ಜನಸ್ಪಂದನ ನ್ಯೂಸ್, ಡೆಸ್ಕ್ : ಹನುಮಾನ್ ದೇವಾಲಯದಲ್ಲಿ ನಿರಂತರ 48 ಗಂಟೆ ಪ್ರದಕ್ಷಿಣೆ ಕಾಹುತ್ತಿರುವ ನಾಯಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.
ಪ್ರಾಣಿಗಳಲ್ಲಿಯೂ ಭಕ್ತಿ ಮತ್ತು ನಿಷ್ಠೆಯ ಭಾವನೆಗಳು ಕಾಣಿಸಿಕೊಳ್ಳುತ್ತವೆ ಎಂಬುದಕ್ಕೆ ಸಾಕ್ಷಿಯಂತಿರುವ ಘಟನೆಗಳು ಸಮಯಕ್ಕಾಗಾಗ ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಿವೆ.
ಇತ್ತೀಚೆಗೆ ಮಹಾರಾಷ್ಟ್ರದ ಶನಿ ಮಹಾತ್ಮ ದೇವಾಲಯದಲ್ಲಿ ಬೆಕ್ಕೊಂದು ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ ವೈರಲ್ ಆಗಿದ್ದ ಬಳಿಕ, ಇದೀಗ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಇಂತಹದ್ದೇ ಒಂದು ಅಪರೂಪದ ಘಟನೆ ಗಮನ ಸೆಳೆಯುತ್ತಿದೆ.
ಹನುಮಾನ್ ದೇವಾಲಯದಲ್ಲಿ 48 ಗಂಟೆ ಪ್ರದಕ್ಷಿಣೆ ಹಾಕಿದ ನಾಯಿ ವಿಡಿಯೋ :
ಪ್ರಾಣಿಗಳಿಗೂ ದೇವರ ಮೇಲೆ ಭಕ್ತಿ ಇದೆ ಎಂಬುದಕ್ಕೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಹನುಮಾನ್ ದೇವಾಲಯದಲ್ಲಿ ನಡೆದಿರುವ ಈ ಘಟನೆ ಸಾಕ್ಷಿಯಾಗಿದೆ. ಅನ್ನ, ನೀರು, ನಿದ್ರೆ ತ್ಯಜಿಸಿರುವ ನಾಯಿಯೊಂದು ಕಳೆದ 3-4 ದಿನಗಳಿಂದ ಹನುಮಂತನ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ… pic.twitter.com/sA8PufmuIy
— kannadaprabha (@KannadaPrabha) January 15, 2026
ಈ ದೃಶ್ಯವನ್ನು ಸ್ಥಳೀಯರು ದಾಖಲಿಸಿದ್ದು, ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಆಧಾರಿತವಾಗಿದೆ.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗೀನಾ ತೆಹಸಿಲ್ ವ್ಯಾಪ್ತಿಯ ನಂದಪುರ ಗ್ರಾಮದಲ್ಲಿರುವ ಪ್ರಾಚೀನ ಹನುಮಾನ್ ದೇವಾಲಯದಲ್ಲಿ ನಾಯಿಯೊಂದು ಕಳೆದ 48 ಗಂಟೆಗಳಿಗೂ ಅಧಿಕ ಕಾಲದಿಂದ ನಿಂತಿಲ್ಲದೆ ಹನುಮಂತನ ವಿಗ್ರಹದ ಸುತ್ತ ನಿರಂತರವಾಗಿ ಪ್ರದಕ್ಷಿಣೆ ಹಾಕುತ್ತಿರುವುದು ಭಕ್ತರು ಹಾಗೂ ಗ್ರಾಮಸ್ಥರನ್ನು ಅಚ್ಚರಿಗೊಳಿಸಿದೆ.
Dog : ಮಾಲೀಕನ ಸಾವು ; ಬಿಕ್ಕಿ ಬಿಕ್ಕಿ ಅತ್ತ ನಾಯಿಯ ಭಾವುಕ ದೃಶ್ಯ ವೈರಲ್.
ಸೋಮವಾರ ಬೆಳಗಿನ ಜಾವ ಸುಮಾರು 4 ಗಂಟೆಯಿಂದ ಆರಂಭಗೊಂಡ ಈ ದೃಶ್ಯ, ದೇವಾಲಯಕ್ಕೆ ಭೇಟಿ ನೀಡುತ್ತಿರುವ ಜನರ ಗಮನ ಸೆಳೆಯುತ್ತಿದ್ದು, ಈಗ ಈ ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಗ್ರಾಮಸ್ಥರ ಹೇಳಿಕೆ ಪ್ರಕಾರ, ಈ ಶ್ವಾನವು ಯಾವುದೇ ಆಕ್ರಮಣಕಾರಿ ನಡವಳಿಕೆ ತೋರಿಸದೇ, ಶಾಂತವಾಗಿ ದೇವಾಲಯದ ಆವರಣದಲ್ಲಿ ವಿಗ್ರಹದ ಸುತ್ತ ಸುತ್ತುತ್ತಲೇ ಇದೆ. ದೇವಾಲಯವನ್ನು ಬಿಟ್ಟು ಹೊರ ಹೋಗುವ ಪ್ರಯತ್ನವನ್ನೂ ಅದು ಮಾಡುತ್ತಿಲ್ಲ.
