ಜನಸ್ಪಂದನ ನ್ಯೂಸ್, ಬೆಂಗಳೂರು : ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ರಾಮನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಜಿಲ್ಲೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿಗಳಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ಇದನ್ನು ಓದಿ : ಮಹಿಳೆಯ ಬಟ್ಟೆ ಒಣಗಿಸುವ ಹೊಸ technique ನೋಡಿ ನೆಟ್ಟಿಗರು ಪುಲ್ ಖುಷ್ ; ವಿಡಿಯೋ ವೈರಲ್.!
ಹುದ್ದೆ ವಿವರ :
- ರಾಮನಗರ- 100.
- ಚನ್ನಪಟ್ಟಣ – 25.
- ಕನಕಪುರ – 25.
- ಮಾಗಡಿ – 25 ಹೀಗೆ ಒಟ್ಟು 175 ಹುದ್ದೆಗಳು.
ವಿದ್ಯಾರ್ಹತೆ :
- ಅಭ್ಯರ್ಥಿಗಳು ಕನಿಷ್ಠ ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು.
- ವಸ್ತು ಸ್ಥಿತಿಯ ಮತ್ತು ಪರಿಸ್ಥಿತಿಯ ವಿಷಯಗಳನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳುವವರಾಗಿರಬೇಕು.
- ಈ ಹುದ್ದೆಗೆ ನಿವೃತ್ತ ಶಿಕ್ಷಕರು, ನಿವೃತ್ತ ಸರ್ಕಾರಿ ನೌಕರರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತರು, ಕಾನೂನು ವಿದ್ಯಾರ್ಥಿಗಳು, ರಾಜಕೀಯವಲ್ಲದ ಸಂಘಗಳ ಸದಸ್ಯರು. ಮತ್ತು
- ಮಹಿಳಾ ಸ್ವಯಂ ಸಂಘಗಳ ಪ್ರತಿನಿಧಿಗಳು ಅರ್ಜಿ ಸಲ್ಲಿಸಬಹುದು.
(ಈ ಹುದ್ದೆಗಳನ್ನು ಮೂರು ವರ್ಷದ ಗುತ್ತಿಗೆ ಅವಧಿಗೆ ಗೌರವಧನದ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು.)
ಇದನ್ನು ಓದಿ : ಮಗಳ ಖಾಸಗಿ ವಿಡಿಯೋ Viral ಮಾಡಿದ ತಂದೆ.!
ಅರ್ಜಿ ಸಲ್ಲಿಕೆ :
- ಅಭ್ಯರ್ಥಿಗಳು ಆಫ್ಲೈನ್ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
- ನಿಗದಿತ ಅರ್ಜಿ ಸಲ್ಲಿಕೆಯೊಂದಿಗೆ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಅಗತ್ಯ ವಿದ್ಯಾರ್ಹತೆ ದಾಖಲೆಯೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ :
ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯದ ಆವರಣ, ರಾಮನಗರ- 562159.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಜುಲೈ 20, 2024 ಆಗಿದೆ.
ಪ್ರಮುಖ ಲಿಂಕ್ :
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಕುರಿತು ramanagara.dcourts.gov.in ಭೇಟಿ ನೀಡಿ.
ಇದನ್ನು ಓದಿ : Health : ನಾಲಿಗೆಯ ಬಣ್ಣವೇ ಹೇಳುತ್ತೆ ನಿಮ್ಮ ಆರೋಗ್ಯದ ಬಗ್ಗೆ.!
ಅಧಿಸೂಚನೆ :