ಸೋಮವಾರ, ಜನವರಿ 19, 2026

Janaspandhan News

HomeCrime NewsAccident : ಕಾರು – ಟ್ರ್ಯಾಕ್ಟರ್ ಡಿಕ್ಕಿ ; ಸ್ಥಳದಲ್ಲಿಯೇ ನಾಲ್ವರು ಯುವಕರ ದುರ್ಮರಣ.!
spot_img
spot_img

Accident : ಕಾರು – ಟ್ರ್ಯಾಕ್ಟರ್ ಡಿಕ್ಕಿ ; ಸ್ಥಳದಲ್ಲಿಯೇ ನಾಲ್ವರು ಯುವಕರ ದುರ್ಮರಣ.!

ಜನಸ್ಪಂದನ ನ್ಯೂಸ್‌, ಬಾಗಲಕೋಟೆ : ಸಿದ್ದಾಪುರ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತ (Accident) ದಲ್ಲಿ ನಾಲ್ವರು ಯುವಕರು ದುರ್ಮರಣ ಹೊಂದಿರುವ ದಾರುಣ ಘಟನೆ ವರದಿಯಾಗಿದೆ. ಬುಧವಾರ ಮಧ್ಯರಾತ್ರಿ ಸುಮಾರು 12.30 ಗಂಟೆಗೆ, ಕಬ್ಬು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್‌ಗೆ ಕಾರು ರಭಸವಾಗಿ ಹಿಂಭಾಗದಿಂದ ಡಿಕ್ಕಿ ಹೊಡೆಯುವುದರಿಂದ ಘಟನೆ ಸಂಭವಿಸಿದೆ.

ಈ ಅಪಘಾತ (Accident) ದಲ್ಲಿ ವಿಶ್ವನಾಥ್ (17), ಪ್ರವೀಣ್ (22), ಗಣೇಶ (20), ಪ್ರಜ್ವಲ್ (17) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಜಮಖಂಡಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.

ಇದ್ನು ಓದಿ : Wife ಹತ್ಯೆ ಪ್ರಕರಣ : ಶವದೊಂದಿಗೆ ಸೆಲ್ಫಿ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ ಪತಿ.

ತಡರಾತ್ರಿ ಸ್ನೇಹಿತರೊಂದಿಗೆ ಶಿರೋಳ ಕಾಡಸಿದ್ಧೇಶ್ವರ ದೇವರ ಜಾತ್ರೆಗೆ ತೆರಳುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆಂದು ಮಾಹಿತಿ ಲಭ್ಯವಾಗಿದೆ. ಕಾರು ಹಾಗೂ ಟ್ರ್ಯಾಕ್ಟರ್ ಸಂಪೂರ್ಣ ನಜ್ಜುಗುಜ್ಜಾಗಿರುವುದನ್ನು ನೋಡಿದರೆ ಅಪಘಾತ (Accident) ದ ತೀವ್ರತೆ ಬಗ್ಗೆ ತಿಳಿದು ಬರುತ್ತದೆ.

ಅಪಘಾತ (Accident) ದ ನಂತರ ನಾಲ್ವರು ಯುವಕರ ಮೃತದೇಹಗಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಜಮಖಂಡಿ ಗ್ರಾಮೀಣ ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.


ಬೆಳಗಾವಿ : 13 ವರ್ಷದ Girl ಮೇಲೆ ಲೈಂಗಿಕ ದೌರ್ಜನ್ಯ ; ಇಬ್ಬರು ಆರೋಪಿಗಳು ಪರಾರಿ.

minor girl sexual-assault

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮಾನವೀಯತೆ ಮರೆತ ರೀತಿಯಲ್ಲಿ ನಡೆದ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ಅಪ್ರಾಪ್ತ ಬಾಲಕಿ (Girl) ಯ ಮೇಲೆ ಇಬ್ಬರು ಆರೋಪಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಘಟನೆ ನವೆಂಬರ್ 23 ರಂದು ನಡೆದರೂ, ಆರೋಪಿಗಳು ಬಾಲಕಿಯ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದ ಕಾರಣ, ದೂರು ನವೆಂಬರ್ 30ರಂದು ದಾಖಲಿಸಲಾಗಿದೆ.

ಘಟನೆ ವಿವರಗಳು :

ಬಾಲಕಿ (Girl) ಮನೆಯ ಹೊರಗೆ ಸುಮಾರು 300 ಮೀಟರ್ ದೂರದಲ್ಲಿರುವ ಹಿಟ್ಟಿನ ಗಿರಣಿಗೆ ಹಿಟ್ಟು ಬೀಸಲು ಹೋಗುತ್ತಿದ್ದಳು. ಈ ವೇಳೆ ಇಬ್ಬರು ಆರೋಪಿಗಳಾದ ಮಣಿಕಂಠ ಮತ್ತು ಈರಣ್ಣ ಎಂಬುವವರು ಆಕೆ (Girl) ಯನ್ನು ಹಿಂಬಾಲಿಸಿ, ಹತ್ತಿರದ ಕಬ್ಬಿನ ಗದ್ದೆಗೆ ಎಳೆದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ದೌರ್ಜನ್ಯ ಎಸಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನು ಓದಿ : ಅಕ್ರಮ ಸಂಬಂಧದ ಅನುಮಾನ : ಯುವಕನನ್ನು ರಸ್ತೆಗೆ ಎಳೆದೊಯ್ದು ಥಳಿಸಿ Murder.

ತಡವಾದ ದೂರು :

ಘಟನೆ ನಡೆದ ಕೂಡಲೇ ಬಾಲಕಿ (Girl) ತನ್ನ ಕುಟುಂಬಕ್ಕೆ ಮಾಹಿತಿ ನೀಡಿದರೂ, ಆರೋಪಿ ಕುಟುಂಬಕ್ಕೆ ಜೀವ ಬೆದರಿಕೆ ನೀಡಿರುವ ಕಾರಣ, ದೂರು ತಡವಾಗಿ ಮುರಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಘಟನೆ ನಡೆದ 9 ದಿನಗಳ ನಂತರ, ಕುಟುಂಬ ಧೈರ್ಯ ಮಾಡಿ ಡಿ.01 ರಂದು ಪೋಕ್ಸೋ ಕಾಯ್ದೆಯಡಿ ದೂರು ಸಲ್ಲಿಸಿದೆ.

ಪೊಲೀಸ್ ಕ್ರಮಗಳು :

ದೂರು ದಾಖಲಾಗುತ್ತಲೇ, ಮುರಗೋಡ ಪೊಲೀಸ್ ಠಾಣೆ ತನಿಖೆ ಆರಂಭಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲು ವಿಶೇಷ ಶೋಧ ಕಾರ್ಯವನ್ನು ಮುಂದುವರೆಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ಇದನ್ನು ಓದಿ : ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ Wife.

ಸಾರ್ವಜನಿಕರು ಅಪ್ರಾಪ್ತ ಬಾಲಕಿ (Girl) ಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Courtesy : Suvarna News

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments