Thursday, September 19, 2024
spot_img
spot_img
spot_img
spot_img
spot_img
spot_img
spot_img

Health : ಈರುಳ್ಳಿ ಸಿಪ್ಪೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವರು ತರಕಾರಿಯನ್ನು (Vegetables) ಬಳಸುವಾಗ ಅದರ ಪ್ರತಿಯೊಂದು ಭಾಗವನ್ನು ಬಳಸುತ್ತಾರೆ. ಯಾವುದೇ ಭಾಗವನ್ನು ವೇಸ್ಟ್ ಅಂತ ಎಸೆಯುವುದಿಲ್ಲ. ತಿರುಳು, ಸಸ್ಯಗಳ ಬೇರು, ಕಾಂಡ ಮತ್ತು ಎಲೆಗಳನ್ನು ಸಹ ಅಡುಗೆಯಲ್ಲಿ ಬಳಸುತ್ತಾರೆ.

ಸಾಮಾನ್ಯವಾಗಿ ಹೆಚ್ಚಿನವರು ಈರುಳ್ಳಿಯನ್ನು ಕತ್ತರಿಸಿದ ನಂತರ ಅದರ ಸಿಪ್ಪೆಯನ್ನು (peel) ಬಿಸಾಡುತ್ತಾರೆ. ಇಲ್ಲವಾದರೆ ಗಿಡಗಳಿಗೆ ಗೊಬ್ಬರಕ್ಕೆ ಬಳಸುತ್ತಾರೆ.

ಇದನ್ನು ಓದಿ : Health : ಒಣಗಿದ ನಿಂಬೆಹಣ್ಣನ್ನು ಎಸೆಯಬೇಡಿ ; ಅದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

* ಈರುಳ್ಳಿ ಸಿಪ್ಪೆಯಲ್ಲಿರುವ ಫ್ಲೇವನಾಯ್ಡ್‌ಗಳು ಹೃದಯದ ಅರೋಗ್ಯಕ್ಕೆ ಒಳ್ಳೆಯದು ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಲು (control) ಸಹಾಯ ಮಾಡುತ್ತದೆ. ಈರುಳ್ಳಿ ಸಿಪ್ಪೆಗಳು ಫ್ಲೇವನಾಯ್ಡ್‌ಗಳ ಸಮೃದ್ಧ ಮೂಲವಾಗಿದೆ.

* ಕೂದಲಿನ ಆರೋಗ್ಯವನ್ನು ಸುಧಾರಿಸಲು ಈರುಳ್ಳಿ ಸಿಪ್ಪೆಯನ್ನು ಸಹ ಬಳಸಬಹುದು. ಇದಕ್ಕಾಗಿ ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಸುಮಾರು ಒಂದು ಗಂಟೆಯ ನಂತರ ಈ ನೀರಿನಿಂದ ನಿಮ್ಮ ತಲೆಯನ್ನು ತೊಳೆಯಿರಿ. ಇದರಿಂದ ಕೂದಲು ಉದುರುವ (hair fall) ಸಮಸ್ಯೆ ದೂರವಾಗುತ್ತದೆ.

* ಈರುಳ್ಳಿ ಸಿಪ್ಪೆಯಲ್ಲಿ ವಿಟಮಿನ್ ಎ ಸಾಕಷ್ಟು ಕಂಡುಬರುತ್ತದೆ, ಇದು ದೃಷ್ಟಿ ಹೆಚ್ಚಿಸಲು ಕೆಲಸ ಮಾಡುತ್ತದೆ. ರಾತ್ರಿ ಕುರುಡುತನದಂತಹ ಕಾಯಿಲೆಗಳನ್ನು ತಡೆಯುತ್ತದೆ. ಇದಕ್ಕಾಗಿ ಈರುಳ್ಳಿ ಸಿಪ್ಪೆಯ ಟೀ ತಯಾರಿಸಿ ಕುಡಿಯಿರಿ, ಇದು ತ್ವಚೆಯ ವಿನ್ಯಾಸವನ್ನೂ ಸುಧಾರಿಸುತ್ತದೆ.

* ಈರುಳ್ಳಿ ಸಿಪ್ಪೆ ಹೃದ್ರೋಗಿಗಳಿಗೆ ವರದಾನವಾಗಿದೆ ಎಂದು ಸಾಬೀತುಪಡಿಸಬಹುದು (prove). ಇದಕ್ಕಾಗಿ, ಈರುಳ್ಳಿ ಸಿಪ್ಪೆಯನ್ನು ತೊಳೆದು ಬಾಣಲೆಯಲ್ಲಿ ಹಾಕಿ ಬಿಸಿ ನೀರಿನಲ್ಲಿ ಕುದಿಸಿ. ಇದರ ನಂತರ, ಅದನ್ನು ಫಿಲ್ಟರ್ ಮಾಡಿ ಮತ್ತು ಕುಡಿಯಿರಿ, ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

* ವಿಟಮಿನ್ ಸಿ ಸಹ ಈರುಳ್ಳಿ ಸಿಪ್ಪೆಯಲ್ಲಿ ಕಂಡುಬರುತ್ತದೆ. ಇದರ ಸಹಾಯದಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಇದು ವೈರಲ್ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಿಂದ ಕೆಮ್ಮು, ನೆಗಡಿ (Cough, cold) ಮುಂತಾದ ಸಮಸ್ಯೆಗಳು ಉದ್ಭವಿಸುವುದಿಲ್ಲ.

ಇದನ್ನು ಓದಿ : ಗೋಡಂಬಿ ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

Disclaimer : ಈ ಲೇಖನವು ಅಂತರ್ಜಾಲದಲ್ಲಿ (on the internet) ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img