Thursday, April 24, 2025
spot_img
HomeGeneral NewsCharge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್​​ಫೋನ್ ಬ್ಲಾಸ್ಟ್ ಆಗಬಹುದು.?
spot_img
spot_img
spot_img

Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್​​ಫೋನ್ ಬ್ಲಾಸ್ಟ್ ಆಗಬಹುದು.?

- Advertisement -
WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಈಗಂತೂ ಸ್ಮಾರ್ಟ್ ಫೋನ್ ಎಲ್ಲರ ಕೈಯಲ್ಲಿರುತ್ತದೆ. ಆದರೆ Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್​​ಫೋನ್ ಬ್ಲಾಸ್ಟ್ ಆಗಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಿರಿ.

ಸ್ಮಾರ್ಟ್​​ಫೋನ್ ಚಾರ್ಜ್ ಮಾಡುವುದು ಎಲ್ಲರ ಬದುಕಿನ ದೈನಂದಿನ ಭಾಗವಾಗಿ (Daily part of life) ಬಿಟ್ಟಿದೆ. ಸ್ಮಾರ್ಟ್​​ಫೋನ್ ಬಳಕೆ ಮಾಡುವವರಲ್ಲಿ ಹೆಚ್ಚಿನವರಿಗೆ ಕಾಡುವ ಸಮಸ್ಯೆಯೆಂದರೆ ಬ್ಯಾಟರಿ ಸಮಸ್ಯೆ.

ಇದನ್ನು ಓದಿ : Video : ವಾಷಿಂಗ್ ಮಷಿನ್‍ನೊಳಗೆ ಕಲ್ಲು ಹಾಕಿದ ಯುವಕ ; ಆಮೇಲೆನಾಯ್ತು ಗೊತ್ತಾ?

ಎಷ್ಟೇ ಜಾಗರೂಕತೆಯಿಂದ ಇದ್ದರೂ ಸಹ ಸ್ಮಾರ್ಟ್​​ಫೋನ್ ಬ್ಯಾಟರಿ ಒಂದಲ್ಲಾ ಒಂದು ದಿನ ಅದರ ಅವಧಿ ಮುಗಿಯುತ್ತದೆ. ಬ್ಯಾಟರಿ ಹಾಳಾದಂತೆ ಮೊಬೈಲ್​ ಚಾರ್ಜ್ ಆಗುವುದು ಸಹ ನಿಧಾನವಾಗುತ್ತದೆ.

ನೀವು ಹೊರಗಿರುವಾಗ ಮತ್ತು ಚಾರ್ಜರ್ ನಿಮ್ಮೊಂದಿಗೆ ಇಲ್ಲದಿದ್ದಾಗ, ತೊಂದರೆ ಹೆಚ್ಚಾಗುತ್ತದೆ. ಇದರಿಂದಾಗಿ ಹಲವು ಪ್ರಮುಖ ಕೆಲಸಗಳನ್ನು ಸಹ ಮಾಡಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಫೋನಿನ ಬ್ಯಾಟರಿ ಸ್ವಲ್ಪ ಹೆಚ್ಚು ಬಾಳಿಕೆ ಬರುವಂತೆ ಹೇಗೆ ಮಾಡುವುದು ಎಂಬುದನ್ನು ತಿಳಿಯುವುದು ಅಗತ್ಯ.

ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!

* ಚಾರ್ಜ್ ಗೆ ಇಟ್ಟು ಮೊಬೈಲ್‌ನಲ್ಲಿ ವಿಡಿಯೋ ನೋಡುವುದು, ಗೇಮ್ ಆಡುವುದು, ಕರೆ ರಿಸೀವ್ ಮಾಡುವುದು ಹೆಚ್ಚು ಅಪಾಯಕಾರಿ. ಇದರಿಂದ ಫೋನ್‌ಗಳು ಹೆಚ್ಚು ಬಿಸಿಯಾಗುತ್ತವೆ. ಯಾವಾಗ ಬೇಕಾದರೂ ಸ್ಫೋಟಗೊಂಡು (blast) ಭಾರಿ ಅಪಾಯ ಸಂಭವಿಸಬಹುದು. ಇದನ್ನು ತಪ್ಪಿಸಿ.