ನಾಯಿಯ ಈ ಅಸಾಮಾನ್ಯ ನಡವಳಿಕೆಯನ್ನು ಕೆಲವರು ಭಕ್ತಿಯ ಸಂಕೇತವಾಗಿ ನೋಡುತ್ತಿದ್ದರೆ, ಇನ್ನೂ ಕೆಲವರು ಇದನ್ನು ಸಹಜ ಪ್ರಾಣಿಯ ವರ್ತನೆಯೆಂದು ಪರಿಗಣಿಸುತ್ತಿದ್ದಾರೆ.
ಹಿಂದೂ ಧರ್ಮದಲ್ಲಿ ಎಲ್ಲಾ ಜೀವಿಗಳಿಗೂ ದೈವಿಕ ಮಹತ್ವವಿದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಶ್ವಾನವನ್ನು ಕಾಲಭೈರವನ ರೂಪವೆಂದು ಪೂಜಿಸುವ ಸಂಪ್ರದಾಯವೂ ಇದೆ. ಈ ಹಿನ್ನೆಲೆಯಲ್ಲಿ ಹನುಮಾನ್ ದೇವಾಲಯದಲ್ಲಿ ಶ್ವಾನದ ಈ ವರ್ತನೆಯನ್ನು ಕೆಲ ಭಕ್ತರು ಆಧ್ಯಾತ್ಮಿಕ ನಂಬಿಕೆಯೊಂದಿಗೆ ಸಂಪರ್ಕಿಸುತ್ತಿದ್ದಾರೆ.
ಈ ಅಪರೂಪದ ದೃಶ್ಯವನ್ನು ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳಿಂದ ಮಾತ್ರವಲ್ಲದೆ ದೂರದೂರಿನಿಂದಲೂ ಭಕ್ತರು ಆಗಮಿಸುತ್ತಿರುವುದು ಕಂಡುಬಂದಿದೆ. ಘಟನೆಯ ಮಾಹಿತಿ ಪಡೆದ ಸ್ಥಳೀಯ ಮುಖಂಡ ಅನೂಪ್ ಬಾಲ್ಮಿಕಿ ಅವರು ದೇವಾಲಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಇದು ನಂಬಿಕೆಯ ವಿಷಯವಾಗಿದ್ದು, ಯಾವುದೇ ರೀತಿಯ ಗೊಂದಲ ಅಥವಾ ಅಶಾಂತಿಗೆ ಅವಕಾಶ ನೀಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ದೇವಾಲಯದ ಸುತ್ತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತವೂ ಎಚ್ಚರಿಕೆ ವಹಿಸಿದೆ.
ಚಳಿಗಾಲದ ಹಿನ್ನೆಲೆ, ದೇವಾಲಯ ಸಮಿತಿ ಮತ್ತು ಗ್ರಾಮಸ್ಥರು ನಾಯಿಗೆ ತೊಂದರೆಯಾಗದಂತೆ ದೇವಾಲಯದ ಆವರಣದಲ್ಲಿ ತಾತ್ಕಾಲಿಕ ಆಶ್ರಯ ವ್ಯವಸ್ಥೆ ಮಾಡಿದ್ದು, ಚಳಿಯಿಂದ ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಜೊತೆಗೆ ಭಕ್ತರಿಗೆ ಅನುಕೂಲವಾಗುವಂತೆ ದೇವಾಲಯದ ವ್ಯವಸ್ಥೆಯನ್ನೂ ಸರಿ ಮಾಡಲಾಗಿದೆ.
Dog : ಮಾಲೀಕನ ಸಾವು ಸಹಿಸಲಾರದೆ ನಾಯಿ ಕೂಡ ಬಿಟ್ಟಿತು ಪ್ರಾಣ..!
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಂದಪುರ ಗ್ರಾಮದಲ್ಲಿರುವ ಹನುಮಾನ್ ದೇವಾಲಯದಲ್ಲಿ ನಡೆಯುತ್ತಿರುವ ಈ ಘಟನೆ ಈಗ ಸ್ಥಳೀಯ ಮಟ್ಟದಲ್ಲಿ ವಿಶೇಷ ಕುತೂಹಲ ಮತ್ತು ಚರ್ಚೆಯ ವಿಷಯವಾಗಿದ್ದು, ಧಾರ್ಮಿಕ ನಂಬಿಕೆ ಹಾಗೂ ಮಾನವ-ಪ್ರಾಣಿ ಸಂಬಂಧಗಳ ಕುರಿತು ಚರ್ಚೆಗೆ ಕಾರಣವಾಗಿದೆ.
Disclaimer : ಈ ವರದಿಯಲ್ಲಿ ಉಲ್ಲೇಖಿಸಲಾದ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳು, ಸ್ಥಳೀಯರ ಹೇಳಿಕೆಗಳು ಮತ್ತು ಸಾರ್ವಜನಿಕ ನಂಬಿಕೆಗಳ ಆಧಾರಿತವಾಗಿವೆ. ಇದನ್ನು ಧಾರ್ಮಿಕ ನಂಬಿಕೆ ಅಥವಾ ವೈಜ್ಞಾನಿಕ ದೃಢೀಕರಣವೆಂದು ಪರಿಗಣಿಸಬಾರದು. ಓದುಗರು ಸ್ವಂತ ವಿವೇಚನೆ ಬಳಸುವಂತೆ ವಿನಂತಿ.





