Thursday, September 19, 2024
spot_img
spot_img
spot_img
spot_img
spot_img
spot_img
spot_img

Police ಇನ್ಸ್‌ಪೆಕ್ಟರ್ ಹಲ್ಲೆಯಿಂದ ವ್ಯಕ್ತಿ ಸಾವು ಆರೋಪ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಜಮೀನು ವ್ಯಾಜ್ಯ ಸಂಬಂಧ ವ್ಯಕ್ತಿಯ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.

ರಾಮಸ್ವಾಮಿ ಎಂಬ ವ್ಯಕ್ತಿಯನ್ನು ಕೋಣನಕುಂಟೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಪಾಪಣ್ಣ ಹಲ್ಲೆ ನಡೆಸಿದ್ದರು. ಮೃತ ರಾಮಸ್ವಾಮಿ ಪತ್ನಿ ಮುನಿಯಮ್ಮ ಅವರು ಗಂಭೀರ ಆರೋಪ ಮಾಡಿ ಕೇಸ್ ದಾಖಲಿಸಿದ್ದಾರೆ.

ಇದನ್ನು ಓದಿ : Health : ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬೇಕೆ.? ಹಾಗಿದ್ರೆ ಈ ಆಹಾರ ಪದಾರ್ಥಗಳನ್ನು ಸೇವಿಸಿ.!

ಕೊತ್ತನೂರಿನಲ್ಲಿ ರಾಮಸ್ವಾಮಿ‌ ಮತ್ತು ನಿರ್ಮಿತ ಕೇಂದ್ರದ ನಡುವೆ ಜಮೀನು ವ್ಯಾಜ್ಯ ಇದೆ. 2 ತಿಂಗಳ ಹಿಂದೆ ಈ‌ ಜಮೀನಿನಲ್ಲಿ ನೀಲಗಿರಿ ಮರ ತೆರವು ಮಾಡಲು ನಿರ್ಮಿತಿ‌ ಕೇಂದ್ರದ ಸಿಬ್ಬಂದಿ ಪೊಲೀಸರ ಭದ್ರತೆ ಜೊತೆಗೆ ಮರ ತೆರವು ಮಾಡಲು ಹೋಗಿದ್ದರು.

ಈ ವೇಳೆ ಜಮೀನು‌ ನಮ್ಮದು ಎಂದು ರಾಮಸ್ವಾಮಿ ಕುಟುಂಬ ಅಡ್ಡಿಪಡಿಸಿತ್ತು. ಆದರೆ ಇದೇ ಜಗಳ‌ದ ಮಧ್ಯೆ ಪೊಲೀಸರು ರಾಮಸ್ವಾಮಿ‌ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನು ಓದಿ : ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ Upload ಮಾಡ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.

ಬಿಪಿ, ಶುಗರ್ ಇದ್ದ ರಾಮಸ್ವಾಮಿ ಹಲ್ಲೆಯಿಂದ ಅಶಕ್ತರಾಗಿದ್ದರು. ಪೊಲೀಸರೇ ರಾಮಸ್ವಾಮಿಯನ್ನ ಆಸ್ಪತ್ರೆಗೆ ದಾಖಲಿಸಿದ್ರು. ನಂತರ ರಾಮಸ್ವಾಮಿ ಅವರ ಪತ್ನಿ ಹಾಗೂ ಮಗಳ ಬಳಿ ಬಂದು ಪೊಲೀಸರು ಬೆದರಿಕೆ ಹಾಕಿದ್ದಾರೆ. ನ್ಯಾಯಾಧೀಶರ ಮುಂದೆ ಹಲ್ಲೆ ವಿಚಾರ ಹೇಳಿದರೆ ಮಗಳನ್ನ ಶಾಶ್ವತವಾಗಿ ಜೈಲಿಗೆ ಕಳಿಸೋದಾಗಿ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನೂ ನ್ಯಾಯಾಧೀಶರ ಮುಂದೆ ನಿಂತಾಗ ರಾಮಸ್ವಾಮಿ ಕುಸಿದು ಬಿದ್ದಿದ್ದರು. ನಂತರ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ನಂತರ ಮನೆಗೆ ಮರಳಿದ್ದ ರಾಮಸ್ವಾಮಿ ಅವರು 3 ದಿನದ ಹಿಂದೆ ಮೃತಪಟ್ಟಿದ್ದಾರೆ. ಆದ್ರೆ ಪತಿ ಮೃತರಾಗಿದ್ದು ಪೊಲೀಸರ ಹಲ್ಲೆಯಿಂದ ಎಂದು ಪತ್ನಿ ಆರೋಪ ಮಾಡಿದ್ದಾರೆ..

ಇದನ್ನು ಓದಿ : Special news : ಭಾರತದ ಈ ಗ್ರಾಮದಲ್ಲಿ ಯುವತಿ ವಾರಕ್ಕೊಬ್ಬನ ಜೊತೆ ಲಿವ್ ಇನ್ ರಿಲೇಷನ್‌ಶಿಪ್’ನಲ್ಲಿರಬಹುದಂತೆ.!

ಪತಿ ಸಾವಿಗೆ ಕೋಣನಕುಂಟೆ ಇನ್ಸ್ಪೆಕ್ಟರ್ ಪಾಪಣ್ಣನೇ ಕಾರಣ ಎಂದು ಆರೋಪಿಸಿ ಮುಖ್ಯಮಂತ್ರಿಗೆ, ಪೊಲೀಸ್ ಆಯುಕ್ತರಿಗೆ ರಾಮಸ್ವಾಮಿ ಪತ್ನಿ ಮುನಿಯಮ್ಮ ದೂರು ನೀಡಿದ್ದಾರೆ. ಸದ್ಯ ಕುಟುಂಬಸ್ಥರ ಆರೋಪ ಸಂಬಂಧ ಎಸಿಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

ನಿನ್ನೆಯಷ್ಟೇ ಮೃತದೇಹ ಮರಣೋತ್ತರ ಪರೀಕ್ಷೆ ತನಿಖಾಧಿಕಾರಿ ಸಮ್ಮುಖದಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img