* ಫೋನ್ ಪಡೆದ ಕೆಲವು ವರ್ಷಗಳ ನಂತರವೂ ಮೂಲ ಚಾರ್ಜಿಂಗ್ ಕೇಬಲ್ ಮತ್ತು ಪ್ಲಗ್ ಹೊಂದಿದ್ದರೆ ಅದನ್ನು ಬದಲಾಯಿಸುವುದು ಉತ್ತಮ. ಅಗ್ಗದ ಬದಲಿಗೆ ಹೆಚ್ಚು ಗುಣಮಟ್ಟದ ಚಾರ್ಜಿಂಗ್ ಕೇಬಲ್ ಮತ್ತು ಪ್ಲಗ್ ಖರೀದಿಸಿ (Buy a quality charging cable and plug).

ಇದನ್ನು ಓದಿ : ‌Real Hero : ವಿದ್ಯುತ್​ ಶಾಕ್​ನಿಂದ ಬಾಲಕನನ್ನು ರಕ್ಷಿಸಿದ ಯುವಕ, ವಿಡಿಯೋ ವೈರಲ್.!

* ಆಧುನಿಕ ಫೋನ್‌ಗಳು ಬಹುತೇಕವಾಗಿ ಪುನರ್ ಭರ್ತಿ ಮಾಡಬಹುದಾದ ಲಿಥಿಯಂ- ಐಯಾನ್ ಬ್ಯಾಟರಿಗಳನ್ನು ಬಳಸುತ್ತವೆ. ಈ ಬ್ಯಾಟರಿಗಳಿಗೆ ಹೆಚ್ಚು ಸಂಗ್ರಹ ಸಾಮರ್ಥ್ಯ ಇದೆ. ಆದರೆ ಇವು ಕೆಲವು ಮಿತಿಗಳನ್ನು ಹೊಂದಿವೆ. ನಿರ್ದಿಷ್ಟವಾಗಿ ಹೇಳುವುದಾದರೆ ಸಂಪೂರ್ಣವಾಗಿ ಬರಿದಾಗಲು ಅಥವಾ ಈಗಾಗಲೇ ತುಂಬಿರುವಾಗ ಚಾರ್ಜ್ ಆಗಲು ಈ ಬ್ಯಾಟರಿಗಳು ಸೂಕ್ತವಲ್ಲ.

* ನಿರ್ದಿಷ್ಟ ಗಂಟೆಗಳ ಕಾಲ ಮಾತ್ರ ಫೋನ್ ಅನ್ನು ಚಾರ್ಜ್ ಮಾಡಿ. ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಚಾರ್ಜ್ (Do not charge for longer than the specified time) ಮಾಡಲು ಇಡದಿರಿ. ಬ್ಯಾಟರಿ ಶೇ. 100 ಆದಾಗ ಕೂಡಲೇ ಅನ್‌ ಪ್ಲಗ್ ಮಾಡಿ.

ಇದನ್ನು ಓದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!

ಬಹಳಷ್ಟು ಫೋನ್‌ಗಳು ತುಂಬಿದ ಅನಂತರ ಚಾರ್ಜ್ ಆಗುವುದನ್ನು ನಿಲ್ಲಿಸುವ ಸಿಸ್ಟಮ್‌ಗಳನ್ನು ಒಳಗೊಂಡಿವೆ. ಆದರೆ ಇವುಗಳ ಕಾರ್ಯ ವಿಧಾನದ ಮೇಲೆ ನೀವು ಅನ್‌ ಪ್ಲಗ್ ಮಾಡದೇ ಇದ್ದರೆ ಋಣಾತ್ಮಕ ಪರಿಣಾಮ ಬೀರಬಹುದು.

