲ್ಲಿ ಬಿಸ್ಕತ್ತುಗಳು ಪ್ರಮುಖ ಪಾತ್ರವಹಿಸುತ್ತವೆ. ಇದನ್ನು ತಪ್ಪಿಸಲು, ಧಾನ್ಯಗಳೊಂದಿಗೆ ಸಕ್ಕರೆ ಮುಕ್ತ (sugar free) ಬಿಸ್ಕತ್ತುಗಳನ್ನು ತಿನ್ನಿರಿ ಮತ್ತು ನೀವು ಹಸಿದಿರುವಾಗ ಬಿಸ್ಕತ್ ಬದಲಿಗೆ ಪ್ರೋಟೀನ್​ ಭರಿತ ತಿಂಡಿಯನ್ನು ತಿನ್ನಿರಿ.

ಇದನ್ನು ಓದಿ : ಅತ್ಯಂತ ಕೊಳಕು ಪ್ರದೇಶದಲ್ಲಿ ತಯಾರಾಗುತ್ತೆ ನಕಲಿ Coca-Cola ; ವಿಡಿಯೋ ವೈರಲ್.!.!

ಚಹಾ ಮತ್ತು ಬಿಸ್ಕತ್ತುಗಳಲ್ಲಿ ಸಕ್ಕರೆ ಇರುತ್ತದೆ. ಹಾಗಾಗಿ ಅವುಗಳನ್ನು ತಿಂದಾಗ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ. ಸಕ್ಕರೆ ಹೆಚ್ಚಿರುವ ಆಹಾರಗಳನ್ನು (high sugar foods) ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಕಾಲಾನಂತರದಲ್ಲಿ ಹೆಚ್ಚಾಗುತ್ತದೆ. ಅಧಿಕ ರಕ್ತದ ಗ್ಲೂಕೋಸ್ ಮಧುಮೇಹಕ್ಕೆ ಕಾರಣವಾಗಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
spot_img
- Advertisment -spot_img