* ಮೊಬೈಲ್‌ನಲ್ಲಿ ಕೆಲವು ಆಪ್‌ಗಳು ಮೊಬೈಲ್ ಬ್ಯಾಟರಿ ಲೈಫ್ ಅನ್ನು ಉಳಿಸುತ್ತದೆ. ಇಂತಹ ಆಪ್‌ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ. ಸಾಧ್ಯವಾದಷ್ಟು ಮೊಬೈಲ್‌ನಲ್ಲಿ ಬ್ಯಾಟರಿ ಸೇವ್ ಮೋಡ್ ಬಳಸಿ. ಅನಗತ್ಯವಾದ ಆಪ್‌ಗಳ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ.

ಇದನ್ನು ಓದಿ : 500 ರೂ. ಉತ್ತರ ಪತ್ರಿಕೆಯಲ್ಲಿಟ್ಟು, ಪಾಸಾದ್ರಷ್ಟೇ ಹುಡುಗಿ ಲವ್ ಮಾಡುತ್ತಾಳೆ ಎಂದ SSLC ವಿದ್ಯಾರ್ಥಿ.!

* ಇನ್ನು ಪೋನ್ ನ್ನು ಬೆಚ್ಚಗಿನ ಸ್ಥಳದಲ್ಲಿ ಇಟ್ಟು ಚಾರ್ಜ್ ಮಾಡಬೇಡಿ (Do not keep in a warm place). ಯಾಕೆಂದರೆ ಬ್ಯಾಟರಿಯ ಆರೋಗ್ಯಕ್ಕಿಂತ ನಿಮ್ಮ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ನೀಡಿ. ಫೋನ್‌ಗಳನ್ನು ಹೆಚ್ಚು ಚಾರ್ಜ್ ಮಾಡುವುದರಿಂದ ಬ್ಯಾಟರಿ ತುಂಬಿ ಗಮನಾರ್ಹವಾದ ಉಷ್ಣತೆಗೆ ಕಾರಣವಾಗುತ್ತದೆ. ಇದು ಮೊಬೈಲ್ ಸ್ಫೋಟಕ್ಕೂ ಕಾರಣವಾಗಬಹುದು. ಹೀಗಾಗಿ ಮೊಬೈಲ್ ಅನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟು ಚಾರ್ಜ್ ಮಾಡುವುದು ಒಳಿತು.

ಹಿಂದಿನ ಸುದ್ದಿ : ಮನೆ ಬಿಟ್ಟು ಓಡಿಹೋಗಿ ಮದುವೆಯಾದ ಸರಿಗಮಪ ಖ್ಯಾತಿಯ Singer ಪೃಥ್ವಿ ಭಟ್.!

ಜನಸ್ಪಂದನ ನ್ಯೂಸ್, ಬೆಂಗಳೂರು : ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮನೆ ಬಿಟ್ಟು ಓಡಿಹೋಗಿ ಮದುವೆಯಾಗಿದ್ದಾರೆ ಎಂದು ಆಕೆಯ ಮನೆಯವರು ಗಂಭೀರ ಆರೋಪ ಮಾಡಿದ್ದಾರೆ.

ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ (Sarigamapa reality show) ಮೂಲಕ ಪೃಥ್ವಿ ಭಟ್ ಬೆಳಕಿಗೆ ಬಂದ ಗಾಯಕಿಯಾಗಿದ್ದು, ಇವರು ಗಡಿನಾಡು ಕಾಸರಗೋಡು ಮೂಲದವರು.

ಇದನ್ನು ಓದಿ : Ex ಲವರ್‌ನಿಂದ ಬ್ಲ್ಯಾಕ್‌ಮೇಲ್‌ ; ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ.!

ಕನ್ನಡ ಸಿನಿಮಾಗಳು, ಸಾಕಷ್ಟು ಸ್ಟೇಜ್ ಶೋಗಳಲ್ಲಿ ಹಾಡಿರುವ ಪೃಥ್ವಿ ಭಟ್ ಈಗ ದಿಢೀರ್ ಆಗಿ ಮದುವೆಯಾಗಿದ್ದಾರೆ.

ಗಾಯಕಿ ಪೃಥ್ವಿ ಭಟ್, ಅಭಿಷೇಕ್ ಎನ್ನುವ ಯುವಕನೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ (Married in a temple) ಎಂದು ತಿಳಿದುಬಂದಿದೆ. ಮಗಳ ಮದುವೆ ವಿಚಾರ ತಿಳಿದು ಪೋಷಕರು ಆಘಾತಗೊಂಡಿದ್ದಾರೆ.

ಇದನ್ನು ಓದಿ : Special news : ಪ್ರೀತಿಸಿದವರಿಗೆ ಮೋಸ ಮಾಡ್ತಾರಂತೆ ಈ 5 ರಾಶಿಯವರು.!

ಆ ಹುಡುಗನನ್ನು ಮದುವೆಯಾಗುವುದಿಲ್ಲ ಎಂದು ದೇವರ ಮುಂದೆ ನಿಂತು ಪ್ರಮಾಣ ಮಾಡಿದ್ದ ಮಗಳು, ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ನನ್ನ ಮಗಳ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಲಾಗಿದೆ (Vashikaran Vidya Experiment). ಇದರ ಹಿಂದೆ ಜೀ ಕನ್ನಡ ರಿಯಾಲಿಟಿ ಜ್ಯೂರಿ ನರಹರಿ ದೀಕ್ಷಿತ್ ಕೈವಾಡವಿದೆ ಎಂದು ಪೃಥ್ವಿ ಭಟ್ ತಂದೆ ಆರೋಪ ಮಾಡಿದ್ದಾರೆ.

ಮಾರ್ಚ್ 27 ರಂದು ಇಬ್ಬರ ವಿವಾಹವಾಗಿದೆ. ಮದುವೆಯಾಗಿ 20 ದಿನಗಳಾಗಿದ್ದು, ಇಲ್ಲಿಯವರೆಗೆ ಅವಳಿಗೆ ನಮ್ಮ ನೆನಪಾಗಲಿಲ್ಲ. ರೆಕಾರ್ಡಿಂಗ್ ಗೆ ಅಂತ ನಾನೇ ಅವಳನ್ನು ಸ್ಟುಡಿಯೋಗೆ ಬಿಟ್ಟು ಬಂದಿದ್ದೆ. ಮಧ್ಯಾಹ್ನದ ಹೊತ್ತಿಗೆ ಪೊಲೀಸರು ಕಾಲ್ ಮಾಡಿ ಹೇಳಿದ್ರು ಪೃಥ್ವಿ ಭಟ್ ನಿಮ್ಮ ಮಗಳಾ? ಅವಳು ಅಭಿಷೇಕ್ ಎನ್ನುವವರನ್ನು ಮದುವೆಯಾಗಿ ಇಲ್ಲಿಗೆ ಬಂದಿದ್ದಾರೆ. ನಿಮ್ಮ ಮನೆಗೆ ಬರ್ತಾರಂತೆ ಅಂತ ಹೇಳಿದ್ರು. ಆಗ ನಾವು ಮನೆಗೆ ಬರುವುದು ಬೇಡ. ಇಲ್ಲಿಗೆ ಬಂದರೆ ಗಲಾಟೆಯಾಗುತ್ತದೆ ಎಂದೆವು.

ಇದನ್ನು ಓದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!

ಅದಾದ ಬಳಿಕ ಒಂದೆರಡು ಸಲ ಕಾಲ್ ಮಾಡಿ ತಪ್ಪಾಯ್ತು ಅಪ್ಪ, ಅಮ್ಮ ಎಂದು ಹೇಳಿದ್ದಳು. ಅದು ಬಿಟ್ಟರೆ ಆಕೆ ನಮ್ಮ ಸಂಪರ್ಕದಲ್ಲಿಲ್ಲ ಎಂದು ಪೃಥ್ವಿ ಭಟ್ ತಂದೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.

WhatsApp Channel Join Now
Telegram Group Join Now
Instagram Account Follow Now
- Advertisement -
spot_img
spot_img
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments